ಪ್ರಿಯಾಂಕ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದರೆ ಸ್ವಾಗತ: ಶೋಭಾ ಕರಂದ್ಲಾಜೆ

*  ತನ್ನ ಕೆಟ್ಟ ಸಮಯದಲ್ಲಿ ಕರ್ನಾಟಕದಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿ 
*  ಸೋನಿಯಾ ಗಾಂಧಿ ಕೂಡಾ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದರು
*  ನಿರ್ಮಲಾ ಇಲ್ಲಿಂದಲೇ ಸ್ಪರ್ಧಿಸಲಿ 
 

Welcome to Priyanka Gandhi If Contest from Karnataka Says Union Minister Shobha Karandlaje grg

ಉಡುಪಿ(ಮೇ.15):  ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ(Priyanka Gandhi) ಕರ್ನಾಟಕದಿಂದ(Karnataka) ರಾಜ್ಯಸಭೆಗೆ ಸ್ಪರ್ಧಿಸಿದರೆ ಸ್ವಾಗತ, ಯಾರು ಬೇಕಾದರೂ ಕರ್ನಾಟಕದಿಂದ ಸ್ಪರ್ಧಿಸಬಹುದು. ಅವರ ಅಜ್ಜಿ, ಅಮ್ಮನನ್ನು ಸ್ವಾಗತಿಸಿದ್ದೇವೆ. ತನ್ನ ಕೆಟ್ಟ ಸಮಯದಲ್ಲಿ ಇಂದಿರಾ ಗಾಂಧಿ(Indira Gandhi) ಕರ್ನಾಟಕದಿಂದ ಸ್ಪರ್ಧಿಸಿದ್ದರು, ನಂತರ ಸೋನಿಯಾಗಾಂಧಿ ಕೂಡಾ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದರು, ಈಗ ಪ್ರಿಯಾಂಕ ಸ್ಪರ್ಧಿಸಿದರೂ ಸ್ವಾಗತ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಹೇಳಿದ್ದಾರೆ.

ಉಡುಪಿಯಲ್ಲಿ(Udupi) ಶನಿವಾರ ಸುದ್ದಿಗರಾರರೊಂದಿಗೆ ಮಾತನಾಡಿದ ಅವರು, ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ನೆಲಕಚ್ಚುತ್ತಿದೆ. ಉತ್ತರ ಪ್ರದೇಶದಲ್ಲೂ(Uttar Pradesh) ಹಾಗೇ ಆಗಿತ್ತು, ಅಲ್ಲಿ ಕಾಂಗ್ರೆಸ್‌ನ್ನು(Congress) ಮೇಲೆತ್ತಲು ಪ್ರಿಯಾಂಕ ಹೋಗಿದ್ದರು. ಈಗ ಅದೇ ರೀತಿ ಕರ್ನಾಟಕಕ್ಕೆ ಬರುತ್ತಿರಬಹುದು, ಅದು ಒಳ್ಳೆಯ ಬೆಳವಣಿಗೆ ಖಂಡಿತಾ ಬರಲಿ ಎಂದು ಶೋಭಾ ಹೇಳಿದರು. ಕಾಂಗ್ರೆಸ್‌ ಒಂದು ರಾಷ್ಟ್ರೀಯ ಪಕ್ಷ, ಆದ್ದರಿಂದ ಪ್ರಿಯಾಂಕ ಅವರು ಹಿಂಬಾಗಿಲಿನಿಂದ ಸಂಸತ್‌ಗೆ ಬರುವ ಬದಲು ಲೋಕಸಭೆಗೆ ಸ್ಪರ್ಧಿಸಿ ಬಂದರೆ ಉತ್ತಮ ಎಂದವರು ಸಲಹೆ ಮಾಡಿದರು.

ಹುಸೇನ್ ಪೇಂಟಿಂಗ್‌ನ್ನು 2 ಕೋಟಿ ನೀಡಿ ಖರೀದಿಸುವಂತೆ ಪ್ರಿಯಾಂಕಾ ಗಾಂಧಿ ಒತ್ತಡ ಹೇರಿದ್ದರು: ರಾಣಾ ಕಪೂರ್

ನಿರ್ಮಲಾ ಇಲ್ಲಿಂದಲೇ ಸ್ಪರ್ಧಿಸಲಿ: 

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ನಮ್ಮ ರಾಜ್ಯದಿಂದ ಆಯ್ಕೆಯಾಗಿ ದೆಹಲಿಗೆ ಹೋಗಿ ಮಾಡಿರುವ ಸಾಧನೆ ದೊಡ್ಡದು, ದೇಶದ ಆರ್ಥಿಕ ಮತ್ತು ರಕ್ಷಣಾ ಸಚಿವೆಯಾಗಿರುವುದು ಸಣ್ಣ ವಿಚಾರ ಅಲ್ಲ. ಕೊರೋನಾದ ಸವಾಲಿನಲ್ಲಿಯೂ ಉತ್ತಮವಾಗಿ ದೇಶದ ಅರ್ಥ ವ್ಯವಸ್ಥೆಯನ್ನು ನಿರ್ವಹಣೆ ಮಾಡಿದ್ದಾರೆ. ಅವರು ಮತ್ತೊಮ್ಮೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಸ್ಪರ್ಧಿಸಲಿ ಎಂದು ಶೋಭಾ ಕರಂದ್ಲಾಜೆ ಆಶಿಸಿದರು.

ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸ್ತಾರಾ ಪ್ರಿಯಾಂಕಾ ಗಾಂಧಿ..?

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಸಿದ್ದು, ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮತ್ತೊಂದು ಕಾಂಗ್ರೆಸ್‌ನಲ್ಲೂ ತಯಾರಿ ನಡೆದಿದ್ದು, ಕರ್ನಾಟಕಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಕರೆತರುವುದಕ್ಕೆ ರಾಜ್ಯ ಕಾಂಗ್ರೆಸ್ ಆಹ್ವಾನಿಸಿದೆ. ಕರ್ನಾಟಕ ರಾಜ್ಯಸಭೆಗೆ ಸ್ಪರ್ಧೆ ಮಾಡುವಂತೆ ಪ್ರಿಯಾಂಕಾ ಗಾಂಧಿಯವರಿಗೆ ಆಹ್ವಾನಿಸಲಾಗಿದೆ. 
 

Latest Videos
Follow Us:
Download App:
  • android
  • ios