'ರಾಜಕಾರಣಿಗಳು ರಾಜಕೀಯ ಮಾಡದೆ ಪಾನಿಪೂರಿ ಮಾರಬೇಕೇ?' ಬದರಿ ಶಂಕರಾಚಾರ್ಯರ ಹೇಳಿಕೆಗೆ ಕಂಗನಾ ತಿರುಗೇಟು!

'ಉದ್ದವ್ ಠಾಕ್ರೆ ದ್ರೋಹದ ಬಲಿಪಶು, ದ್ರೋಹ ಮಾಡುವವರು ಹಿಂದುಗಳಲ್ಲ’ ಎಂದು ಬದರಿ ಶಂಕರಾಚಾರ್ಯರ ಹೇಳಿಕೆಗೆ ಸಂಸದೆ ಕಂಗನಾ ರಣಾವತ್, 'ರಾಜಕಾರಣಿಗಳು ರಾಜಕಾರಣ ಮಾಡದೇ ಪಾನಿಪೂರಿ ಮಾರಬೇಕೇ?' ಎಂದು ತಿರುಗೇಟು ನೀಡಿದ್ದಾರೆ.

will he sell golgappa Kangana Ranaut on shankaracharyas remark on ekanath shinde rav

ದೆಹಲಿ (ಜು.19): 'ಉದ್ದವ್ ಠಾಕ್ರೆ ದ್ರೋಹದ ಬಲಿಪಶು, ದ್ರೋಹ ಮಾಡುವವರು ಹಿಂದುಗಳಲ್ಲ’ ಎಂದು ಬದರಿ ಶಂಕರಾಚಾರ್ಯರು ಇತ್ತೀಚಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಉದ್ದೇಶಿಸಿ ನೀಡಿದ್ದ ಹೇಳಿಕೆಗೆ ಬಿಜೆಪಿ ಸಂಸದೆ , ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ‘ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ ಪಾನಿಪುರಿ ಮಾರಬೇಕೆ?’ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಂಗನಾ(kangana ranaut)‘ರಾಜಕಾರಣದಲ್ಲಿ ಮೈತ್ರಿ, ಒಪ್ಪಂದಗಳು, ಮತ್ತು ಪಕ್ಷದ ವಿಭಜನೆ ಹೊಂದಿರುವುದು ತೀರಾ ಸಾಮಾನ್ಯವಾಗಿದೆ ಮತ್ತು ಸಂವಿಧಾನಾತ್ಮಕವಾಗಿದೆ. ಕಾಂಗ್ರೆಸ್‌ ಪಕ್ಷವು 1907ರಲ್ಲಿ ವಿಭಜನೆಯಾಯಿತು. 1971ರಲ್ಲಿ ಮತ್ತೊಮ್ಮೆ ವಿಭಜನೆ ಆಯಿತು. ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ, ಪಾನಿಪುರಿ ಮಾರಬೇಕೆ?’ ಎಂದು ಬರೆದುಕೊಂಡಿದ್ದಾರೆ.

ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ: ಭಾಗ್ವತ್‌

ಬದರಿ ಶಂಕರಾಚಾರ್ಯ(Swami Avimukteshwaranand Saraswati) ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಕಂಗನಾ ‘ಶಂಕರಾಚಾರ್ಯ ಜೀ ಅವರು ತಮ್ಮ ಪದಗಳನ್ನು, ಪ್ರಭಾವವನ್ನು, ಧಾರ್ಮಿಕ ಶಿಕ್ಷಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ರಾಜನು ತನ್ನ ಪ್ರಜೆಗಳನ್ನು ಶೋಷಿಸಲು ಪ್ರಾರಂಭಿಸಿದರೆ ದೇಶದ್ರೋಹವು ಅಂತಿಮ ಧರ್ಮವೆಂದು ಧರ್ಮವೂ ಹೇಳುತ್ತದೆ. ಏಕನಾಥ್ ಶಿಂಧೆಯವರನ್ನು ದ್ರೋಹಿ ಎಂದು ಕರೆದಿರುವುದು ನಮ್ಮೆಲ್ಲರ ಮನಸ್ಸನ್ನು ಘಾಸಿಗೊಳಿಸಿದೆ’ ಎಂದಿದ್ದಾರೆ.

Latest Videos
Follow Us:
Download App:
  • android
  • ios