Asianet Suvarna News Asianet Suvarna News

ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ: ಪ್ರಲ್ಹಾದ್‌ ಜೋಶಿ

ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಸೂಕ್ತ ನಿರ್ಧಾರ. ಕಾಂಗ್ರೆಸ್‌ನಂತೆ ಇದು ವಂಶಪಾರಂಪರ್ಯ ಅಧಿಕಾರವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.
 

We will further strengthen the BJP under the leadership of BSY Says Pralhad Joshi gvd
Author
First Published Nov 13, 2023, 10:23 PM IST

ಹುಬ್ಬಳ್ಳಿ (ನ.13): ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಸೂಕ್ತ ನಿರ್ಧಾರ. ಕಾಂಗ್ರೆಸ್‌ನಂತೆ ಇದು ವಂಶಪಾರಂಪರ್ಯ ಅಧಿಕಾರವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಆಯ್ಕೆ ಮಾಡುವ ಮೂಲಕ ಪಕ್ಷ ಯುವಕರಿಗೆ ಆದ್ಯತೆ ನೀಡಿದೆ. ನಾನು ವಿಜಯೇಂದ್ರ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ನಾಯಕತ್ವದಲ್ಲಿ, ಯಡಿಯೂರಪ್ಪ ನೇತೃತ್ವದಲ್ಲಿ ನಾವು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ. 

ಮೋದಿ ಅವರು ದೇಶಕ್ಕೆ ಮಾಡಿರುವ ಕೆಲಸ, ಜನ ಕಲ್ಯಾಣ ಕಾರ್ಯಗಳಿಂದ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ಚಾಸ ವ್ಯಕ್ತಪಡಿಸಿದರು. ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಯಡಿಯೂರಪ್ಪನವರು ಪಕ್ಷಾತೀತ ನಾಯಕ. ಅವರು ಲಿಂಗಾಯತರಿಗೆ ಮಾತ್ರವಲ್ಲ, ಎಲ್ಲ ಜನಾಂಗದ ನಾಯಕರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಲ ಮಾಡಿ ಬೆಳೆದಿದ್ದ ರಾಗಿ ತೆನೆ ತಿಂದು ತೇಗಿದ ಕಾಡು ಹಂದಿಗಳು: ರೈತರ ಕಣ್ಣೀರು

ವಂಶಪಾರಂಪರ್ಯವಲ್ಲ!: ವಿಜಯೇಂದ್ರ ಆ ಹುದ್ದೆಗೆ ಬರುವ ಮುನ್ನ ಯುವ ಮೋರ್ಚಾದಲ್ಲಿ ಕೆಲಸ ಮಾಡಿದ್ದಾರೆ. ಇದು ವಂಶಪಾರಂಪರ್ಯ ಅಧಿಕಾರವಲ್ಲ. ಕಾಂಗ್ರೆಸ್‌ನಲ್ಲಿ ಹಾಗಲ್ಲ, ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅದು ವಂಶಪಾರಂಪರ್ಯ ಅಧಿಕಾರ ವಾಗುತ್ತದೆ. ಇಡೀ ಪಕ್ಷವನ್ನು ಒಂದು ಕುಟುಂಬಕ್ಕೆ ಒಪ್ಪಿಸಿದರೆ ಅದು ವಂಶಪರಂಪರೆ ಎಂದು ವ್ಯಾಖ್ಯಾನಿಸಿದ ಅವರು, ಮೂರು ವರ್ಷ ಅವರ ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಇರಲಿಲ್ಲ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯೇ ಅವರಿಗಿಲ್ಲ ಎಂದು ಕಟಕಿಯಾಡಿದರು.

ಪೊಲೀಸ್‌ ಅಧಿಕಾರಿ ತರಾಟೆಗೆ: ಬಿಜೆಪಿ ಕಾರ್ಯಕರ್ತರಿಗೆ ಅನವಶ್ಯಕವಾಗಿ ಕಿರಿಕಿರಿ ಮಾಡಲಾಗುತ್ತಿದೆ ಎಂಬ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ ಧಾರವಾಡ ಶಹರ ಪೊಲೀಸ್‌ ಠಾಣೆ ಪಿಐ ಎನ್‌.ಸಿ. ಕಾಡದೇವರಮಠ ಅವರನ್ನು ಕಾರ್ಯಕರ್ತರ ಎದುರಿನಲ್ಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು. ಇಲ್ಲಿಯ ಮಯೂರ ಎಸ್ಟೇಟ್‌ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಾ ಬಿಜೆಪಿ ಕಾರ್ಯಕರ್ತರಿಗೆ ಅನವಶ್ಯಕವಾಗಿ ಕಿರಿಕಿರಿ ನೀಡುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ, ಠಾಣೆ ಎದುರು ಸಾವಿರಾರು ಜನರ ನೇತೃತ್ವದಲ್ಲಿ ಸ್ವತಃ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆನ್‌ಲೈನ್ ವಂಚನೆ ಮಾಡ್ತಿದ್ದ 3 ವಿದೇಶಿ ಪ್ರಜೆಗಳ ಬಂಧನ: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ...

ಇಸ್ಟೀಟ್‌ ಆಟಕ್ಕೆ ಪರವಾನಗಿ ಕೇಳಿದ್ದರೆ, ಆ ಬಗ್ಗೆ ಮಾಹಿತಿ ನೀಡಿ. ಅಲ್ಲದೇ, ಒಂದು ವೇಳೆ ಕಾನೂನುಬಾಹಿರವಾಗಿ ಇಸ್ಟೀಟ್‌ ಜೂಜಾಟ ಆಡುತ್ತಿದ್ದ ಸಾಕ್ಷ್ಯ ಸಮೇತವಾಗಿ ಹಿಡಿದು ಕಾನೂನು ಕ್ರಮ ತೆಗೆದುಕೊಳ್ಳಿ. ಆದರೆ, ಠಾಣೆಗೆ ಕರೆದು ಯಾವ ಆಧಾರದ ಮೇಲೆ ಹೊಡೆದೀರಿ ಎಂದು ಪ್ರಶ್ನಿಸಿದರು. ಈ ರೀತಿ ನಮ್ಮ ಕಾರ್ಯಕರ್ತರಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಬೆದರಿಕೆ ಹಾಕುವುದು ಮಾಡಿದ್ದೇ ಆದರೆ, ನಿಮ್ಮ ಠಾಣೆ ಎದುರಿನಲ್ಲಿನೇ ನಾನೇ ಕಾರ್ಯಕರ್ತರೊಂದಿಗೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Follow Us:
Download App:
  • android
  • ios