ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಏಕೆ ಆಗುತ್ತಿಲ್ಲ: ದಿಗ್ವಿಜಯ್ ಸಿಂಗ್ ಪ್ರಶ್ನೆ
ಮೂರು ತಿಂಗಳಿಂದ ಹಿಂಸಾಚಾರ, ಗಲಭೆಯಿಂದ ನಲಗುತ್ತಿರುವ ಕಣಿವೆ ರಾಜ್ಯ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿಯವರಿಗೆ ಯಾಕೆ ಆಗುತ್ತಿಲ್ಲ. ಅಲ್ಲಿಗೇಕೆ ಹೋಗುತ್ತಿಲ್ಲ ಎಂದು ದೇಶದ ಜನರು ಪ್ರಶ್ನಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಹುಬ್ಬಳ್ಳಿ (ಆ.12): ಮೂರು ತಿಂಗಳಿಂದ ಹಿಂಸಾಚಾರ, ಗಲಭೆಯಿಂದ ನಲಗುತ್ತಿರುವ ಕಣಿವೆ ರಾಜ್ಯ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿಯವರಿಗೆ ಯಾಕೆ ಆಗುತ್ತಿಲ್ಲ. ಅಲ್ಲಿಗೇಕೆ ಹೋಗುತ್ತಿಲ್ಲ ಎಂದು ದೇಶದ ಜನರು ಪ್ರಶ್ನಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಶಿರಸಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿ ಕೇವಲ ರಾಜಕೀಯ ಭಾಷಣ ಮಾಡುತ್ತಿದ್ದಾರೆ.
ಸಂಸತ್‌ನಲ್ಲಿ ಆಧಾರ ರಹಿತ ತಪ್ಪು ಮಾಹಿತಿ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಸ್ಸಾಂ ರೈಫಲ್ಸ್ ಮತ್ತು ಸ್ಥಳೀಯ ಪೊಲೀಸರ ನಡುವೆ ವಿವಾದ ಹೆಚ್ಚುತ್ತಲೇ ಇದ್ದು, ಕೇಂದ್ರ ಸರ್ಕಾರ ಮೌನ ವಹಿಸಿರುವುದು ಏಕೆ? ಮೋದಿಯವರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು. ಕರ್ನಾಟಕ ಗ್ಯಾರಂಟಿಗಳ ಕುರಿತು ಪ್ರಧಾನಿ ಮಾಡಿರುವ ಟೀಕೆಯಲ್ಲಿ ಹುರುಳಿಲ್ಲ. ಗ್ಯಾರಂಟಿ ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ತಿಳಿಸಿದರು. ಸಂಸತ್‌ನಲ್ಲಿ ರಾಹುಲ್‌ಗಾಂಧಿ ಫ್ಲಾಯಿಂಗ್ ಕಿಸ್ ವಿಚಾರ ಕುರಿತ ಪ್ರತಿಕ್ರಿಯಿಸಿದ ಸಿಂಗ್, ಅದು ಫ್ಲಾಯಿಂಗ್ ಕಿಸ್ ಅಲ್ಲವೇ ಅಲ್ಲ ಎಂದು ಸಮರ್ಥಿಸಿಕೊಂಡರು.
ಸಕ್ರೆಬೈಲಿನಲ್ಲಿ ವಿಶ್ವ ಆನೆಗಳ ದಿನಾಚರಣೆ: ವಿಶಿಷ್ಟವಾಗಿ ಸಿಂಗಾರಗೊಂಡ ಗಜಪಡೆ!
ಮಣಿಪುರ ವಿಚಾರದಲ್ಲಿ ವಿಪಕ್ಷ ಪಲಾಯನವಾದ: ಮಣಿಪುರ ಜನಾಂಗೀಯ ಹಿಂಸೆ ವಿಚಾರ ಹಾಗೂ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಪ್ರತಿಪಕ್ಷಗಳು ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಿಂದ ಪ್ರತಿಪಕ್ಷಗಳ ಸದಸ್ಯರು ಪಲಾಯನಗೈದರು’ ಎಂದು ಆರೋಪಿಸಿದ್ದಾರೆ. ಅಲ್ಲದೆ, ದೇಶಾದ್ಯಂತ ವಿಪಕ್ಷಗಳು ನಕಾರಾತ್ಮಕ ವಿಷಯಗಳನ್ನು ಹಬ್ಬಿಸುತ್ತಿವೆ ಎಂದು ಕಿಡಿಕಾರಿದ್ದಾರೆ. ಇದಲ್ಲದೆ. ಸಂಸತ್ತಿನಲ್ಲಿ ಮಣಿಪುರದ ಚರ್ಚೆಯ ಬಗ್ಗೆ ಪ್ರತಿಪಕ್ಷಗಳು ಗಂಭೀರವಾಗಿರಲಿಲ್ಲ. ಚರ್ಚೆ ನಡೆದಿದ್ದರೆ ಅವುಗಳ ಬಣ್ಣವೇ ಬಯಲಾಗುತ್ತಿತ್ತು ಎಂದೂ ಹೇಳಿದ್ದಾರೆ.
ಶನಿವಾರ ಪ.ಬಂಗಾಳದ ನೂತನ ಬಿಜೆಪಿ ಪಂಚಾಯ್ತಿ ಸದಸ್ಯರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ‘ವಿರೋಧ ಪಕ್ಷಗಳು ಜನರ ಕಲ್ಯಾಣಕ್ಕಿಂತ ತಮ್ಮ ರಾಜಕೀಯಕ್ಕೆ ಆದ್ಯತೆ ನೀಡುತ್ತಿವೆ. ಹೀಗಾಗಿ ಸಂಸತ್ತಿನಲ್ಲಿ ಚರ್ಚೆಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಅವಕಾಶ ಬಳಸಿಕೊಳ್ಳಲು ಆಗಲಿಲ್ಲ’ ಎಂದು ವಿಷಾದಿಸಿದರು. ‘ಎರಡು ದಿನಗಳ ಹಿಂದಷ್ಟೇ ನಾವು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಸೋಲಿಸಿದ್ದೆವು. ಅವರು ಹರಡುತ್ತಿದ್ದ ನಕಾರಾತ್ಮಕತೆಯನ್ನು ನಾವು ಸೋಲಿಸಿದ್ದೇವೆ. ಪ್ರತಿಪಕ್ಷಗಳು ಸದನದಿಂದ ಓಡಿ ಹೋಗುವುದನ್ನು ಇಡೀ ದೇಶವೇ ನೋಡಿದೆ. ದುರದೃಷ್ಟವಶಾತ್, ಅವರು ಮಣಿಪುರದ ಜನರಿಗೆ ದ್ರೋಹ ಮಾಡಿದ್ದಾರೆ’ ಎಂದು ಮೋದಿ ಆರೋಪಿಸಿದರು.
ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ತಾಯಿ ಮಗ ಸ್ಥಳದಲ್ಲೇ ಸಾವು!
‘ಅಧಿವೇಶನ ಪ್ರಾರಂಭವಾಗುವ ಮೊದಲು, ಸರ್ಕಾರವು ವಿಪಕ್ಷಗಳಿಗೆ ಪತ್ರ ಬರೆದು ಮಣಿಪುರ ಕುರಿತ ಚರ್ಚೆಗೆ ಆಹ್ವಾನಿಸಿತ್ತು. ಆದರೆ ಏನಾಯಿತು ಎಂದು ನೀವೆಲ್ಲರೂ ನೋಡಿದ್ದೀರಿ. ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ನೀಡಲಿಲ್ಲ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಚರ್ಚೆ ನಡೆದಿದ್ದರೆ ಮಣಿಪುರದ ಜನತೆಗೆ ನೆಮ್ಮದಿ ಸಿಗುತ್ತಿತ್ತು. ಕೆಲವು ಪರಿಹಾರಗಳು ಹೊರಹೊಮ್ಮುತ್ತಿದ್ದವು. ಆದರೆ ಮಣಿಪುರದ ಸತ್ಯವು ತಮ್ಮನ್ನು ಹೆಚ್ಚು ಕುಟುಕುತ್ತದೆ ಎಂದು ತಿಳಿದಿದ್ದರಿಂದ ವಿಪಕ್ಷಗಳು ಅದನ್ನು ಚರ್ಚಿಸಲು ಬಯಸಲಿಲ್ಲ. ಅವರು ಗಂಭೀರವಾಗಿರದೆ ಮಣಿಪುರ ವಿಚಾರದಲ್ಲಿ ರಾಜಕೀಯ ಮಾಡಲು ಬಯಸಿದ್ದರು’ ಎಂದು ಪ್ರಧಾನಿ ನುಡಿದರು.