Asianet Suvarna News Asianet Suvarna News

ಜನತಾ ಕೋರ್ಟಲ್ಲಿ ಚರ್ಚೆಗೆ ಸಿಎಂಗೆ ಭಯ ಏಕೆ? :ಸಿದ್ದು

  • ನಾನು ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸವಾಲ್‌ ಹಾಕಿದ್ದೆ
  • ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಅಂತ ಹೇಳುತ್ತಾರೆ
why CM Bommai Fear about janatha Court ask Siddaramaiah snr
Author
Bengaluru, First Published Oct 28, 2021, 6:51 AM IST
  • Facebook
  • Twitter
  • Whatsapp

 ಹುಬ್ಬಳ್ಳಿ (ಅ.28):  ನಾನು ಅಭಿವೃದ್ಧಿ (Development) ವಿಚಾರಗಳಿಗೆ ಸಂಬಂಧಿಸಿ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಬೊಮ್ಮಾಯಿ (CM Basavaraj Bommai) ಅವರಿಗೆ ಸವಾಲ್‌ ಹಾಕಿದ್ದೆ. ಆದರೆ, ಅವರು ವಿಧಾನಸಭೆಯಲ್ಲಿ (Assembly) ಚರ್ಚೆ ಮಾಡೋಣ ಅಂತ ಹೇಳುತ್ತಾರೆ. ಜನತಾ ನ್ಯಾಯಾಲಯದ (Janatha Court) ಮುಂದೆ ಚರ್ಚೆ ಮಾಡಲು ಅವರಿಗೆ ಭಯ ಏಕೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ಅಭಿವೃದ್ಧಿ ಮಾಡಿಲ್ಲ ಅವರು ಹೇಳಿದ್ದು ಸತ್ಯವಾದರೆ ಜನರ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡೋಣ. ಅದರಲ್ಲಿ ಭಯ ಪಡುವಂತದ್ದೇನಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಟಾಂಗ್‌ ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಗರಂ ಆದ ಶ್ರೀರಾಮುಲು

ಎರಡೂವರೆ ವರ್ಷದಲ್ಲಿ ಬಿಜೆಪಿಯವರು (BJP) ಒಂದೇ ಒಂದು ಮನೆ (House) ಕೊಟ್ಟಿಲ್ಲ. ಈಗ ಹಾನಗಲ್‌ನಲ್ಲಿ (Hanagal) ಮನೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರು ರಸ್ತೆಯನ್ನೂ (Road) ಮಾಡಿಲ್ಲ, ಮನೆಯನ್ನೂ ಕಟ್ಟಿಸಿ ಕೊಟ್ಟಿಲ್ಲ. ಬಿಜೆಪಿಯವರಿಗೆ ದುಡ್ಡು (Money) ಹಂಚುವುದೇ ಕೆಲಸ. ಒಂದೊಂದು ಕ್ಷೇತ್ರದಲ್ಲಿ 10 ರಿಂದ 12 ಸಚಿವರು ಠಿಕಾಣಿ ಹೂಡಿದ್ದಾರೆ. ಹಣದ ಚೀಲ ತುಂಬಿಕೊಂಡು ಬಂದಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ (Election comission) ದೂರು ನೀಡುತ್ತೇವೆ ಎಂದರು.

ಇದೇ ವೇಳೆ, ಅನ್ನಭಾಗ್ಯ ಯೋಜನೆಗೆ ಕೇಂದ್ರ ಅನುದಾನ ನೀಡಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೊಮ್ಮಾಯಿ ಪೆದ್ದರ ರೀತಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ದುಡ್ಡು ಹಂಚುವುದೇ ಬಿಜೆಪಿ ಕೆಲಸ: ಸಿದ್ದರಾಮಯ್ಯ

ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ (Congress) ಪರ ಅಲೆ ಇದೆ. ಬಿಜೆಪಿ ಏನೂ ಅಭಿವೃದ್ಧಿ ಮಾಡಿಲ್ಲ. ಈಗ ಹಾನಗಲ್‌ನಲ್ಲಿ 7 ಸಾವಿರ ಮನೆ ಕೊಟ್ಟಿದ್ದೇವೆ ಎಂದು ಆದೇಶ ಮಾಡಿಕೊಂಡು ಬಂದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

 ಕಾಂಗ್ರೆಸ್ ಗೆಲುವು ನಿಶ್ಚಿತ

ಹಾನಗಲ್ಲ ಹಾಗೂ ಸಿಂಧಗಿ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಬಹಿರಂಗ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕೊನೆಯ ಘಳಿಗೆಯಲ್ಲಿ ಅವರನ್ನು ಅಭ್ಯರ್ಥಿಯಾಗಿ ಮಾಡಲಾಯಿತು. ಮೊದಲೇ ಘೋಷಣೆ ಮಾಡಿದ್ದಾರೆ ಖಂಡಿತವಾಗಿ ಅವರೇ ಕಳೆದ ಬಾರಿ ವಿಜಯ ಸಾಧಿಸುತ್ತಿದ್ದರು. ಈ ಬಾರಿ ಎಲ್ಲ ವರ್ಗದ ಜನರಲ್ಲಿ ಮಾನೆ ಪರ ಒಲವಿದೆ. ಈ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ನೂರಕ್ಕೆ ನೂರರಷ್ಟುಗೆದ್ದೆ ಗೆಲ್ಲುತ್ತಾರೆ. ಹೋದ ಕಡೆಯಲ್ಲಿ ಮಾನೆ ಆಪತ್ಪಾಂಧವ ಎಂದು ಕರೆಯುತ್ತಾರೆ. ಕೊರೋನಾ ಸಂದರ್ಭದಲ್ಲಿ ಉದಾಸಿ, ಬಸವರಾಜ ಬೊಮ್ಮಾಯಿ ಯಾರೂ ಜನತೆಯ ಕಷ್ಟಸುಖಕ್ಕೆ ಸ್ಪಂದಿಸಲಿಲ್ಲ. ಮಾನೆ ನುಡಿದಂತೆ ಜನತೆಯ ಕಷ್ಟಕ್ಕೆ ಮಿಡಿದಿದ್ದಾರೆ.

ಕಂಬಳಿಗೆ ಹಾಕಲು ಜಾತಿಯವರೇ ಆಗ್ಬೇಕು ಅಂದ್ರೆ ಟೋಪಿ ಹಾಕಲು?ಸಿಟಿ ರವಿ ವಿವಾದಾತ್ಮಕ ಟ್ವೀಟ್!

ಬಿಜೆಪಿಯ (BJP) ಶಿವರಾಜ ಸಜ್ಜನರ ಸಂಗೂರು ಸಕ್ಕರೆ ಕಾರ್ಖಾನೆಯನ್ನು ನುಂಗಿ ನೀರು ಕುಡಿದಿದ್ದಾರೆ. ಇವು ಸಜ್ಜನ ಅಲ್ಲ, ದುರ್ಜನ ಎಂದು ಅವರ ಒಡಹುಟ್ಟಿದ ತಮ್ಮ ಹೇಳುತ್ತಾರೆ. ಗೌರಾಪುರ ಗುಡ್ಡವನ್ನು ನುಂಗಲು ಹೊರಟಿದ್ದಾರೆ. ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಚೀಲವನ್ನು ಕೂಡ ಮಾರಿ ತಿಂದಿದ್ದಾರೆ. ಕೋರ್ಟ್‌ನಲ್ಲಿ ಇವತ್ತು ಕೂಡ ಪ್ರಕರಣ ನಡೆಯುತ್ತಿದೆ. ಆಪತ್ಪಾಂಧವನ ವಿರುದ್ಧ ದುರ್ಜನ ನಿಂತಿದ್ದಾರೆ. ಇವರು ಶಾಸಕರಾದರೆ ಹಾನಗಲ್ಲ ಕ್ಷೇತ್ರವನ್ನು ನುಂಗಿ ನೀರು ಕುಡಿಯುತ್ತಾರೆ ಎಂದರು.

ಸಿಂಧಗಿಯಲ್ಲಿ ಅಂಜುಮನ್‌ ಸಂಸ್ಥೆಗೆ ತೆರಳಿ . 5 ಲಕ್ಷ ಕೊಟ್ಟು ಜೆಡಿಎಸ್‌ನವರಿಗೆ (JDS) ಮತ ಹಾಕಿ ಎಂದು ಹೇಳಿದರು. ಆದರೆ, ಜಮೀರ್‌ ಅಹ್ಮದ್‌ ತೆರಳಿ ಹಣವನ್ನು ವಾಪಸ್‌ ಕೊಟ್ಟು ಸಂಸ್ಥೆಯವರ ಮನವೊಲಿಸಿ ಬಂದಿದ್ದಾರೆ ಎಂದರು.

ಈ ಬಾರಿ ಎಲ್ಲ ವರ್ಗದ ಜನರಲ್ಲಿ ಮಾನೆ ಪರ ಒಲವಿದೆ. ಈ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ನೂರಕ್ಕೆ ನೂರರಷ್ಟುಗೆದ್ದೆ ಗೆಲ್ಲುತ್ತಾರೆ. ಹೋದ ಕಡೆಯಲ್ಲಿ ಮಾನೆ ಆಪತ್ಪಾಂಧವ ಎಂದು ಕರೆಯುತ್ತಾರೆ. ಕೊರೋನಾ ಸಂದರ್ಭದಲ್ಲಿ ಉದಾಸಿ, ಬಸವರಾಜ ಬೊಮ್ಮಾಯಿ ಯಾರೂ ಜನತೆಯ ಕಷ್ಟ-ಸುಖಕ್ಕೆ ಸ್ಪಂದಿಸಲಿಲ್ಲ. ಮಾನೆ ನುಡಿದಂತೆ ಜನತೆಯ ಕಷ್ಟಕ್ಕೆ ಮಿಡಿದಿದ್ದಾರೆ.

ಬಸವರಾಜ ಬೊಮ್ಮಾಯಿ ಈ ಕ್ಷೇತ್ರಕ್ಕೆ ಬಂದು ನೂರಾರು ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಸುಳ್ಳಿನ ಮಳೆಯನ್ನೇ ಸೇರಿಸಿದ್ದಾರೆ. ಅಭಿವೃದ್ಧಿಯ ಪಟ್ಟಿತನ್ನಿ ಒಂದೇ ವೇದಿಕೆಯ ಮೇಲೆ ಬರೋಣ ಎಂದು ಸವಾಲು ಹಾಕಿದ್ದೇವೆ. ಆದರೆ, ಈ ವರೆಗೆ ಉತ್ತರ ಕೊಟ್ಟಿಲ್ಲ. ಸಿಎಂಗೆ ಸತ್ಯ ಹೇಳುವ ದಮ್‌ ಬೇಕಲ್ಲವೆ ಎಂದು ಲೇವಡಿ ಮಾಡಿದರು.

ಅನ್ನಭಾಗ್ಯ ಯೋಜನೆ ಬಗ್ಗೆ ಕೇಂದ್ರ ಅನುದಾನ ಹಂಚಿದೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೊಮ್ಮಾಯಿ ಪೆದ್ದರ ರೀತಿ ಮಾತನಾಡುತ್ತಾರೆ ಎಂದು ಟೀಕಿಸಿದರು.ಸಿದ್ದರಾಮಯ್ಯ ಲಿಂಗಾಯತ ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ ಎಂಬ ಬಿಜೆಪಿ ಟ್ವೀಟ್‌ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಸ್ವಾಮೀಜಿಗಳ ಬಗ್ಗೆ ಮಾತನಾಡುವುದಿಲ್ಲ. ಟ್ವೀಟ್‌ ಮಾಡುವುದು ಬಿಜೆಪಿಯವರ ಕೆಲಸ ಎಂದರು.

Follow Us:
Download App:
  • android
  • ios