Asianet Suvarna News Asianet Suvarna News

ಮುಡಾದಲ್ಲಿ ಏನು ತಪ್ಪಾಗಿದೆ ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ: ಸಚಿವ ಆರ್‌.ಬಿ.ತಿಮ್ಮಾಪೂರ

ಮುಡಾದಲ್ಲಿ ಏನು ತಪ್ಪಾಗಿದೆ ಅದನ್ನು ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ. ಪಾದಯಾತ್ರೆ ಮಾಡ್ತಿದ್ದಾರಲ್ಲ ಇವರು ಕೋರ್ಟ್‌ಗೆ ಸಾಕ್ಷಿ ನೀಡಲಿ. ಇವರಿಗೆ ತಾಖತ್ ಇದ್ದರೇ ಅಪಿಡಿವಿಟ್ ಮಾಡಿ ಕೋರ್ಟ್‌ಗೆ ಕೊಡಲಿ ಎಂದು ಸಚಿವ ಆರ್‌.ಬಿ.ತಿಮ್ಮಾಪೂರ ಸವಾಲು ಹಾಕಿದರು. 
 

What is wrong with Muda should be given on bond to the court saya rb timmapur gvd
Author
First Published Aug 7, 2024, 4:25 PM IST | Last Updated Aug 7, 2024, 4:39 PM IST

ಬಾಗಲಕೋಟೆ  (ಆ.07): ಮುಡಾದಲ್ಲಿ ಏನು ತಪ್ಪಾಗಿದೆ ಅದನ್ನು ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ. ಪಾದಯಾತ್ರೆ ಮಾಡ್ತಿದ್ದಾರಲ್ಲ ಇವರು ಕೋರ್ಟ್‌ಗೆ ಸಾಕ್ಷಿ ನೀಡಲಿ. ಇವರಿಗೆ ತಾಖತ್ ಇದ್ದರೇ ಅಪಿಡಿವಿಟ್ ಮಾಡಿ ಕೋರ್ಟ್‌ಗೆ ಕೊಡಲಿ ಎಂದು ಸಚಿವ ಆರ್‌.ಬಿ.ತಿಮ್ಮಾಪೂರ ಸವಾಲು ಹಾಕಿದರು. ಮುಡಾ ಹಗರಣ, ಸರ್ಕಾರಕ್ಕೆ ಉರುಳು ಆಗಲಿದೆಂಬ ವಿರೋಧ ಪಕ್ಷದ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರಕ್ಕೆ ಉರುಳು ಅಂತಾ ಹೇಳಿರಬೇಕು ನೋಡಿ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಏನು ಇಲ್ಲದೇ ಸಿಎಂ ಸಿದ್ದರಾಮಯ್ಯನವರ ಮೇಲೆ ಆರೋಪ ಹೊರಡಿಸುತ್ತಿದ್ದಾರೆ ಎಂದು ದೂರಿದರು.

ಕೇಂದ್ರದಲ್ಲಿ ಬಿಜೆಪಿಗೆ ಜನಾ ಪೂರ್ಣ ಪ್ರಮಾಣದ ಬಹುಮತ ನೀಡಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ 136 ಶಾಸಕರ ಬಹುಮತವಿದೆ. ಸರ್ಕಾರ ಹೇಗೆ ಪತನ ಆಗುತ್ತದೆ. ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ ಎಂದು ಕಿಡಿಕಾರಿದರು. ಸಿಎಂ ಹೆಸರು ಕೆಡಿಸಲು ಕೈಗೊಂಡ ಪಾದಯಾತ್ರೆಯಲ್ಲಿ ಇವರು ಯಾರು ಸಫಲರಾಗಲ್ಲ. ರಾಜ್ಯದ ಜನತೆ ಛೀಮಾರಿ ಹಾಕ್ತಾರೆ. ರಾಜ್ಯಪಾಲರನ್ನು ದುರುಪಯೋಗ ಪಡೆಸಿಕೊಳ್ತಿದ್ದಾರೆ. ಸಿಎಂಗೆ ಹೇಗೆ ರಾಜ್ಯಪಾಲರು ನೋಟಿಸ್ ಕೊಟ್ರು, ಪ್ರಜಾಪ್ರಭುತ್ವ ವಿರೋಧಿ ರಾಜ್ಯಪಾಲರು ಈ ರಾಜ್ಯಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.

ಸಿಎಂ ಹೆಸರು ಕೆಡಿಸಲು ಪಾದಯಾತ್ರೆ: ಜನ ಬಿಜೆಪಿಗೆ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಬಹುಮತ ನೀಡಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ 136 ಶಾಸಕರ ಮೇಜಾರೆಟಿ ಇದೆ, ಸರ್ಕಾರ ಹೇಗೆ ಪತನ ಆಗುತ್ತದೆ. ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. ಮುಡಾ ಹಗರಣ, ಸರ್ಕಾರಕ್ಕೆ ಉರುಳು ಆಗಲಿದೆ ಎಂಬ ವಿರೋಧ ಪಕ್ಷದ ಮಾತಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಆರ್.ಬಿ.ತಿಮ್ಮಾಪೂರ ಅವರು, ಕೇಂದ್ರ ಸರ್ಕಾರಕ್ಕೆ ಉರುಳು ಅಂತಾ ಹೇಳಿರಬೇಕು ನೋಡಿ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಮುಡಾದಲ್ಲಿ ಏನು ತಪ್ಪಾಗಿದೆ. 

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಅದನ್ನ ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ, ಪಾದಯಾತ್ರೆ ಮಾಡ್ತಿದ್ದಾರಲ್ಲ, ಇವರು ಕೋರ್ಟ್‌ಗೆ ನೀಡಲಿ ಸಾಕ್ಷಿ. ಅಪಿಡಿವಿಟ್ ಮಾಡಿ ಕೋರ್ಟ್‌ಗೆ ಕೊಡಲಿ ಇವರಿಗೆ ತಾಖತ್ ಇದ್ರೆ. ಅದನ್ನು ಬಿಟ್ಟು ಏನು ಇಲ್ಲದೇ ಸಿಎಂ ಸಿದ್ದರಾಮಯ್ಯ ನವರ ಮೇಲೆ ಆರೋಪ ಹೊರಸುತ್ತಿದ್ದಾರೆ. ಸಿಎಂ ಹೆಸರು ಕೆಡಿಸಲು ಕೈಗೊಂಡ ಪಾದಯಾತ್ರೆಯಲ್ಲಿ ಇವರು ಯಾರು ಸಫಲರಾಗಲ್ಲ. ರಾಜ್ಯದ ಜನತೆ ಛೀಮಾರಿ ಹಾಕ್ತಾರೆ. ರಾಜ್ಯಪಾರನ್ನು ದುರುಪಯೋಗ ಪಡೆಸಿಕೊಳ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. ಸಿಎಂಗೆ ಹೇಗೆ ರಾಜ್ಯಪಾಲರು ನೋಟಿಸ್ ಕೊಟ್ರು, ಪ್ರಜಾಪ್ರಭುತ್ವ ವಿರೋಧಿ ರಾಜ್ಯಪಾಲರು ಈ ರಾಜ್ಯಕ್ಕೆ ಬಂದಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

Latest Videos
Follow Us:
Download App:
  • android
  • ios