ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮನೆ ಸಿಗುತ್ತೆ ಎಂಬ ಶಾಸಕರ ಆಪ್ತ ಸಹಾಯಕ ಮಾತನಾಡಿದ್ದಾನೆ ಎನ್ನುವ ಸ್ಫೋಟಕ ಆಡಿಯೋ ವೈರಲ್ ಆಗಿದ್ದು, ಈಗ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.
ವಿಜಯಪುರ (ಜೂ.22): ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮನೆ ಸಿಗುತ್ತೆ ಎಂಬ ಶಾಸಕರ ಆಪ್ತ ಸಹಾಯಕ ಮಾತನಾಡಿದ್ದಾನೆ ಎನ್ನುವ ಸ್ಫೋಟಕ ಆಡಿಯೋ ವೈರಲ್ ಆಗಿದ್ದು, ಈಗ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ನಾಗಠಣ ಶಾಸಕ ವಿಠ್ಠಲ ಕಟಕಧೊಂಡ ಆಪ್ತ ಸಹಾಯಕ ವಿಠ್ಠಲ ಬಗಲಿ ಮಾತನಾಡಿದ್ದಾನೆ ಎನ್ನುವ ಆಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರ ಆಕ್ರೋಶ ಕೂಡ ವ್ಯಕ್ತವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಆದರಲ್ಲೂ ಕಾಂಗ್ರೆಸ್ ಶಾಸಕರ ಆಪ್ತ ಸಹಾಕನಿಂದಲೇ ಹಣ ನೀಡಿ ಮನೆ ತರುತ್ತಿರೋದಾಗಿ ಆಡಿಯೋದಲ್ಲಿ ಹೇಳಿದ್ದಾರೆ. ಆಪ್ತ ಸಹಾಯಕ ವಿಠ್ಠಲ ಬಗಲಿ ಫಲಾನುಭವಿ ಜೊತೆ ಸಂಭಾಷಣೆ ನಡೆಸಿರುವ ಆಡಿಯೋ ಇದೆ. ಗ್ರಾಮ ಪಂಚಾಯತಿಯಿಂದ ಮನೆ ಸಿಗಲ್ಲ. ಅದಕ್ಕೆ ಹಣ ನೀಡಿ ಮನೆ ತರುತ್ತಿರುವುದಾಗಿ ಹೇಳಿಕೆ ನೀಡಲಾಗಿದೆ.ಅಲ್ಲದೇ, ಫಲಾನುಭವಿ ತಂದೆಗೆ ಬಂದು ಭೇಟಿ ಆಗಲು ಸೂಚಿಸಿರುವ ಮಾತು ಇದೆ.
ಆಪ್ತ ಸಹಾಯಕ ವಿಠ್ಠಲ ಬಗಲಿ ಈ ಹಿಂದೆ ಸಿಂದಗಿ ಬಿಜೆಪಿ ಶಾಸಕ ರಮೇಶ ಭೂಸನೂರ ಅಪ್ತ ಸಹಾಯಕನಾಗಿದ್ದರು. ಇದೀಗ ನಾಗಠಾಣ ಕಾಂಗ್ರೆಸ್ ಶಾಸಕ ವಿಠ್ಠಲ ಕಟಕಧೋಂಡ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅತೀ ಹೆಚ್ಚು ಮನೆ ನೀಡಿರುವ ಆರೋಪ ಕೇಳಿ ಬಂದಿದ್ದು, ಇದೀಗ ಸಿಂದಗಿ ಮತಕ್ಷೇತ್ರದ ಸಾಮಾಜಿಕ ಜಾಲತಾಣದಲ್ಲಿ ಈ ಭ್ರಷ್ಟಚಾರದ ಬಗ್ಗೆ ಪೋಸ್ಟ್ ಮಾಡಿ ಅಕ್ರೋಶ ಹೊರಹಾಕಿದ್ದಾರೆ.
ಈ ಆಡಿಯೋ ವಿಚಾರ ನನಗೆ ಗೊತ್ತಿಲ್ಲ. ನಾನು ನೈಯಾ ಪೈಸೆ ತಗೆದುಕೊಂಡು ಮನೆ ಕೊಟ್ಟಿದ್ದೇನೆ ಅಂತ ಸಾಬೀತಾದರೆ ಈಗಲೇ ರಾಜಿನಾಮೆ ಕೊಡುತ್ತೇನೆ. ಮನೆ ಹಂಚಿಕೆ ಒಂದೆ ಅಲ್ಲ, ಗಂಗಾ ಕಲ್ಯಾಣ ಸೇರಿದಂತೆ ಯಾವುದೇ ಯೋಜನೆಯಲ್ಲಿ ಹಣ ಪಡೆದಿರುವುದು ಸಾಬೀತಾರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ವಿಠ್ಠಲ ಬಗಲಿ ಜೊತೆ ಮಾತನಾಡಿದ್ದೇನೆ. ಅದು ಅವನ ಧ್ವನಿ ಅಲ್ಲ ಅಂತಾ ಹೇಳಿದ್ದಾನೆ. ಆದರೂ ಕೂಡ ತನಿಖೆ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿ
-ವಿಠ್ಠಲ ಕಟಕಧೋಂಡ, ಕಾಂಗ್ರೆಸ್ ಶಾಸಕ
