ಮೋದಿಯವರನ್ನು ಟೀಕಿಸಿದಾಗಲೆಲ್ಲ ಅವರ ಜನಪ್ರಿಯತೆ ಹೆಚ್ಚಾಗಿದೆ: ಬೊಮ್ಮಾಯಿ

ಕಾಂಗ್ರೆಸ್ ಸ್ಪರ್ಧೆ ಮಾಡಿದ್ದೇ ೨೦೦ ಸ್ಥಾನಗಳಲ್ಲಿ, ಅದರಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಅನ್ನುವುದನ್ನು ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. 
 

Whenever Narendra Modi is criticized his popularity increases Says Basavaraj Bommai gvd

ಹಿರೇಕೆರೂರು (ಏ.03): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೦೦ ಸೀಟು ಗೆಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದವಾಗಿದ್ದು, ಕಾಂಗ್ರೆಸ್ ಸ್ಪರ್ಧೆ ಮಾಡಿದ್ದೇ ೨೦೦ ಸ್ಥಾನಗಳಲ್ಲಿ, ಅದರಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಅನ್ನುವುದನ್ನು ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಅವರು ಮಂಗಳವಾರ ತಾಲೂಕಿನ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಡ್ಲೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಇಡೀ ದೇಶದಲ್ಲಿ ೫೪೩ ಲೋಕಸಭಾ ಕ್ಷೇತ್ರದಲ್ಲಿ ಕೇವಲ ೨೦೦ ಸ್ಥಾನಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ನವರು ದೇಶ ಆಳುತ್ತೇವೆ ಅಂತ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಒಬ್ಬ ಸಚಿವರು ಮೋದಿ, ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದರು. ಈಗ ಅವರು ಹೋದಲೆಲ್ಲಾ ಮೋದಿ ಮೋದಿ ಎಂಬ ಕೂಗು ಹೆಚ್ಚಾಗಿದೆ. ಮೋದಿಯವರನ್ನು ಟೀಕಿಸಿದಾಗಲೆಲ್ಲ ಅವರ ಜನಪ್ರಿಯತೆ ಹೆಚ್ಚಾಗಿದೆ. ಗುಜರಾತ್‌ನಲ್ಲಿ ಮೋದಿಯವರು ಸಿಎಂ ಆಗಿದ್ದಾಗ ಸೋನಿಯಾಗಾಂಧಿ ಮೌತ್ ಕಾ ಸೌದಾಗರ್ ಎಂದರು. ಅಲ್ಲಿ ಮೋದಿಯವರು ಹೆಚ್ಚಿನ ಸ್ಥಾನ ಗೆದ್ದು ಸಿಎಂ ಆದರು, ಮಣಿಶಂಕರ ಅಯ್ಯರ್ ಅಂತ ಒಬ್ಬ ಕಾಂಗ್ರೆಸ್ ಲೀಡರ್ ಮೋದಿ ಚಾ ಮಾರುವ ಹುಡುಗ ಅಂದರು, ಇಡೀ ದೇಶದ ಜನರು ಮೋದಿಯವರ ಪರವಾಗಿ ನಿಂತು ಪ್ರಧಾನಮಂತ್ರಿ ಮಾಡಿದರು. ಬಿಹಾರದ ಲಾಲೂ ಪ್ರಸಾದ್ ಯಾದವ್ ಮೋದಿಗೆ ಪರಿವಾರ ಇಲ್ಲ ಅಂದರು, ಇಡೀ ದೇಶವೇ ಅವರ ಪರಿವಾರ ಅಂತ ಎದ್ದು ನಿಂತರು ಎಂದು ಹೇಳಿದರು.

ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ, ಗೆಲ್ಲಿಸಿ: ಬೊಮ್ಮಾಯಿ ಮನವಿ

ಬಿಸಿಪಿ ಬಂಡಾಯ ನಾಯಕ: ಹಿರೇಕೆರೂರಿನಲ್ಲಿಯೂ ಬಿಜೆಪಿಯ ಅಲೆ ಇದೆ. ಇಲ್ಲಿ ಸಂಘರ್ಷದ ರಾಜಕಾರಣ ಇದೆ. ಬಿ.ಸಿ. ಪಾಟೀಲರು ಬಂಡಾಯ ನಾಯಕರು, ಅವರು ಬರಗಾಲ ಇದ್ದಾಗ ಹಿರೇಕೆರೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಆಗ ವಿ.ಎಸ್. ಕೌಜಲಗಿ ಕೃಷಿ ಸಚಿವರು, ಅವರು ಎಲ್ಲರನ್ನು ಹಿಂಡಲಗಾ ಜೈಲಿಗೆ ಹಾಕಿದರು. ನಾನು ಎರಡು ಹೋರಾಟಗಳನ್ನು ನೋಡಿದ್ದೇನೆ, ನವಲಗುಂದ-ನರಗುಂದ ಬಂಡಾಯ ಆಗಿನ ಕಾಂಗ್ರೆಸ್ ಸರ್ಕಾರ ಗೋಲಿಬಾರ್ ಮಾಡಿಸಿ ರೈತರನ್ನು ಬಳ್ಳಾರಿ ಜೈಲಿಗೆ ಹಾಕಿದ್ದರು. ಬಿ.ಸಿ. ಪಾಟೀಲರು ಜೈಲಿಗೆ ಹೋಗಿ ಬಂದ ನಂತರ ಜೈಲಿನಿಂದ ಬಂದ ರೈತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದರು ಎಂದು ಹೇಳಿದರು.

ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ಸಿಎಂ ಸಿದ್ದರಾಮಯ್ಯ: ನಿಖಿಲ್ ಕುಮಾರಸ್ವಾಮಿ

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ. ಇಡೀ ಜಗತ್ತಿನಲ್ಲಿಯೇ ಭಾರತದ ಅಭಿವೃದ್ಧಿಯನ್ನು ಉನ್ನತ ಶಿಖರಕ್ಕೆ ಏರಿಸಿದ್ದಾರೆ. ಸೂರ್ಯಚಂದ್ರ ಇರುವುದು ಎಷ್ಠು ಸತ್ಯನೋ. ಅದೇ ರೀತಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಯವರು ಅಧಿಕಾರಕ್ಕೆ ಬರುವುದು ಸತ್ಯ. ಅದನ್ನು ತಡೆಯಲೂ ಯಾರಿಂದಲೂ ಸಾಧ್ಯವಿಲ್ಲ. ಆದರೆ ಈಗಾಗಲೇ ಸಮೀಕ್ಷೆಗಳು ಪ್ರಕಾರ ೪೦೦ಕ್ಕಿಂತ ಹೆಚ್ಚು ಬಿಜೆಪಿ ಗೆಲವು ಸಾಧಿಸಲಿದೆ ಎಂದು ಹೇ‍ಳಿವೆ. ಬಸವರಾಜ ಬೊಮಾಯಿಯವರು ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವರು ಎಂದರು. ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಟಿ ಪಾಟೀಲ, ಎಸ್.ಎಸ್. ಪಾಟೀಲ, ಎನ್.ಎಂ. ಈಟೇರ್, ಡಿ. ಎಂ. ಸಾಲಿ, ಡಿ.ಸಿ. ಪಾಟೀಲ, ಲಿಂಗರಾಜ ಚಪ್ಪರದಳ್ಳಿ, ಪಾಲಕ್ಷಗೌಡ ಪಾಟೀಲ, ಆರ್. ಎನ್, ಗಂಗೋಳ, ಶಿವುಕುಮಾರ ತಿಪ್ಪಶಟ್ಟಿ, ದೇವರಾಜ ನಾಗಣ್ಣನವರ, ಲತ ಬಣಕಾರ, ಬಸಮ್ಮ ಅಬಲೂರು, ರವಿಶಂಕರ ಬಾಳಿಕಾಯಿ, ಶಿವಯೋಗಿ ಕೇರೂಡಿ, ಗೀತಾ ದಂಡಿಗಿಹಳ್ಳಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

Latest Videos
Follow Us:
Download App:
  • android
  • ios