ನವದೆಹಲಿ (ಫೆ. 12): ಮೋದಿ ಮತ್ತು ಅಮಿತ್‌ ಶಾ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಬೇರೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ನನ್ನ ಇಲಾಖೆಯ ಕೆಲಸದ ಬಗ್ಗೆ ವಿಪಕ್ಷಗಳೇ ಹಾಡಿ ಹೊಗಳುತ್ತಿರುವಾಗ ಮೋದಿ ಮಾತ್ರ ಬಹಿರಂಗವಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಗಂಗೆ ಕುರಿತು ಮಾತನಾಡಿ ನನ್ನ ಹೆಸರನ್ನೇ ಪ್ರಸ್ತಾಪಿಸೋದಿಲ್ಲ ಎಂದು ಸಂಘದ ನಾಯಕರ ಬಳಿ ಗಡ್ಕರಿ ಹೇಳಿಕೊಂಡಿದ್ದಾರೆ.

ಅಂದ ಹಾಗೆ ವಿದರ್ಭದ ಬಗ್ಗೆ ನಿರ್ಣಯ ತೆಗೆದುಕೊಳ್ಳುವಾಗ ದೇವೇಂದ್ರ ಫಡ್ನವೀಸ್‌ ಕೂಡ ಗಡ್ಕರಿಯನ್ನು ಕ್ಯಾರೇ ಎನ್ನುವುದಿಲ್ಲವಂತೆ. ಕೆಲವೊಮ್ಮೆ ಜಾಸ್ತಿ ಕೆಲಸ ಮಾಡೋದು ಕೂಡ ಕಣ್ಣು ಕುಕ್ಕುವಂತೆ ಮಾಡುತ್ತದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿಯವರಿಗೆ ಪರ್ಯಾಯವಾಗಿ ನಿತಿನ್ ಗಡ್ಕರಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತಿದೆ. 

- ಇಂಡಿಯಾ ಗೇಟ್, ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ  ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ