Asianet Suvarna News Asianet Suvarna News

ಕನಕಪುರ ಬಂಡೆ ಡಿಕೆಶಿ ಗೆಲು​ವಿನ ಓಟಕ್ಕೆ ತಡೆ ಒಡ್ಡುವವರು ಯಾರು..?

ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷರಿಗೆ ಪ್ರಬಲ ಎದು​ರಾ​ಳಿ​ಗಳೇ ಇಲ್ಲ, ಪ್ರಬಲ ಅಭ್ಯರ್ಥಿ ಕಣ​ಕ್ಕಿ​ಳಿಸಿ, ಡಿಕೆ ಸಹೋ​ದ​ರ​ರಿಗೆ ಟಕ್ಕರ್‌ ನೀಡಲು ಎಚ್ಡಿಕೆ ಪ್ಲ್ಯಾನ್‌ 

Who Will Stop DK Shivakumar's Winning Streak at Kanakapura in Ramanagara grg
Author
First Published Feb 8, 2023, 12:32 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ಫೆ.08): ಡಿ.ಎಂ.ನಂಜುಡಪ್ಪ ವರದಿಯನು​ಸಾರ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿರುವ ಕನ​ಕ​ಪು​ರ, ಅತಿ ಸಿರಿ​ವಂತ ರಾಜ​ಕಾ​ರ​ಣಿ, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಪ್ರತಿ​ನಿಧಿಸುವ ಕ್ಷೇತ್ರ. ಮುಖ್ಯ​ಮಂತ್ರಿ ಹುದ್ದೆ ಮೇಲೆ ಕಣ್ಣಿ​ಟ್ಟಿ​ರುವ ಡಿಕೆ​ಶಿ, ಈ ಬಾರಿಯೂ ಕನಕಪುರದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದ್ದು, ಈ ಕ್ಷೇತ್ರಕ್ಕೆ ಸ್ಟಾರ್‌ ವ್ಯಾಲ್ಯೂ ತಂದುಕೊಟ್ಟಿದೆ. ಡಿಕೆ​ಶಿಗೆ ತವರು ಕ್ಷೇತ್ರ​ದಲ್ಲಿ ಸವಾಲು ಹಾಕ​ಬಲ್ಲ ಸಮರ್ಥ ಎದು​ರಾಳಿ ಬಿಜೆಪಿ ಮತ್ತು ಜೆಡಿ​ಎಸ್‌ಗಳಿಗೆ ಇನ್ನೂ ಸಿಕ್ಕಿಲ್ಲ. ಹಿಂದಿನ ಚುನಾ​ವ​ಣೆ​ಗ​ಳಲ್ಲಿ ಅನ್ಯ ಪಕ್ಷ​ಗ​ಳಿಂದ ಪ್ರತಿ​ಸ್ಪ​ರ್ಧಿ​ಗ​ಳಾ​ಗಿದ್ದ​ವ​ರೆ​ಲ್ಲರೂ ಶಸ್ತ್ರ ತ್ಯಾಗ ಮಾಡಿ ‘ಡಿಕೆ‘ ಬತ್ತ​ಳಿಕೆ ಸೇರಿ​ದ್ದಾರೆ.

ಆರಂಭ​ದಲ್ಲಿ ಡಿಕೆಶಿಗೆ ವಿರು​ದ್ಧ​ವಾಗಿದ್ದ ಎಚ್‌.ಕೆ.​ಶ್ರೀ​ಕಂಠು, ಕಿರ​ಣ​ಗೆರೆ ಜಗ​ದೀಶ್‌ ಕಾಂಗ್ರೆಸ್‌ಗೆ ಬಂದರು. ಜೆಡಿ​ಎಸ್‌ನಿಂದ ಪೈಪೋಟಿ ನೀಡು​ತ್ತಿದ್ದ ಪಿಜಿ​ಆರ್‌ ಸಿಂಧ್ಯಾ, ಬಿಎಸ್ಪಿ ಸುತ್ತಾಡಿ ಕೈ ಪಾಳಯ ಸೇರಿ​ದರು. 2004ರಲ್ಲಿ ಸಾತನೂರು ಹಾಗೂ 2008ರಲ್ಲಿ ಕನಕಪುರದಲ್ಲಿ ಜೆಡಿ​ಎಸ್‌ನಿಂದ ನಿಂತು, ಡಿಕೆಶಿಗೆ ಸೋಲಿನ ಭೀತಿ ಹುಟ್ಟಿಸಿದ್ದ ಡಿ.ಎಂ.​ವಿ​ಶ್ವ​ನಾಥ್‌ ಕೂಡ ಜೆಡಿ​ಎಸ್‌ ತೊರೆದು ಡಿಕೆಶಿ ಬೆನ್ನಿಗೆ ನಿಂತಿ​ದ್ದಾರೆ.

ಮದ​ಗ​ಜ​ಗಳ ರಾಜಕೀಯ ಕಾದಾಟ: ಚನ್ನಪಟ್ಟಣಕ್ಕಾಗಿ ಕುಮಾರಸ್ವಾಮಿ, ಯೋಗೇಶ್ವರ್‌ ಕಾದಾಟ..!

ಆದಾಗ್ಯೂ, ಕನ​ಕ​ಪು​ರ​ದಲ್ಲಿ ಜೆಡಿ​ಎಸ್‌ ತನ್ನ ಪ್ರಾಬ​ಲ್ಯ​ವನ್ನು ಕಳೆ​ದು​ಕೊಂಡಿಲ್ಲ. ಈಗಲೂ ಆ ಕ್ಷೇತ್ರ​ದಲ್ಲಿ ಜೆಡಿ​ಎಸ್‌ಗೆ 50 ರಿಂದ 60 ಸಾವಿರ ಸಾಂಪ್ರ​ದಾ​ಯಿಕ ಮತ​ಗಳು ರಿಸರ್ವ್‌ ಆಗಿವೆ. 2008ರಲ್ಲಿ ದುಂತೂರು ವಿಶ್ವ​ನಾಥ್‌ ಶೇ.43ರಷ್ಟು ಹಾಗೂ 2013ರಲ್ಲಿ ಪಿಜಿ​ಆರ್‌ ಸಿಂಧ್ಯಾ ಶೇ.38.93ರಷ್ಟು ಮತ ಪಡೆ​ದಿ​ದ್ದ​ರು. 2018ರಲ್ಲಿ ನಾಮ​ಪತ್ರ ಸಲ್ಲಿ​ಸುವ ಕೊನೆಯ ದಿನ ಅಖೈ​ರು​ಗೊಂಡ ನಾರಾ​ಯ​ಣ​ಗೌಡಗೆ ಶೇ.25.59ರಷ್ಟುಮತ​ಗಳು ಚಲಾ​ವ​ಣೆ​ಯಾ​ದ​ವು. ಈ ಮತ ಗಳಿ​ಕೆಯೇ ಕನ​ಕ​ಪು​ರ​ದಲ್ಲಿ ಜೆಡಿ​ಎಸ್‌ ಸಂಘ​ಟನೆಯ ಅಸ್ತಿ​ತ್ವ​ಕ್ಕೆ ಸಾಕ್ಷಿ​ಯಾ​ಗಿ​ದೆ.

ಇತ್ತೀಚೆಗೆ ಪಂಚರತ್ನ ಯಾತ್ರೆಗೆ ಬಂದಿದ್ದ ಕುಮಾ​ರ​ಸ್ವಾಮಿ, ಇಲ್ಲಿ ಸಮರ್ಥ ಅಭ್ಯ​ರ್ಥಿ​ಯನ್ನು ಕಣ​ಕ್ಕಿ​ಳಿಸಿ, ಡಿಕೆ ಸಹೋ​ದ​ರ​ರಿಗೆ ಟಕ್ಕರ್‌ ನೀಡು​ವು​ದಾಗಿ ಘೋಷಿಸಿ ಹೋಗಿದ್ದಾರೆ. ಜಿಲ್ಲೆಯ ಮೂರು ಕ್ಷೇತ್ರ​ಗಳ ಅಭ್ಯರ್ಥಿಗಳನ್ನು ಪ್ರಕ​ಟಿ​ಸಿ​ದ್ದಾರೆ. ಆದರೆ, ಕನ​ಕ​ಪುರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಹೆಸರನ್ನು ಪ್ರಕ​ಟಿ​ಸದೇ ಇರುವುದು ಸಾಕಷ್ಟು ಕುತೂ​ಹಲ ಮೂಡಿ​ಸಿದೆ.

ಕಳೆದ ಬಾರಿ ಅಭ್ಯ​ರ್ಥಿ​ಯಾ​ಗಿದ್ದ ನಾರಾ​ಯ​ಣ​ಗೌಡ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗ​ರಾಜು, ಉದ್ಯಮಿ ಬಾಲ​ನ​ರ​ಸಿಂಹೇ​ಗೌಡ, ಕಬ್ಬಾ​ಳೆ​ಗೌಡ ಅವರು ಜೆಡಿ​ಎಸ್‌ನಿಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಹೊಸ ಅಭ್ಯ​ರ್ಥಿ​ಯನ್ನು ಆಯ್ಕೆ ಮಾಡುವ ಸಾಧ್ಯ​ತೆ​ಯನ್ನೂ ಅಲ್ಲ​ಗಳೆ​ಯು​ವಂತಿಲ್ಲ. ಇನ್ನು, ಬಿಜೆ​ಪಿಗೆ ಇಲ್ಲಿ ನೆಲೆ ಇಲ್ಲ. ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ನಂದಿ​ನಿ​ಗೌಡ, ಕನ​ಕ​ಪುರ ಯೋಜನಾ ಪ್ರಾಧಿ​ಕಾರ ಅಧ್ಯಕ್ಷ ಜಗ​ನ್ನಾಥ್‌, ಬಿಜೆ​ಪಿ ಮುಖಂಡ ಕನ​ಕ​ಪುರ ಪ್ರಭಾರಿ ಸೀಗೆ​ಕೋಟೆ ರವಿ​ಕು​ಮಾರ್‌ ಟಿಕೆಟ್‌ ಆಕಾಂಕ್ಷಿ​ಗಳು.

ಮಾಜಿ ಸಿಎಂ ಕುಮಾ​ರ​ಸ್ವಾಮಿ ಕುಟುಂಬ​ದ​ವರ ವಿರುದ್ಧ ಡಿ.ಕೆ.ಸುರೇಶ್‌ ವಾಗ್ದಾಳಿ

ಕ್ಷೇತ್ರದ ಹಿನ್ನೆಲೆ:

ಕನ​ಕ​ಪುರಕ್ಕೆ ಬರು​ವು​ದಕ್ಕೂ ಮೊದಲು ಡಿಕೆ​ಶಿ, ಸಾತ​ನೂ​ರು ಕ್ಷೇತ್ರ​ದಿಂದ ನಾಲ್ಕು ಬಾರಿ ಆಯ್ಕೆ​ಯಾ​ಗಿ​ದ್ದರು. ಕ್ಷೇತ್ರ ಪುನರ್‌ ವಿಂಗ​ಡ​ಣೆ​ಯಲ್ಲಿ ಸಾತ​ನೂರು ಕ್ಷೇತ್ರ ಸ್ಥಾನ ಕಳೆ​ದು​ಕೊಂಡಿತು. ಬಳಿಕ, ಜೆಡಿ​ಎಸ್‌ ಭದ್ರ​ಕೋ​ಟೆ​ಯಾ​ಗಿದ್ದ ಕನ​ಕ​ಪುರಕ್ಕೆ ಡಿಕೆ​ಶಿ ಎಂಟ್ರಿಯಾದ ಮೇಲೆ ಜೆಡಿ​ಎಸ್‌ 2ನೇ ಸ್ಥಾನಕ್ಕೆ ಕುಸಿ​ದಿ​ದೆ. ಕ್ಷೇತ್ರ ಮರುವಿಂಗಡಣೆಯ ನಂತರ 2008ರಿಂದ ಕನಕಪುರಕ್ಕೆ ಬಂದು ಹ್ಯಾಟ್ರಿಕ್‌ ಜಯಗಳಿಸುವುದಲ್ಲದೆ ತಮ್ಮ ಗೆಲುವಿನ ಅಂತರವನ್ನು ಚುನಾ​ವ​ಣೆ​ಯಿಂದ ಚುನಾ​ವ​ಣೆಗೆ ಹೆಚ್ಚಿಸಿಕೊಳ್ಳುತ್ತ ಕ್ಷೇತ್ರವನ್ನು ಸಂಪೂ​ರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಕನ​ಕ​ಪುರ ಕ್ಷೇತ್ರ ಕಸಬಾ, ಕೋಡಿ​ಹಳ್ಳಿ , ಉಯ್ಯಂಬಳ್ಳಿ, ಸಾತ​ನೂರು ಹೋಬ​ಳಿ​ಗ​ಳನ್ನು ಒಳ​ಗೊಂಡಿದೆ.

ಜಾತಿ ಲೆಕ್ಕಾಚಾರ:

ಕ್ಷೇತ್ರದಲ್ಲಿ ಒಟ್ಟು 2,21,425 ಮತದಾರರಿದ್ದು, ಈ ಪೈಕಿ, ಒಕ್ಕ​ಲಿ​ಗರು 95,000, ಪ.ಜಾತಿಯವರು 36,000, ಪ.ಪಂಗ​ಡದವರು 10,000, ಮುಸ್ಲಿ​ಮರು 16,000, ಲಿಂಗಾ​ಯತರು 26,000 ಹಾಗೂ ಇತರರು 38,425 ಮಂದಿ ಇದ್ದಾರೆ. ಈವರೆಗಿನ ಎಲ್ಲಾ ಚುನಾ​ವ​ಣೆ​ಗ​ಳಲ್ಲೂ ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ನಡು​ವೆಯೇ ಹಣಾ​ಹಣಿ ನಡೆ​ದಿದೆ.

Follow Us:
Download App:
  • android
  • ios