ಸಿಎಂ ಹೆಸರು ಬಂದ್ರೆ ನನ್ನ ಹೆಸರೇ ಫಸ್ಟ್‌, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು?: ಯತ್ನಾಳ್

ಬಿಜೆಪಿಯಲ್ಲಿ ಒಳ್ಳೆಯ ಮನುಷ್ಯರನ್ನು ಸಿಎಂ ಮಾಡಬೇಕು. ದೇವರು ಆದೇಶ ಕೊಟ್ಟರೆ ನಾನೇ ಸಿಎಂ ಆಗೋದು. ಆಗದೇ ಹೋದರೆ ಮನಸಿಗೆ ಹಳಹಳಿ ಮಾಡಿಕೊಳ್ಳೋದಿಲ್ಲ. ಆತ್ಮಹತ್ಯೆ ಮಾಡಿಕೊತ್ತೇನಿ, ಪ್ರಾಣ ಕಳಕೊತೇನಿ ಅಂತೇನು ಸುಡುಗಾಡ ಏನೂ ಇಲ್ಲ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್

Why should I not become Chief Minister Says Vijayapura BJP MLA Basanagouda Patil Yatnal grg

ಬಾಗಲಕೋಟೆ(ಡಿ.08):  ನಾನ್ಯಾಕೆ ರಾಜ್ಯದ ಸಿಎಂ ಆಗಬಾರದು. ನನ್ನಲ್ಲೇ ನು ಕೊರತೆ ಐತಿ. ಪಕ್ಷದಲ್ಲಿ ಪ್ರಾಮಾಣಿ ಕರನ್ನ ಸಿಎಂ ಮಾಡಬೇಕು ಅಂತ ಬಂದರೆ ನನ್ನ ಹೆಸರೇ ಫಸ್ಟ್ ಇರಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಳ್ಳೆಯ ಮನುಷ್ಯರನ್ನು ಸಿಎಂ ಮಾಡಬೇಕು. ದೇವರು ಆದೇಶ ಕೊಟ್ಟರೆ ನಾನೇ ಸಿಎಂ ಆಗೋದು. ಆಗದೇ ಹೋದರೆ ಮನಸಿಗೆ ಹಳಹಳಿ ಮಾಡಿಕೊಳ್ಳೋದಿಲ್ಲ. ಆತ್ಮಹತ್ಯೆ ಮಾಡಿಕೊತ್ತೇನಿ, ಪ್ರಾಣ ಕಳಕೊತೇನಿ ಅಂತೇನು ಸುಡುಗಾಡ ಏನೂ ಇಲ್ಲ ಎಂದು ತಿಳಿಸಿದರು. ನನ್ನ ಮೇಲೆ ಭ್ರಷ್ಟಾಚಾರ ಆರೋಪ ಇದಿದ್ದರೆ ನನ್ನ ಬಿಡ್ತಿದ್ರಾ ಇವು ? ನನ್ನ ಮೇಲೂ ರೇಡ್ ಹಾಕಬೇಕು ಅಂತ ಮಾಡಿದ್ದಾರಾ? ನನ್ನ ಮೇಲೂ ಇಂಟೆಲಿಜೆನ್ಸ್ ಇಟ್ಟಾರಾ, ಎಲ್ಲಾನೂ ನೋಡಿ ಸುಮ್ಮನೇ ಕೂತಾರೆ. ಏನೂ ಆಗಿಲ್ಲ. ಭಗವಂತನ ಶಕ್ತಿಯೇ ಜನರ ಶಕ್ತಿ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಚಾಟಿ ಬೀಸಿದರು.

ವಿಜಯೇಂದ್ರ ಸೂಕ್ತ ವ್ಯಕ್ತಿ ಅಂತ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದೇವೆ: ಯತ್ನಾಳ್‌ಗೆ ರಾಧಾ ಮೋಹನ್ ದಾಸ್ ಟಾಂಗ್‌

ಕೋರ್‌ಕಮಿಟಿ ನಡೆದಿರುವ ಕುರಿತು ಮಾತನಾ ಡಿ, ನಾನೇನು ಕೋರ್‌ಕಮಿಟಿ ಮೆಂಬರ್‌ಅಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಸಾಮಾನ್ಯ ಎಂಎಲ್‌ಎ ಅಷ್ಟೇ ಎಂದರು. ನಾನೀಗ ಸೈಲೆಂಟ್: ಹೈಕಮಾಂಡ್ ಭೇಟಿ ಬಳಿಕ ನಾನು ಸಪ್ಪೆಯಾಗಿಲ್ಲ. ನೋಡಿ, ನನ್ನ ನೋಡಿದ್ರೆ ನಾನು ಸಪ್ಪಗೆ ಅನಿಸ್ತಿನಾ? ನಾನು ಆಸೆನಾ ಮಾಡಿಲ್ಲ ಅಂದಮೇಲೆ ನಾನ್ಯಾಕೆ ಅಂಜಬೇಕು. ಮನುಷ್ಯನಿಗೆ ನಾನು ಸಿಎಂ ಆಗಬೇಕು, ನಾನು ಅಧ್ಯಕ್ಷ ಆಗಬೇಕು, ಸಿಕ್ಕಂಗ ರೊಕ್ಕ ಮಾಡಬೇಕು ಅಂತಿದ್ರೆ ಸಪ್ಪಗೆ, ಬೆಳ್ಳಗೆ ಆಗಬೇಕು. ನಾನು ಸ್ಥಿತಪ್ರಜ್ಞ ಇದ್ದೇನೆ. ನಾನೀಗ ಸೈಲೆಂಟ್ ಇದ್ದೇನೆ. ಪಕ್ಷದ ಬಗ್ಗೆ ಏನೇ ಕೇಳಿದ್ರೂ ನೋ ಕಮೆಂಟ್ಸ್ ಎಂದ ಯತ್ನಾಳ, ರಮೇಶ ಜಾರಕಿಹೊಳಿ ಅವರಿಗೆ ಅನ್ಯಾಯ ಆಗಿದೆ. ಹಾಗಾಗಿ ವೈಲೆಂಟ್ ಆಗಿದ್ದಾರೆ. ಮುಂದೇನಾಗುತ್ತೇ ಹೇಗೆ ಹೇಳೋದು? ನಾನೇನು ಭವಿಷ್ಯ ಹೇಳಲಾ ಎಂದು ಪ್ರಶ್ನಿಸಿದರು. 

ಬೆಂಗಳೂರಲ್ಲಿ ರಾಧಾಮೋಹನ ದಾಸ್ ಅವರಿಗೆ ಕೆಲವರು ಭೇಟಿ ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ನಾನೇನು ಅದರ ಬಗ್ಗೆ ಕಮೆಂಟ್ ಮಾಡಲು ಹೋಗೋದಿಲ್ಲ. ಯಾರು ಏನು ಬೇಕಾದ್ರೂ ಮಾಡಲಿ, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನಾನು ಕೇಂದ್ರದ ಹೈಕಮಾಂಡ್ ಭೇಟಿಯಾದಾಗ ಎಲ್ಲವನ್ನು ಹೇಳಿದ್ದೀನಿ, ಮತ್ತೇ ಮತ್ತೇ ಅದನ್ನ ನಾನು ಮಾತನಾಡಲು ತಯಾರಿಲ್ಲ ಎಂದು ಹೇಳಿದರು. 

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದು ಸರ್ಕಾರದ ಎಲ್ಲ ನಿರ್ಣಯ ಕಿತ್ತು ಹಾಕ್ತೇವೆ: ಯತ್ನಾಳ್‌

ಸಂತ್ರಸ್ತರು ಎಷ್ಟೇ ಹೋರಾಟ ಮಾಡಿದರೂ ಆ ಕೂಗು ಡಿಕೆಶಿಗೆ ಮುಟ್ಟುತ್ತಿಲ್ಲ ಎನ್ನುವ ವಿಚಾರದ ಕುರಿತು ಮಾತನಾಡಿ, ಜಲಸಂಪನ್ಮೂಲ ಸಚಿವರು ಯಾವಾಗಲೂ ಉತ್ತರ ಕರ್ನಾಟಕ ದವರೇ ಆಗಬೇಕು. ಆ ಕಡೆಯವರಿಗೆ ಇಲ್ಲಿಯ ಬಗ್ಗೆ ಕಳಕಳಿ ಇಲ್ಲ. ಅವರು ಆದ್ರೂ ಯಾಕೆ ಆಗ್ತಾರೆ ಅಂದ್ರೆ ಲೂಟಿ ಹೊಡೆಯೋಕೆ ಆಗ್ತಾರೆ ಎಂದು ದೂರಿದರು.

ಕಳೆದ ಬಾರಿ ನಮ್ಮ ಸರ್ಕಾರದ ಕೆಲಸಗಳಿಗೆ ಈಗ ಶೇ.10 ತಗೋತಿದ್ದಾರೆ. ಅವಾಗಿಂದಕ್ಕೂ ರೊಕ್ಕ ತಿನ್ನಾಕತ್ತಾನ ಈ ಪುಣ್ಯಾತ್ಮ (ಡಿಕೆಶಿ) ನಂತವರು ನೀರಾವರಿ ಮಂತ್ರಿಯಾದ್ರೆ ಅಭಿವೃದ್ಧಿ ಆಗುತ್ತಾ? ಈ ಕಡೆಯವರು ಯಾರಾದ್ರೂ ಆಗಿ, ಯಾರಾನ್ನಾದ್ರೂ ಮಾಡಿ ತೊಂದರೆ ಇಲ್ಲ. ಪಕ್ಷಾತೀತವಾಗಿ ಹೇಳ್ತಿನಿ ಬೊಮ್ಮಾಯಿ, ಕಾರಜೋಳ, ಎಚ್.ಕೆ.ಪಾಟೀಲ, ಎಂ.ಬಿ. ಪಾ ಟೀಲ ಎಲ್ಲರೂ ಇದ್ದಾಗ ಅಭಿವೃದ್ಧಿ ಆಗಿದೆ. ನಾನೇನು ಕಾಂಗ್ರೆಸ್ ಏಜೆಂಟ್ ಅಲ್ಲ. ನಾನು ಯಾವ ರಾಜಕಾರಣಿ ಮನೆಗೆ ಹೋಗಿ ಭಿಕ್ಷೆ ಬೇಡಿಲ್ಲ ಎಂದರು.ಯಾರ್ಯಾರು ಉತ್ತರ ಕರ್ನಾಟಕ ಕೆಲಸ ಮಾಡ್ಯಾರ ಒಳ್ಳೆಯ ಕೆಲಸ ಮಾಡ್ಯಾರ. ಅವರನ್ನು ಬೆಂಬಲಿಸೋಣ ಎಂದರಲ್ಲದೇ ಈಗೇನೋ ಸಚಿವ ಸಂಪುಟ ಅಂತಿದ್ದಾರೆ. ಸಿದ್ದರಾಮಯ್ಯರಲ್ಲಿ ಮನವಿ ಮಾಡೇನೆ, ಉತ್ತರ ಕರ್ನಾಟಕದವರನ್ನು ನೀರಾವರಿ ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು. 

Latest Videos
Follow Us:
Download App:
  • android
  • ios