ಸತತ ಎರಡು ಗೆಲುವು ದಾಖಲಿಸಿರುವ ಜೆಡಿಎಸ್‌ನ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಈ ಬಾರಿಯೂ ಗೆದ್ದು, ಹ್ಯಾಟ್ರಿಕ್‌ ಬಾರಿಸುವ ತವಕ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಡಜನ್‌ಗಟ್ಟಲೆ ಆಕಾಂಕ್ಷಿಗಳಿದ್ದರೂ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಇನ್ನೂ ಕಸರತ್ತು ನಡೆಯುತ್ತಲೇ ಇದೆ.

ಅಂಶಿ ಪ್ರಸನ್ನಕುಮಾರ್‌

ಮೈಸೂರು(ಮಾ.03): ಕರುನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಸುತ್ತಮುತ್ತ ಹರಡಿಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಕಳೆದ ಬಾರಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 36 ಸಾವಿರ ಮತಗಳ ಅಂತರದಿಂದ ಪರಾಭವಗೊಂಡ ಕ್ಷೇತ್ರ. ಹುಣಸೂರಿಂದ ಇಲ್ಲಿಗೆ ಸ್ಥಳಾಂತರಗೊಂಡ ನಂತರ ಸತತ ಎರಡು ಗೆಲುವು ದಾಖಲಿಸಿರುವ ಜೆಡಿಎಸ್‌ನ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಈ ಬಾರಿಯೂ ಗೆದ್ದು, ಹ್ಯಾಟ್ರಿಕ್‌ ಬಾರಿಸುವ ತವಕ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಡಜನ್‌ಗಟ್ಟಲೆ ಆಕಾಂಕ್ಷಿಗಳಿದ್ದರೂ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಇನ್ನೂ ಕಸರತ್ತು ನಡೆಯುತ್ತಲೇ ಇದೆ.

ಕಾಂಗ್ರೆಸ್‌ನಿಂದ ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಕೂರ್ಗಳ್ಳಿ ಮಹದೇವ್‌, ಮಾಜಿ ಸದಸ್ಯರಾದ ಲೇಖಾ ವೆಂಕಟೇಶ್‌, ಎಸ್‌.ಅರುಣ್‌ಕುಮಾರ್‌, ರಾಕೇಶ್‌ ಪಾಪಣ್ಣ, ಮುಖಂಡರಾದ ಎಚ್‌.ಸಿ.ಕೃಷ್ಣಕುಮಾರ್‌ ಸಾಗರ್‌, ಮೆಲ್ಲಹಳ್ಳಿ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಜೆ.ಜೆ.ಆನಂದ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ ಜಿ.ಟಿ.ದೇವೇಗೌಡರ ವಿರುದ್ಧ ಸಮರ ಸಾರಿ, ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರಿರುವ ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್‌.ಮಾದೇಗೌಡ ಇತ​ರರು ಕೂಡ ಆಕಾಂಕ್ಷಿಗಳು. ಜಿ.ಟಿ.ದೇವೇಗೌಡರನ್ನು ಮಣಿಸಲು ಒಕ್ಕಲಿಗರಿಗೆ ಟಿಕೆಟ್‌ ನೀಡಬೇಕೋ ಅಥವಾ ಕುರುಬ ಸಮುದಾಯಕ್ಕೆ ನೀಡಬೇಕೋ ಎಂಬ ಜಿಜ್ಞಾಸೆ ವರಿಷ್ಠರಲ್ಲಿದೆ.

ಕಾಂಗ್ರೆಸ್‌ ಕೊಟ್ಟಿದ್ದು ಕಾಲು ಮುರುಕ ಕುದುರೆ: ಕು​ಮಾ​ರ​ಸ್ವಾಮಿ

ಬಿಜೆಪಿಯಿಂದ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಹೇಮಂತಕುಮಾರ್‌ ಗೌಡ, ಬೋಗಾದಿ ಗ್ರಾಪಂ ಸದಸ್ಯ ಎನ್‌.ಅರುಣ್‌ಕುಮಾರ್‌ ಗೌಡ, ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್‌ ಪ್ರಬಲ ಆಕಾಂಕ್ಷಿಗಳು. ಇನ್ನೂ ಹಲವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಇತ್ತೀಚೆಗೆ ಬಿಜೆಪಿ ಸೇರಿದ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಅವರ ಪುತ್ರ ವಿ.ಕವೀಶ್‌ಗೌಡ ಹೆಸರೂ ಕೇಳಿ ಬರುತ್ತಿದೆ.

ಮೈಸೂರು, ಚಾ.ನ​ಗರ, ಕೊಡಗು, ಉಜ್ವಲ್‌ ಸ್ಕೀಂನಲ್ಲಿ ಸಿಲಿಂಡರ್‌ ಎತ್ತಿ​ಇಟ್ಟು ಸೌದೆ​ಯಲ್ಲಿ ಅಡುಗೆ ಅರಣ್ಯ ಸಂಪತ್ತು ಬಿಟ್ಟು​ಬಿ​ಟ್ಟರೆ ದುಬಾರಿ, ಪರಿ​ಸರ ಸ್ವಲ್ಪ ಗ್ಯಾಸ್‌ ಏಜೆನ್ಸಿ, ಡಿಸ್ಟಿ​ಬ್ಯೂ​ಟರ್‌, ಸೇಲ್ಸ್‌, 2 ಮೂರು ಬಡ​ವರ ರಿಯಾ​ಕ್ಷನ್‌ 2, 3 ಸಮಗ್ರ ಕೊಡಗು, ಉತ್ತರ ಕನ್ನಡ, ಚೆಕ್‌ ಮಾಡಿ ಬಿಟ್ಟಿದ್ದು, ಪರಿ​ಸರ ವಾಪ​ಸ್‌, ಆರೋಗ್ಯ ಸುಧಾ​ರಿ​ಸಿತ್ತು, ಪರಿ​ಸರ, ಅರಣ್ಯ ಸಂರ​ಕ್ಷಣೆ, ದುಬಾರಿ ನಾಲ್ಕು ವಿಚಾರ ಮುಂದಿ​ಟ್ಟು​ಕೊಂಡು

ಮೂರು ಪಕ್ಷಗಳಿಗೂ ಈ ಚುನಾವಣೆ ಅಗ್ನಿ ಪರೀಕ್ಷೆ: ಎಚ್‌.ಡಿ.ಕುಮಾರಸ್ವಾಮಿ

ಕ್ಷೇತ್ರ ಹಿನ್ನೆಲೆ

ಚಾಮುಂಡೇಶ್ವರಿ ಕ್ಷೇತ್ರ 2008 ಹೊರತುಪಡಿಸಿ 1983ರಿಂದಲೂ ಕಾಂಗ್ರೆಸ್‌, ಜನತಾ ಪರಿವಾರದ ಜಿದ್ದಾಜಿದ್ದಿಯ ಕಣ. ಸಿದ್ದರಾಮಯ್ಯ ಈ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿ 5 ಬಾರಿ ಗೆದ್ದು, 3 ಬಾರಿ ಸೋತಿದ್ದಾರೆ. ಈ ಕ್ಷೇತ್ರ ಮೈಸೂರು ತಾಲೂಕು ಎಂದಿದ್ದಾಗ 1952ರಲ್ಲಿ ಕಾಂಗ್ರೆಸ್‌ನ ಶಿವನಂಜೇಗೌಡ, 1957, 1962ರಲ್ಲಿ ಕಾಂಗ್ರೆಸ್‌ನ ಕೆ.ಪುಟ್ಟಸ್ವಾಮಿ, ಚಾಮುಂಡೇಶ್ವರಿ ಎಂದು ಬದಲಾದ ನಂತರವೂ 1967, 1972ರಲ್ಲಿ ಪುಟ್ಟಸ್ವಾಮಿ ಮರು ಆಯ್ಕೆಯಾಗಿದ್ದರು. 1978ರಲ್ಲಿ ಇಂದಿರಾ ಕಾಂಗ್ರೆಸ್‌ನ ಡಿ.ಜಯದೇವರಾಜ ಅರಸು, 1983ರಲ್ಲಿ ಸಿದ್ದರಾಮಯ್ಯ(ಪಕ್ಷೇ​ತ​ರ​), 1985ರಲ್ಲಿ ಮತ್ತೆ ಸಿದ್ದ​ರಾ​ಮಯ್ಯ(ಜ​ನತಾ ಪರಿ​ವಾ​ರ​), 1989ರಲ್ಲಿ ಕಾಂಗ್ರೆಸ್‌ನ ಎಂ.ರಾಜಶೇಖರಮೂರ್ತಿ, 1994ರಲ್ಲಿ ಸಿದ್ದರಾಮಯ್ಯ(ಜೆಡಿ​ಎ​ಸ್‌​), 1999ರಲ್ಲಿ ಕಾಂಗ್ರೆಸ್‌ನ ಎ.ಎಸ್‌.ಗುರುಸ್ವಾಮಿ, 2004ರಲ್ಲಿ ಸಿದ್ದರಾಮಯ್ಯ(ಜೆ​ಡಿ​ಎ​ಸ್‌​), 2006ರ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ(ಕಾಂಗ್ರೆಸ್‌), 2008ರಲ್ಲಿ ಕಾಂಗ್ರೆಸ್‌ನ ಎಂ.ಸತ್ಯನಾರಾಯಣ, 2013ರಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ, 2018ರಲ್ಲಿ ಮತ್ತೆ ಜಿ.ಟಿ.ದೇವೇಗೌಡ ಪುನ​ರಾಯ್ಕೆ ಆಗಿ​ದ್ದಾ​ರೆ.

ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ 3,11,286 ಮತದಾರರಿದ್ದಾರೆ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರ. ನಂತರದ ಸ್ಥಾನದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಕುರುಬರು, ವೀರಶೈವ- ಲಿಂಗಾಯತರು ಬರುತ್ತಾರೆ.