Asianet Suvarna News Asianet Suvarna News

ಪ್ರಜ್ವಲ್‌ ರೇವಣ್ಣ ಕಾರು ಚಾಲಕನ ಮಲೇಷ್ಯಾಕ್ಕೆ ಕಳಿಸಿದ್ಯಾರು?: ಎಚ್‌ಡಿಕೆ ಕಿಡಿ

ಸಂಸದ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಮಲೇಷಿಯಾದಲ್ಲಿ ಇದ್ದಾನೆ. ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

Who sent Prajwal Revanna car driver to Malaysia Says HD Kumaraswamy gvd
Author
First Published May 2, 2024, 12:38 PM IST

ಬೆಂಗಳೂರು (ಮೇ.02): ಸಂಸದ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಮಲೇಷಿಯಾದಲ್ಲಿ ಇದ್ದಾನೆ. ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಪದ್ಮನಾಭನಗರದಲ್ಲಿನ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿವಾಸದ ಬಳಿ ಮಾಧ್ಯಮದವರನ್ನು ಕಂಡ ಕುಮಾರಸ್ವಾಮಿ ಸಿಡಿಮಿಡಿಗೊಂಡರು. ನಿನ್ನೆ ಸಂಪೂರ್ಣವಾಗಿ ಒಂದು ಗಂಟೆ ಎಲ್ಲವನ್ನೂ ಹೇಳಿದ್ದೇನೆ. ಮತ್ತೆ ಯಾಕೆ ಬರ್ತೀರಾ? ಸುದ್ದಿ ಬಿಡುವವರು ಯಾರಿದ್ದಾರೆ ಅವರ ಬಳಿ ಹೋಗಿ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

‘ನಾನೂ ನೋಡುತ್ತಿದ್ದೇನೆ. ನಮ್ಮ ಮನೆ ಮುಂದೆ ಸಹ ಕ್ಯಾಮರಾ ಹಾಕಿದ್ದೀರಿ. ಇಲ್ಲೂ ಕ್ಯಾಮರಾ ಹಾಕಿದ್ದೀರಿ. ಯಾಕೆ ಹೀಗೆ ಮಾಡುತ್ತೀರಿ. ನಮ್ಮ ಮನೆ ಬಳಿ ಯಾಕೆ ಬಂದಿದ್ದೀರಿ? ಬೆಳಗ್ಗೆ ಮನೆ ಹತ್ತಿರ ಬಂದಿದ್ದಿರಿ? ಈಗ ಇಲ್ಲಿ (ಪದ್ಮನಾಭನಗರ) ಬರ್ತೀರಾ. ಏನು ಕೆಲಸ ನಿಮಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಚಾಲಕ ಕಾರ್ತಿಕ್‌ ಹೇಳಿಕೆಯ ವಿಡಿಯೋ ಬಿಡುಗಡೆಯಾಗಿದೆ. ಆತನಿಂದ ವಿಡಿಯೋ ಬಿಡುಗಡೆ ಮಾಡಿದ್ದು ಯಾರು ಮಾಡಿದರು? ದೇವರಾಜೇಗೌಡನ ಕೈಯಲ್ಲಿ ತಾನು ಕೊಟ್ಟಿದ್ದು ಎಂದು ಚಾಲಕ ಹೇಳಿದ್ದಾನೆ. ಕಾರ್ತಿಕ್‌ ಈಗ ಎಲ್ಲಿದ್ದಾನೆ? ಅವನಿಂದ ವಿಡಿಯೋ ಮಾಡಿಸಿದ್ದರು ಯಾರು? 

ಪ್ರಜ್ವಲ್‌ ರೇವಣ್ಣ ಕೇಸ್‌ನಿಂದ ದೂರ ಇರಿ: ಬಿಜೆಪಿಗರಿಗೆ ಹೈಕಮಾಂಡ್‌ ಸೂಚನೆ

ಕಾರ್ತಿಕ್‌ ಮಲೇಷಿಯಾದಲ್ಲಿದ್ದಾನೆ. ಅವನನ್ನು ಮಲೇಷಿಯಾಕ್ಕೆ ಕಳುಹಿಸಿದ್ದು ಯಾರು? ತರಾತುರಿಯಲ್ಲಿ ಯಾಕೆ ವಿಡಿಯೋ ಬಿಡುಗಡೆ ಮಾಡಿದರು? ನಮ್ಮನ್ನ ಕೆಣಕಿದ್ದಾರೆ. ಏನು ಮಾಡಬೇಕು ಎಂಬುದು ಗೊತ್ತಿದೆ. ಮೊದಲು ಕಾರ್ತಿಕ್‌ ಎಲ್ಲಿದ್ದಾನೆ ಎಂಬುದನ್ನು ಹುಡುಕಿಕೊಳ್ಳಿ’ ಎಂದು ಒಂದೇ ಉಸಿರಿನಲ್ಲಿ ವಾಗ್ದಾಳಿ ನಡೆಸಿದರು. ‘ಚಿಲ್ಲರೆ ಅಣ್ಣ- ತಮ್ಮಂದಿರು ಮಹಾನುಭಾವರು. ಕುಮಾರಸ್ವಾಮಿ ಬಿಟ್ಟಿರುವುದು ಎಂದು 420ಗಳು ಹೇಳಿದ್ದಾರೆ’ ಎಂದು ಡಿ.ಕೆ. ಸಹೋದರರ ವಿರುದ್ಧ ಹರಿಹಾಯ್ದರು.

Latest Videos
Follow Us:
Download App:
  • android
  • ios