ಯಾರೇ ಕರೆದರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಮಾಜಿ ಸಚಿವ ಮಾಧುಸ್ವಾಮಿ
'ಬಿ' ಫಾರಂ ಬದಲಿಸಿ ಕಾಂಗ್ರೆಸ್‌ನವರು ಕರೆದರೂ, ಬಿಜೆಪಿಯವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ತುಮಕೂರು (ಮಾ.21): 'ಬಿ' ಫಾರಂ ಬದಲಿಸಿ ಕಾಂಗ್ರೆಸ್‌ನವರು ಕರೆದರೂ, ಬಿಜೆಪಿಯವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಯಾರೋ ನೋಡಿ ಬಂದ ಹೆಣ್ಣನ್ನ ನಾನು ಮದುವೆಯಾಗುವುದಿಲ್ಲ. ನಾನು ಯಾರಿಗೂ ಕಾಂಗ್ರೆಸ್‌ಗೆ ಬರುತ್ತೀನಿ ಅಂತಾ ಹೇಳಿಲ್ಲ, ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೀನಿ. ಬಿಜೆಪಿಯಲ್ಲಿ ಅಶೋಕ್ ಬಂದಿದ್ದು ನಿಜ. ಜಯರಾಮ್ ಅವರನ್ನು ಕರೆದುಕೊಂಡು ಗೋಪಾಲಯ್ಯ ಅವರೆಲ್ಲ ಬಂದು ಹೋದರು. ನನಗೆ ಅಸಮಾಧಾನ ಯಡಿಯೂರಪ್ಪ ಮೇಲೆ ಎಂದೆ ಎಂದರು.
ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡೋದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರು ತೊಂದರೆ ಇರಲಿಲ್ಲ. ಸೋಮಣ್ಣ ಮೇಲೆ ಬೇಜಾರಿಲ್ಲ. ಅವರು ರಾಜ್ಯ ಸಭೆಗೆ ಹೋಗುತ್ತಾರೆ ಅಂದಾಗ ಸಂತೋಷಪಟ್ಟಿದ್ದೆ. ಆದರೆ, ಯಾರೋ ಇಲ್ಲಿ ದುಡ್ಡು ತಂದು ಎಲೆಕ್ಷನ್ ನಿಲ್ಲುತ್ತಾರೆ ಎಂದರೆ ಹೇಗೆ ಒಪ್ಪುವುದು ಎಂದರು. ಆದರೆ ಇವರು ಜಾತಿ ಇದೆ ಅನ್ನೋ ಕಾರಣಕ್ಕೆ ಎಲ್ಲಾ ಕಡೆ ಹೋಗುತ್ತಿದ್ದರೆ ಸ್ಥಳೀಯರ ಸ್ಥಿತಿ ಹೊರಗಿನವರಿಗೆ ಪ್ರೋತ್ಸಾಹ ನೀಡುವ ಮನಸ್ಥಿತಿ ನನ್ನಲ್ಲಿಲ್ಲ ಎಂದರು. ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ಅವರ ಬಳಿಯೂ ಎಲ್ಲಾ ವಿಚಾರ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.
ಹಳೆಯದಾಗುತ್ತಿರುವ ಮಿಗ್-29ಕೆ: ಹೊಸ ಯುದ್ಧ ವಿಮಾನಗಳಿಗೆ ನೌಕಾಪಡೆಯ ಹುಡುಕಾಟ
ಯಡಿಯೂರಪ್ಪ ವಿರುದ್ಧ ಮಾಧುಸ್ವಾಮಿ ಅಸಮಾಧಾನ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಪರವಾಗಿ ಟಿಕೆಟ್ ಕೊಡಿಸಲು ಹೋರಾಟ ಮಾಡಿಲ್ಲ ಎಂಬ ನೋವು ನನಗಿದೆ ಎಂದು ಎನ್ನುವ ಮೂಲಕ ಮಾಜಿ ಸಚಿವ ಮಾಧುಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ ಅವರು, ಯಡಿಯೂರಪ್ಪ ಅವರು ಎರಡು, ಮೂರು ಸಲ ನನ್ನನ್ನು ಕರೆಸಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡು ಎಂದರು. ಆಗ ನಾನು ಇಂತವರು ನನಗೆ ಸಹಕರಿಸುವುದಿಲ್ಲ ಎಂದಿದ್ದಕ್ಕೆ ನಾವು ಅವರನ್ನ ಸಮಾಧಾನ ಮಾಡುವುದಾಗಿಯೂ ತಿಳಿಸಿದ್ದರು. ಇಷ್ಟೆಲ್ಲಾ ಆದ ಮೇಲೂ ಇಲ್ಲಿ ಇರಬೇಕಾ ಬೇಡ್ವಾ ಅನ್ನುವ ಚಿಂತನೆ ಆಗಿದೆ ಎಂದರು.
ಕಾರ್ಯಕರ್ತರನ್ನು ಕರೆದು ಅವತ್ತಿನಿಂದ ಇವತ್ತಿನವರೆಗೆ ಆಗಿರುವುದನ್ನು ಚರ್ಚಿಸಿ ಯಾವ ದಿಕ್ಕಿನಲ್ಲಿ ಹೋದರೆ ಅನುಕೂಲ ಆಗುತ್ತೆ ಅನ್ನೋದನ್ನ ತಿಳಿದುಕೊಳ್ಳುವುದಾಗಿ ತಿಳಿಸಿದರು. ಕಾಂಗ್ರೆಸ್ ಗೆ ಹೋದರೆ ಸೇಪ್ ಜೋನ್ ಅಲ್ಲ. ಇಲ್ಲಿ ಇರುವುದು ಸೇಫ್ ಅಂತ ನಾನು ಅಂದುಕೊಂಡಿಲ್ಲ. ಮುಂದಿನ ನಡಿಗೆ ಹೇಗೆ ಅಂತ ನಮಗೆ ಅರ್ಥ ಆಗಿಲ್ಲ. ಅಂದರೆ ಪಬ್ಲಿಕ್ಸ್ ಜಡ್ಜ್ ಮೆಂಟ್ ಮಾಡ್ತಾರೆ. ನಾನು ಯಾವ ದಾರಿಗೆ ಹೋಗಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇನೆ. ಅದಕ್ಕೋಸ್ಕರ ಐದಾರು ದಿನ ಟೈಮ್ ತಗೊಂಡಿದಿನಿ ಎಂದರು.
ಯುದ್ಧ ನಿಲ್ಲಿಸಿ: ಪುಟಿನ್, ಝೆಲೆನ್‌ಸ್ಕಿಗೆ ಪ್ರಧಾನಿ ಮೋದಿ ಮತ್ತೊಮ್ಮೆ ಕಿವಿಮಾತು!
ಚುನಾವಣಾ ಪ್ರಕ್ರಿಯೆಗಳು ಶುರುವಾದ ಮೇಲೆ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಆಗ ಏನ್ ಮಾಡೋದು ಅಂತ ತೀರ್ಮಾನ ಮಾಡುವುದಾಗಿ ತಿಳಿಸಿದರು. ನಮ್ಮವರೆಲ್ಲಾ ಅವಮಾನ ಆದರೂ ಪರವಾಗಿಲ್ಲ ಸಹಿಸಿಕೊಂಡು ಇರಿ ಅಂದರೆ ಇರುತ್ತೇನೆ. ಅವಮಾನ ಸಹಿಸೋಕೆ ಆಗುವುದಿಲ್ಲ ಬೇರೆ ದಿಕ್ಕು ನೋಡಿಕೊಳ್ಳಿ ಅಂದರೆ ನೋಡಿಕೊಳ್ಳುವುದಾಗಿ ತಿಳಿಸಿದರು. ತಕ್ಷಣಕ್ಕೆ ನಾವು ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ಪಕ್ಷ ನಮಗೇನು ಕೆಟ್ಟದ್ದು ಮಾಡಿಲ್ಲ. ಬೇರೆ ಕಡೆ ಹೋಗುವ ಬಗ್ಗೆ ಯೋಚನೆ ಮಾಡಿದ್ದು ನಿಜ. ಒಂದೆರಡು ತಿಂಗಳ ಹಿಂದೆ ಸರಿಯಾದ ರೆಸ್ಪಾನ್ಸ್ ಬಂದಿಲ್ಲ. ಯಡಿಯೂರಪ್ಪ ನನಗೆ ಹೇಳಿದ ಮೇಲೆ ನಾನು ಟಿಕೆಟ್ ಅಕಾಂಕ್ಷಿ ಅಂತ ಹೇಳಿದ್ದು ಎಂದರು.