ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದು ಸರ್ಕಾರದ ಎಲ್ಲ ನಿರ್ಣಯ ಕಿತ್ತು ಹಾಕ್ತೇವೆ: ಯತ್ನಾಳ್
ಸಾಬರು ಅಂದರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಹಿಂದೂಗಳ ಪೇಟ, ಕುಂಕುಮ ಅಂದರೆ ಆಗಿ ಬರಲ್ಲ. ಮುಸ್ಲಿಮರಿಗೆ ಕಾಂಟ್ರ್ಯಾಕ್ಟ್, ಶಿಕ್ಷಣದಲ್ಲಿ ರಿಸರ್ವೇಶನ್ ಕೊಡುತ್ತಾರೆ. ಇನ್ನು 3 ವರ್ಷ ಇದೆ. ಏನೇನು ಮಾಡುತ್ತಾರೆ ಮಾಡಲಿ. ಮೂರು ವರ್ಷದ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ಇವೆನ್ನೆಲ್ಲ ಕಿತ್ತು ಹಾಕುತ್ತೇವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ್
ಹುಬ್ಬಳ್ಳಿ(ಡಿ.07): ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಾಬ್ರು (ಮುಸ್ಲಿಮರು) ಅಂದ್ರ ಬಹಳ ಪ್ರೀತಿ. ಇನ್ನು ಮೂರು ವರ್ಷ ಸಾಬರಿಗೆ ಏನೇನು ಮಾಡುತ್ತಾರೋ ಮಾಡಲಿ. ಆಮೇಲೆ ನಮ್ಮ ಸರ್ಕಾರ ಬರುತ್ತೆ. ಎಲ್ಲವನ್ನು ಕಿತ್ತು ಹಾಕುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊ೦ದಿಗೆ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್ ಅವರು, ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಾಬರು ಅಂದರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಹಿಂದೂಗಳ ಪೇಟ, ಕುಂಕುಮ ಅಂದರೆ ಆಗಿ ಬರಲ್ಲ. ಮುಸ್ಲಿಮರಿಗೆ ಕಾಂಟ್ರ್ಯಾಕ್ಟ್, ಶಿಕ್ಷಣದಲ್ಲಿ ರಿಸರ್ವೇಶನ್ ಕೊಡುತ್ತಾರೆ. ಇನ್ನು 3 ವರ್ಷ ಇದೆ. ಏನೇನು ಮಾಡುತ್ತಾರೆ ಮಾಡಲಿ. ಮೂರು ವರ್ಷದ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ಇವೆನ್ನೆಲ್ಲ ಕಿತ್ತು ಹಾಕುತ್ತೇವೆ. ನಮ್ಮ ಸರ್ಕಾರ ಬರುವುದು ಗ್ಯಾರಂಟಿ. ಅವೆಲ್ಲವನ್ನು ತೆಗೆದು ಹಾಕುತ್ತೇವೆ ಎಂದರು.
ಇಂದು ಬಿಜೆಪಿ ಸಭೆ: ಭಾರೀ ಕುತೂಹಲ, ಯತ್ನಾಳ್ ಟೀಂ ಭಿನ್ನಮತ ಕುರಿತು ಪ್ರಸ್ತಾಪ?
ದುರಾಭಿಮಾನಿ ಸಮಾವೇಶ:
ಹಾಸನದಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಅಲ್ಲ. ದುರಾಭಿಮಾನಿ ಸಮಾವೇಶ ಎಂದು ಟೀಕಿಸಿದ ಯತ್ನಾಳ, ಹಾಸನದಲ್ಲಿ ಸಮಾವೇಶ ನಡೆದ ವೇಳೆ ಎಲ್ಲ ಕಡೆ ಸಿದ್ದರಾಮಯ್ಯನ ಫೋಟೋನೇ ಇದ್ದವು. ಡಿ.ಕೆ. ಶಿವಕುಮಾರ ಫೋಟೋನೇ ಇರಲಿಲ್ಲ. ಅದನ್ನೆಲ್ಲ ನೋಡಿದರೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನದಂತೆ ಇತ್ತು. ಈಗ ಡಿಕೆಶಿ ಏನು ಮಾಡುತ್ತಾರೆ ನೋಡಬೇಕು. ಸಿದ್ದು ಹಿಂದೆ ಬಂಡೆಯಂತೆ ನಿಲ್ಲುತ್ತೇನೆ ಎಂದು ಡಿ.ಕೆ. ಶಿವಕುಮಾರ ಹೇಳಿದ್ದರು. ಕನಕಪುರ ಬಂಡೆ ಹೇಗೆ ಒಡೆಯುತ್ತೀರೋ ಹಾಗೆ ಒಡೆಯುತ್ತೆ ಎಂದರು. ಬೆಂಗಳೂರು ಫುಟ್‌ಫಾತ್ ಮೇಲೆ ಮೇಲೆ ಕನಕಪುರ ಬಂಡೆಯನ್ನು ಹಾಕಿರುತ್ತಾರೆ ಎಂದು ವ್ಯಂಗ್ಯವಾಡಿದರು.
ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ
ವಕ್ಫ್ 2ನೆಯ ಹಂತದ ಹೋರಾಟ ಶೀಘ್ರ
ಹುಬ್ಬಳ್ಳಿ: ವಕ್ಫ್ ವಿರುದ್ಧ ಎರಡನೆಯ ಹಂತದ ಹೋರಾಟವನ್ನು ಶೀಘ್ರವೇ ಆರಂಭಿಸುತ್ತೇವೆ. ಕರ್ನಾಟಕದಲ್ಲಿ ಪಾಕಿಸ್ತಾನ ಆಗುವಷ್ಟು ವಕ್ಫ್ ಮಂಡಳಿ ಕ್ಲೇಮ್ ಮಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿ ಕರ್ನಾಟಕದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಎಕರೆ ಭೂಮಿ ಕಬಳಿಸುವ ಹುನ್ನಾರ ನಡೆಸುತ್ತಿದೆ. ರೈತರ, ಮಠ-ಮಂದಿರಗಳ ಭೂಮಿ ಕಬಳಿಸುವ ಸಂಚು ನಡೆದಿದೆ. ಇದರ ವರದಿ ಕೊಡುವುದಕ್ಕೆ ದೆಹಲಿಗೆ ಹೋಗಿದ್ದೇವು. ಜಂಟಿ ಸಮಿತಿ ಅಧ್ಯಕ್ಷ ಜಗದಂಬಿಕ ಪಾಲ್ ಅವರೊಂದಿಗೆ ಎರಡು ಗಂಟೆ ಚರ್ಚೆ ಮಾಡಿದ್ದೇವೆ. ಸಂಪೂರ್ಣ ಕಾನೂನು ರದ್ದು ಮಾಡಬೇಕು ಎನ್ನುವುದೇ ನಮ್ಮ ಆಗ್ರಹ.
ಈ ಅಧಿವೇಶನದಲ್ಲಿ ಈ ಚರ್ಚೆ ಆಗುವುದಿಲ್ಲ. ಬಜೆಟ್ ಅಧಿವೇಶನದಲ್ಲಿ ವಕ್ಫ್ ಕಾಯ್ದೆ ಕುರಿತು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಎರಡನೇ ಹಂತ, ಮೂರನೆಯ ಹಂತ ಇಡೀ ಕರ್ನಾಟಕವನ್ನು ಸುತ್ತಬೇಕು. ಚಾಮರಾಜನಗರ ವರೆಗೆ ನಮ್ಮ ಟೀಮ್ ಪ್ರವಾಸ ಮಾಡುತ್ತದೆ. ರಮೇಶ್ ಜಾರಕಿಹೊಳಿ, ಅರವಿಂದ ನಿಂಬಾವಳಿ, ಅಣ್ಣಾಸಾಹೇಬ ಜೊಲ್ಲೆ, ಕುಮಾರ್ ಬಂಗಾರಪ್ಪ ಸೇರಿ ಹಲವರು ಇದ್ದಾರೆ. ದಿನದಿಂದ ದಿನಕ್ಕೆ ನಮ್ಮ ತಂಡ ಶಕ್ತಿಯುತವಾಗುತ್ತಿದೆ. ನಾವೆಲ್ಲರೂ ಕೂಡಿ ದೇಶಕ್ಕೆ ಮಾರಕವಾದ ವಕ್ಫ್ ಕಾನೂನನ್ನು ರದ್ದು ಮಾಡಲು ಒತ್ತಾಯ ಮಾಡುತ್ತಿದ್ದೇವೆ ಎಂದರು.