ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ/ ಬಿಜೆಪಿ ನಾಯಕನಿಂದ ತೀವ್ರ ವೈಯಕ್ತಿಕ ಟೀಕೆ/ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ/ ಮಮತಾ ಸೀರೆ ಯಾಕೆ ಧರಿಸುತ್ತೀರಿ ಬರ್ಮುಡಾ ಧರಿಸಿ ಎಂದ ನಾಯಕ

ಕೋಲ್ಕತಾ (ಮಾ. 24) ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿದೆ. ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಕ್ ಸಮರ ದಿನೇ ದಿನೇ ಜೋರಾಗುತ್ತಿದೆ. 

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿದ್ದ ಟೀಕೆ ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.

ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು ಟೀಕೆ ವ್ಯಕ್ತವಾಗಿದೆ.

ಪಂಚರಾಜ್ಯ ಚುನಾವಣಗೆ ಬಿಜೆಪಿ ಕೊಟ್ಟ ಪ್ರಣಾಳಿಕೆ

ಪುರುಲಿಯಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ದಿಲೀಪ್ ಘೋಷ್, 'ಮಮತಾ ಬ್ಯಾನರ್ಜಿ ತಮ್ಮ ಮುರಿದ ಕಾಲನ್ನು ಎಲ್ಲರಿಗೂ ತೋರಿಸಲು ಬಯಸುತ್ತಿದ್ದಾರೆ. ಹಾಗಾಗಿ ಅವರು ಸೀರೆ ಏಕೆ ಧರಿಸಬೇಕು? ಬರ್ಮುಡಾ ಹಾಕಿಕೊಂಡರೆ ಎಲ್ಲರಿಗೂ ಅವರ ಕಾಲು ಸ್ಪಷ್ಟವಾಗಿ ಕಾಣಿಸುತ್ತದೆ' ಎಂದು ಮಾತನಾಡಿದ್ದು ವಿವಾದ ಸೃಷ್ಟಿಸಿದೆ.

ಒಂದು ಕಾಲು ಕಾಣಿಸುವಂತೆ, ಮತ್ತೊಂದು ಕಾಣಿಸದಂತೆ ಮಮತಾ ಬ್ಯಾನರ್ಜಿ ಸೀರೆ ಧರಿಸಿತ್ತಾರೆ. ಈ ರೀತಿಯಲ್ಲಿ ಸೀರೆ ಧರಿಸುವುದನ್ನು ನಾನೆಂದೂ ನೋಡಿಲ್ಲ "ನಿಮ್ಮ ಕಾಲು ಜನರು ನೋಡಬೇಕು ಎಂದು ನೀವು ಬಯಸಿದರೆ, ಸೀರೆ ಏಕೆ ಧರಿಸುತ್ತೀರಿ.. ಬರ್ಮುಡಾ ಧರಿಸಿ ಎಂದು ತೀವ್ರ ವೈಯಕ್ತಿಕ ಟೀಕೆ ಮಾಡಿದ್ದಾರೆ. ಚುನಾವಣಾ ಮೆರವಣಿಗೆ ವೇಳೆ ಕಾಲಿಗೆ ಗಾಯಮಾಡಿಕೊಂಡಿದ್ದ ಮಮತಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು .