ಬೆಂಗಳೂರು (ಅ.20):  ‘ನನಗೆ ವಯಸ್ಸಾಯಿತು ಎಂದು ಸುಮ್ಮನೆ ಕೂರಲ್ಲ. ನನಗೆ ಛಲ ಇದ್ದು, ಪಕ್ಷದ ಉಳಿವಿಗಾಗಿ ಹೋರಾಟ ಮಾಡುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಸೋಮವಾರ ಪ್ರಸಕ್ತ ವಿಧಾನಪರಿಷತ್‌ ಚುನಾವಣೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಧಾನಪರಿಷತ್‌ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳು ಅತಿ ವಿಶ್ವಾಸದಲ್ಲಿವೆ. ಅವುಗಳ ಶಕ್ತಿ ಏನೆಂದು ಗೊತ್ತಿದೆ. ಪ್ರಾದೇಶಿಕ ಪಕ್ಷ ಉಳಿಸಲೇಬೇಕು ಎಂಬ ಹಟ ನಮಗೂ ಇದೆ. ಪ್ರಾದೇಶಿಕ ಪಕ್ಷ ಉಳಿಸಲು ಇತರ ರಾಜ್ಯಗಳಲ್ಲಿ ಹೋರಾಟ ನಡೆಸಲಾಗುತ್ತಿದೆ. ಅದೇ ಮಾದರಿಯ ನಾವು ಕೂಡ ಹೋರಾಟ ಮಾಡುತ್ತೇವೆ ಎಂದರು.

'ದಿನಕ್ಕೆ 3 ಸಲ ಪ್ರಧಾನಿ ಮೋದಿ ಡ್ರೆಸ್‌ ಚೇಂಜ್‌, ದೇವೇಗೌಡ್ರು ಒಂದೇ ಸಲ'

ಆರ್‌.ಆರ್‌.ನಗರ ಕ್ಷೇತ್ರದ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗುರುವಾರದಿಂದ ನಾನು ಶಿರಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತೇನೆ. ಕೆ.ಆರ್‌.ಪೇಟೆಯಲ್ಲಿ ಆದ ರೀತಿಯಲ್ಲಿಯೇ ಶಿರಾದಲ್ಲಿಯೂ ಮಾಡುತ್ತೇವೆ ಎನ್ನುವ ಉದ್ಧಟನತದ ಮಾತನ್ನು ಕೆಲವರು ಹೇಳುತ್ತಿದ್ದಾರೆ. ನಾವು ಅಷ್ಟುಶಕ್ತರಲ್ಲ. ಆದರೆ ಸಂಘಟನೆಯಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರು, ಯುವಕರು ಹೋರಾಟ ಮಾಡುತ್ತಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

ಓಬಿಸಿ ನಾಯಕರಾಗಲು ಹೊರಟಿದ್ದಾರೆ:

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಯಾವುದೇ ಬತ್ತಳಿಕೆ ಇಲ್ಲದ ಹಿನ್ನೆಲೆಯಲ್ಲಿ ಓಬಿಸಿ ಮೀಸಲಾತಿಯನ್ನಿಟ್ಟುಕೊಂಡು ಮಹಾನ್‌ ನಾಯಕರಾಗಲು ಹೊರಟ್ಟಿದ್ದಾರೆ. ಸಿದ್ದರಾಮಯ್ಯ ಡಬಲ್‌ಗೇಮ್‌ ರಾಜಕಾರಣ ಬಿಟ್ಟು ನೇರವಾಗಿ ರಾಜಕಾರಣ ಮಾಡಬೇಕು. ಜಾತಿಗಳನ್ನು ಒಡೆದು ರಾಜಕಾರಣ ಮಾಡಿದರೆ ಬಹಳ ದಿನ ನಡೆಯುವುದಿಲ್ಲ. ಮೀಸಲಾತಿ ಕುರಿತು ಚರ್ಚೆ ಮಾಡುವುದಕ್ಕಿಂತ ಜಾತಿಯಲ್ಲಿನ ಬಡತನ ನಿವಾರಣೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಗಮನಹರಿಸಬೇಕು ಎಂದು ಟೀಕಾಪ್ರಹಾರ