ಮೋದಿ ಹಾಗೂ ಶ್ರೀರಾಮನ ಕೈಯಲ್ಲಿ ಸಿಕ್ಕು 'ಇಂಡಿಯಾ ಒಕ್ಕೂಟ' ಚಿಂದಿ ಚಿತ್ರಾನ್ನ ಆಗೋಗಿದೆ: ಶ್ರೀರಾಮುಲು ವ್ಯಂಗ್ಯ

ಈ ಚುನಾವಣೆಯಲ್ಲಿ(ಲೋಕಸಭಾ ಚುನಾವಣೆ) ಇಡೀ ದೇಶದಲ್ಲಿ ಎರಡೇ ಮುಖ ಕಾಣಿಸುತ್ತಿದೆ. ಒಂದು ಕಡೆ ಮೋದಿ, ಇನ್ನೊಂದು ಕಡೆ ಪ್ರಭು ಶ್ರೀರಾಮನ ಮುಖವಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮಲು ಹೇಳಿದರು.

We will win 400 seats in the Lok Sabha elections says B sriramulu at bellary rav

ಬಳ್ಳಾರಿ (ಫೆ.1): ಈ ಚುನಾವಣೆಯಲ್ಲಿ(ಲೋಕಸಭಾ ಚುನಾವಣೆ) ಇಡೀ ದೇಶದಲ್ಲಿ ಎರಡೇ ಮುಖ ಕಾಣಿಸುತ್ತಿದೆ. ಒಂದು ಕಡೆ ಮೋದಿ, ಇನ್ನೊಂದು ಕಡೆ ಪ್ರಭು ಶ್ರೀರಾಮನ ಮುಖವಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮಲು ಹೇಳಿದರು.

ಬಳ್ಳಾರಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಪ್ರಭು ಶ್ರೀರಾಮ, ಪ್ರಧಾನಿ ಮೋದಿ ಎರಡೇ ಹೆಸರು ಕೇಳಿಬರುತ್ತಿವೆ. ಇಂಡಿಯಾ ಒಕ್ಕೂಟ ಈಗ ಒಡೆದ ಮನೆಯಾಗಿದೆ. ಮಮತಾ ದೀದಿ ಒಕ್ಕೂಟ ಬಿಟ್ಟು ಪಶ್ಚಿಮ ಬಂಗಾಳಕ್ಕೆ ಓಡಿಹೋದರು. ಇತ್ತ ನಿತೀಶ್ ಕುಮಾರ್ ಅವರು ಅರ್ ಜೆ ಡಿ ಬಿಟ್ಟು ಬಿಜೆಪಿ ಜೊತೆ ಬಂದು ಮತ್ತೆ ಸಿಎಂ ಆದ್ರು. ಮಿತ್ರ ಪಕ್ಷಗಳು ಈಗ ಮೋದಿ ಹಾಗೂ ಶ್ರೀರಾಮನ ಕೈಯಲ್ಲಿ ಸಿಕ್ಕು ಚಿಂದಿ ಚಿತ್ರಾನ್ನ ಆಗಿವೆ ಎಂದು ವ್ಯಂಗ್ಯ ಮಾಡಿದರು.

ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಬಾಗಲಕೋಟೆಯಿಂದ ಸೈಕಲ್ ಯಾತ್ರೆ ಹೊರಟ ಯುವಕರು!

ಬಿಜೆಪಿಗೆ ಮತ ಹಾಕುವುದೆಂದರೆ ಕೇವಲ ಪ್ರಧಾನಿ ಮೋದಿಗಲ್ಲ, ಪ್ರಭು ಶ್ರೀರಾಮನಿಗಾಗಿ ಹಾಕಬೇಕಿದೆ. ಶ್ರೀರಾಮ ಕೇವಲ ಹಿಂದುಗಳಿಗೆ ಸಂಬಂಧಿಸಿದ ವ್ಯಕ್ತಿ ಅಲ್ಲ, ಈ ದೇಶದ 120 ಕೋಟಿ ಜನರಿಗೆ ರಾಮ ಬೇಕು. ಲೋಕಸಭಾ ಚುನಾವಣೆ ಸಮೀಪಿಸುವ ಹೊತ್ತಿಗೆ ಇಂಡಿ ಒಕ್ಕೂಟದಲ್ಲಿ ಒಂದೇ ಒಂದು ಪಾರ್ಟಿ ಉಳಿಯುತ್ತದೆ ಅದು ರಾಹುಲ್ ಗಾಂಧಿಯ ಕಾಂಗ್ರೆಸ್‌ ಪಾರ್ಟಿ. ಈ ಬಾರಿ ಬಿಜೆಪಿ 400 ಸೀಟು ಗೆಲ್ಲುತ್ತದೆ ಎಂದು ಅದು ಕೊಂಡಿದ್ದೇವೆ ಅದು 500 ದಾಟಿದರೂ ಅಚ್ಚರಿ ಇಲ್ಲ ಎಂದರು.

Latest Videos
Follow Us:
Download App:
  • android
  • ios