ನೀಟ್ ಪರೀಕ್ಷೆ ಗೊಂದಲ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ವ್ಯವಸ್ಥಿತ ದುರಂತವಾಗಿದ್ದು, ಇದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಾತ್ರವಿದೆ ಎಂದು ಆರೋಪಿಸಿದರು.
ಬೆಂಗಳೂರು(ಮೇ.17) ನೀಟ್ ಪರೀಕ್ಷೆ ಗೊಂದಲ ಮತ್ತು ವಿದ್ಯಾರ್ಥಿಗಳ ಆತ್ಮ೧ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇದು ಬಹಳ ದೊಡ್ಡ ದುರಂತ' ಎಂದು ಹೇಳಿದ ಸಚಿವರು, ಇದು ಆಕಸ್ಮಿಕವಾಗಿ ಆಗಿರೋದು ಅಲ್ಲ, ವ್ಯವಸ್ಥಿತವಾಗಿ ಆಗಿರೋದು' ಎಂದು ಗಂಭೀರ ಆರೋಪ ಮಾಡಿದರು.

ಇದರಲ್ಲಿ ಬಿಜೆಪಿ–RSS ಪಾತ್ರ ಇದೆ
'ಈ ಎಲ್ಲದಲ್ಲೂ ಬಿಜೆಪಿ ಮತ್ತು RSS ಅವರ ಪಾತ್ರ ಇದೆ' ಎಂದು ಖರ್ಗೆ ನೇರ ಆರೋಪ ಮಾಡಿದರು. ಈ ಪಾಲು ಯಾರಿಗೆ ಹೋಗ್ತಿದೆ? ಯಾಕೆ ಇನ್ನೂ ಯಾರೂ ರಾಜೀನಾಮೆ ಕೊಡ್ತಿಲ್ಲ? ಎಂದು ಪ್ರಶ್ನಿಸಿದರು. ಕಲ್ಬುರ್ಗಿ ಉದಾಹರಣೆ ನೀಡಿದ ಸಚಿವರು, ಅಲ್ಲಿ ಮಕ್ಕಳು 85% ಅಂಕ ಪಡೆದ್ರು, ನನ್ನ ರಾಜೀನಾಮೆ ಕೇಳಿ ಬಿಜೆಪಿ ನಾಯಕರು ಓಡಾಡಿದ್ರು. ಈಗ ಎಲ್ಲಿದ್ದಾರೆ ಬಿಜೆಪಿ ನಾಯಕರು?
ಈಗ ಎಲ್ಲಿದ್ದಾರೆ ಬಿಜೆಪಿ ನಾಯಕರು?
ಈಗ ನೀಟ್ ಪರೀಕ್ಷೆ ವಿದ್ಯಾರ್ಥಿಗಳು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಈಗ ಎಲ್ಲಿದ್ದಾರೆ ಆ ಬಿಜೆಪಿ ನಾಯಕರು? ಯಾರ ರಾಜೀನಾಮೆ ಕೇಳ್ತಾರೆ? ಕೇಳಲ್ಲ ಯಾಕೆಂದ್ರೆ ಇಲ್ಲಿ RSS ಮತ್ತು ಬಿಜೆಪಿ ಅವರಿಂದಲೇ ದುರಂತ ನಡೆದಿದೆ ಎಂದು ಆರೋಪಿಸಿದರು.
22 ಲಕ್ಷ ವಿದ್ಯಾರ್ಥಿಗಳಿಗೆ ಮೋಸ
ನೀಟ್ ಗೊಂದಲದಿಂದ ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ, ಮುಂದೆ ಪರೀಕ್ಷೆ ಬರೆಯೋಕೂ ಹೆದರುವಂತಾಗಿದೆ. 22 ಲಕ್ಷ ವಿದ್ಯಾರ್ಥಿಗಳಿಗೆ ಮೋಸವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಈಗ ಪರೀಕ್ಷೆ ಬರೆಯಲ್ಲ ಅಂತ ಹೇಳುತ್ತಿದ್ದಾರೆ. ಹಗಲಿರುಳು ಓದಿ ಪರೀಕ್ಷೆ ಬರೆದಿದ್ದರು. ಈಗ ಪೇಪರ್ ಲೀಕ್ ಆಗಿ ಪರೀಕ್ಷೆ ರದ್ದು ಮಾಡಿದ್ರೆ ಮಕ್ಕಳ ಭವಿಷ್ಯ ಏನಾಗಬೇಕು? ಎಂದು ಪ್ರಶ್ನಿಸಿದ ಸಚಿವರು, 'ಇದು ವ್ಯವಸ್ಥಿತವಾಗಿ ಮಕ್ಕಳ ಭವಿಷ್ಯವನ್ನ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ' ಕೇಂದ್ರದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮೇಂದ್ರ ಪ್ರಧಾನ್‌ಗೆ ಸ್ವಲ್ಪ ನಾಚಿಕೆ ಇದ್ದರೆ ರಾಜೀನಾಮೆ ಕೊಡಲಿ
ಧರ್ಮೇಂದ್ರ ಪ್ರಧಾನ್ ವಿರುದ್ಧವೂ ವಾಗ್ದಾಳಿ ನಡೆಸಿದ ಖರ್ಗೆ ಅವರು, ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು. ಕನಿಷ್ಟ ಅವರಿಗೆ ಸ್ವಲ್ಪನಾದರೂ ನಾಚಿಕೆ ಅನ್ನೋದಿದ್ರೆ ರಾಜೀನಾಮೆ ಕೊಡಬೇಕು' ಎಂದರು.
ಮೋದಿ ನೀಟ್ ಬಗ್ಗೆ ಚರ್ಚೆ ಯಾವಾಗ ಮಾಡ್ತಾರೆ?'
ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಖರ್ಗೆ, 'ಮೋದಿ ಅವರು ಎಲ್ಲಿದ್ದಾರೆ? ‘ಪರೀಕ್ಷಾ ಪೇ ಚರ್ಚಾ’ ಅಂತ ಮಾತನಾಡ್ತಾರೆ. ನೀಟ್ ಬಗ್ಗೆ ಚರ್ಚೆ ಯಾವಾಗ ಮಾಡ್ತಾರೆ?' ಎಂದು ಪ್ರಶ್ನಿಸಿದರು. ಇದೆಲ್ಲ ದೇಶಭಕ್ತಿನಾ? ಎಂದು ಆರೆಸ್ಸೆಸ್ ವಿರುದ್ಧವೂ ಕಿಡಿಕಾರಿದರು.
ಪೇಪರ್ ಮಾರಾಟ ಮಾಡಿ ಮಕ್ಕಳ ಭವಿಷ್ಯ ಹಾಳು ಮಾಡಿದ್ದಾರೆ
RSS ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವರು, 'RSS ಅವರು ತಮ್ಮನ್ನು ದೇಶಭಕ್ತರು ಅಂತ ಹೇಳ್ತಾರೆ. ಇದೇನಾ ಅವರ ದೇಶಭಕ್ತಿ? ಎಂದು ಪ್ರಶ್ನಿಸಿದರು. ಗಣವೇಶದಲ್ಲಿ ಲಾಠಿ ಹಿಡಿದು ಫೋಟೋ… ಈಗ ಪೇಪರ್ ಮಾರಾಟ ಮಾಡಿದ್ದಾರೆ ಎಂದು ಕಿಡಿಕಾರಿದರು.
ಎ ಓನ್‌ನಿಂದ ಎ ಟು ಆಗಿರೋವರು ಗಣವೇಶದಲ್ಲಿ ಲಾಠಿ ಹಿಡಿದು ಫೋಟೋ ತೆಗೆಸಿಕೊಂಡು, ಇವತ್ತು ಪೇಪರ್ ಮಾರಾಟ ಮಾಡಿದ್ದಾರೆ ಎಂದು ಖರ್ಗೆ ಟೀಕಿಸಿದರು.
ಪಾಕಿಸ್ತಾನ ಬಗ್ಗೆ ಮಾತು… ಇಲ್ಲಿ ಮಕ್ಕಳ ಭವಿಷ್ಯ ಹಾಳು
ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಉಲ್ಲೇಖಿಸಿದ ಸಚಿವರು, ಹೊರ ದೇಶದಲ್ಲಿ ಇವರು ಪಾಕಿಸ್ತಾನ, ಅಮೆರಿಕಾ ಬಗ್ಗೆ ಮಾತನಾಡುತ್ತಾರೆ. ಆದರೆ ಇಲ್ಲಿ ಅವರ ಪ್ರಚಾರಕರು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.


