Asianet Suvarna News Asianet Suvarna News

ಬಿಜೆಪಿಯ ತಾಳಿ ತೆಗೆದಾಗ ಬೇರೆ ಪಕ್ಷ ಆಯ್ಕೆ ಮಾಡ್ತೇನೆ: ಎಂಎಲ್‌ಸಿ ಆಯನೂರು ಮಂಜುನಾಥ್

ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಬಿಜೆಪಿಯ ತಾಳಿ ನನ್ನ ಕೊರಳಲ್ಲಿ ಇರಲ್ಲ. ಆಗ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸುತ್ತೇನೆ.

When i will remove BJP Manglasutra then choose the party MLC Ayanur Manjunath sat
Author
First Published Apr 3, 2023, 2:04 PM IST | Last Updated Apr 3, 2023, 2:04 PM IST

ಶಿವಮೊಗ್ಗ (ಏ.03):  ನಾನು ಬಿಜೆಪಿಯಿಂದ ಆಯ್ಕೆಯಾದ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಬಿಜೆಪಿಯ ತಾಳಿ ನನ್ನ ಕೊರಳಲ್ಲಿ ಇರಲ್ಲ. ಆಗ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸುತ್ತೇನೆ ಎಂದು ಆಯನೂರು ಮಂಜುನಾಥ್‌ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಬಿಜೆಪಿಯ ತಾಳಿ ನನ್ನ ಕೊರಳಲ್ಲಿ ಇರಲ್ಲ. ಆಗ ಯಾವ ಪಕ್ಷ ಎಂದು ನಿರ್ಧರಿಸುತ್ತೇನೆ. ಈಶ್ವರಪ್ಪನಿಂದ ಬಿಜೆಪಿಗೆ ಕೆಟ್ಟ ಹೆಸರು ಬರುತ್ತಿದೆ. ಶಿವಮೊಗ್ಗ ಬಿಜೆಪಿ ಟಿಕೆಟ್ ಗಾಗಿ ಈಶ್ವರಪ್ಪ ಪುತ್ರ ಕಾಂತೇಶ್, ಭಾನುಪ್ರಕಾಶ್ ಪುತ್ರ ಹರಿಕೃಷ್ಣ ಹೆಸರು ಕೂಡ ಕೇಳಿ ಬರುತ್ತಿದೆ. ಈಶ್ವರಪ್ಪ ನನ್ನ ಮೇಲೆ ನಸಗುನ್ನಿ ಎರಚಿದ್ದಾರೆ. ಒಬ್ಬ ಯಕಶ್ಚಿತ್ ಹೇಗೆ ಹೋರಾಟ ಮಾಡುತ್ತಾನೆ ನೋಡಲಿ. ಇಷ್ಟು ದಿನ ಈಶ್ವರಪ್ಪನವರಿಗೆ ಸವಾಲ್ ಹಾಕುವವರು ಯಾರು ಇರಲಿಲ್ಲ. ನಾನು ಈಗ ಸವಾಲು ಹಾಕಲು ಶುರು ಮಾಡಿದ್ದೇನೆ ಎಂದು ಕಿಡಿಕಾರಿದರು.

 

 

ತೊಡೆ ತಟ್ಟಿ ಹೇಳ್ತೇನೆ ಅಪ್ಪ-ಮಗ ಚುನಾವಣಾ ಅಖಾಡಕ್ಕೆ ಬರಲಿ: ಆಯನೂರು ಮಂಜನಾಥ್ ಸವಾಲು

ನಿಮಗೆ ಅವಮಾನ ಆದಾಗ ನೇಣು ಹಾಕಿಕೊಂಡಿರಾ.? ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗಕ್ಕೆ ಬಂದಾಗ ಒಂದು ದಿನವಾದರೂ ಕ್ಯಾಬಿನೆಟ್ ಸಚಿವರಾಗಿ ಸ್ವಾಗತ ಮಾಡಿದ್ದೀರಾ? ಮುಖ್ಯಮಂತ್ರಿ ಆಗಿದ್ದವರಿಗೆ ಸಚಿವನಾಗಿದ್ದವರು ಇಷ್ಟೊಂದು ಅಪಮಾನ ಮಾಡುವಾಗ ನಿಮ್ಮ ನಿಲುವು ಸರಿಯಾಗಿಲ್ಲ ಎಂದು ತಿಳಿಸಿದ್ದೀರಿ. ಯಡಿಯೂರಪ್ಪನವರು ಜೈಲಿಗೆ ಹೋದಾಗ ನಾನಾಗಿದ್ದರೆ ನೇಣು ಹಾಕಿಕೊಳ್ಳುತ್ತಿದ್ದೆ ಎಂದಿದ್ದೀರಿ. ಅದೇ ನಿಮ್ಮ ಮೇಲೆ ಅಪವಾದ ಬಂದಾಗ ನೀನು ಹಾಕಿಕೊಂಡಿರಾ? ಎಂದು ಪ್ರಶ್ನೆ ಮಾಡಿದರು. 

ವಾರ್ಡ್‌ಗಳಲ್ಲಿ ಹಣ ಡೆಪಾಸಿಟ್‌: ಮೊನ್ನೆ ಶಿವಮೊಗ್ಗದಲ್ಲಿ ನಾಲ್ಕುವರೆ ಕೋಟಿ ಮೌಲ್ಯದ ಸೀರೆಗಳು ಸಿಕ್ಕಿದೆ ಅಂತೆ. ಯಾರೋ ಒಬ್ಬ ಆಕಾಂಕ್ಷೆಯನ್ನು ಹೊರತುಪಡಿಸಿದರೆ ಬೇರೆಯವರ ಬಳಿ ದುಡ್ಡು ಇರುವುದು ನನಗೆ ಗೊತ್ತಿಲ್ಲ. ನೀವು ವಾರ್ಡ್‌ಗಳಲ್ಲಿ ಹಣವನ್ನು ಡೆಪಾಸಿಟ್ ಮಾಡಿ ಇಟ್ಟಿರುವುದು ನನಗೆ ಗೊತ್ತಿದೆ. ಅವರಿಗೆ ನಾಲ್ಕು ಅವಕಾಶಗಳನ್ನು ಕೊಟ್ಟಿದ್ದೇವೆ ಅವನೇನು ಮಾಡಿದ್ದಾನೆ ಎಂದು ಹೇಳಿದ್ದೀರಾ? ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ,ರೈಲ್ವೆ ಮತ್ತು ಅವರ ಮಗ ಸಂಸದ ರಾಘವೇಂದ್ರ ಮಾಡಿದ್ದಾರೆ. ನೀವು ಏನು ಮಾಡಿದ್ದೀರಾ? ಈಶ್ವರಪ್ಪನವರ ನೀವು ಹೇಳಿಕೊಳ್ಳುವ ಒಂದು ಕೆಲಸ ಮಾಡಿಲ್ಲ. ಪ್ರಚೋದನೆಯಾಗಿ ಮಾತನಾಡಿ ಗಲಭೆಯಾದರೆ ಅದರ ಫಲಿತಾಂಶ ತಮ್ಮ ಪರವಾಗಿ ಬರುತ್ತದೆ ಎಂದು ಹೊರಟಿದ್ದೀರಾ? ಕ್ಷೇತ್ರದ ಜನತೆಯ ಋಣವನ್ನು ಎಂದು ನೀವು ತಿಳಿಸಿಲ್ಲ ಎಂದು ಟೀಕೆ ಮಾಡಿದರು.

ಬಿಜೆಪಿಗೆ ಬಿಸಿತುಪ್ಪ ಆಗು​ವ​ರೇ ಆಯನೂರು ಮಂಜುನಾಥ್‌? : ಪಕ್ಷೇತರವಾಗಿ ಸ್ಪರ್ಧೆ ಖಚಿತ

ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುವ ಸಾಧ್ಯತೆಯಿದೆ: ನನಗಂತೂ ಸೀರೆ ಕೊಡಿಸೊ ತಾಕತ್ತು ಇಲ್ಲ. ಕಂಡವರಿಗೆ ಸೀರೆ ಉಡಿಸೋ ಅಗತ್ಯವೂ ಇಲ್ಲ. ಶಿವಮೊಗ್ಗದಲ್ಲಿ ಚುನಾವಣೆ ಸಂದರ್ಭದಲ್ಲಿ ಈಶ್ವರಪ್ಪ ಸೀತಾವರಣಯಿಂದ ಬೆಂಬಲಿಗರು ಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಬೇಕು. ತಮ್ಮ ಸ್ಪರ್ಧೆ ಬಿಜೆಪಿಯವರ ವಿರುದ್ಧ ಅಲ್ಲ ಈಶ್ವರಪ್ಪನವರ ಸ್ವಭಾವಕ್ಕೆ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿಯಲ್ಲಿ 32 ವರ್ಷಗಳ ಕಾಲ ಸೋತಾಗಲೂ, ಗೆದ್ದಾಗಲೂ ಈಶ್ವರಪ್ಪ ಸ್ಥಾನಮಾನ ಅನುಭವಿಸಿದರು. ನಾನು 4 ದಿನಗಳಲ್ಲಿ ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಈಗಲೇ ಯಾವ ಪಕ್ಷದಿಂದ ಸ್ಪರ್ಧೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಗೆಲ್ಲಲು ಸ್ಪರ್ಧೆ ಮಾಡುತ್ತೇನೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಆಯನೂರು ಮಂಜುನಾಥ್‌ ತಿಳಿಸಿದರು.

Latest Videos
Follow Us:
Download App:
  • android
  • ios