Karnataka Politics: ರಾಷ್ಟ್ರವಾದಿ ಮುಸ್ಲಿಮರನ್ನು ಮಾತ್ರ ಬಿಜೆಪಿಗೆ ಸೇರಿಸಿಕೊಳ್ತೇವೆ: ಈಶ್ವರಪ್ಪ
* ಮುಸ್ಲಿಮರು ಮಾತ್ರ ಸ್ವಲ್ಪ ಬಿಜೆಪಿಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ
* ಮಕ್ಕಳಲ್ಲಿ ಯಾವ ಧರ್ಮ ಅನ್ನುವ ವಿಷಯ ಬರಬಾರದು
* ಹಿಜಾಬ್ ಧರಿಸುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ
ಬಾಗಲಕೋಟೆ(ಫೆ.05): ಕಾಂಗ್ರೆಸ್‌ನಿಂದ(Congress) ಹೊರಬರಲಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ(CM Ibrahim) ಅವರನ್ನು ಯಾವುದೇ ಕಾರಣಕ್ಕೂ ನಮ್ಮ ಹತ್ತಿರಕ್ಕೂ ಸೇರಿಸಲ್ಲ. ಇಬ್ರಾಹಿಂ ಧೂಳು ಸಹ ನಮ್ಮ ಹತ್ತಿರ ಬರಬಾರದು. ರಾಷ್ಟ್ರವಾದಿ ಮುಸ್ಲಿಮರನ್ನು(Nationalist Muslims) ಖಂಡಿತ ಬಿಜೆಪಿಗೆ(BJP) ಸೇರಿಸಿಕೊಳ್ಳುತ್ತೇವೆ. ಆದರೆ, ಸಿ.ಎಂ.ಇಬ್ರಾಹಿಂ ಅವರನ್ನು ಮಾತ್ರ ಯಾವುದೇ ಕಾರಣಕ್ಕೂ ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಚಿವ ಈಶ್ವರಪ್ಪ(KS Eshwarappa) ಹೇಳಿದ್ದಾರೆ.
ನಗರದಲ್ಲಿ(Bagalkot) ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಮುಸ್ಲಿಮರು ಇದೀಗ ಬಿಟ್ಟು ಹೋಗುತ್ತಿರುವುದನ್ನು ನೋಡಿದರೆ ಅವರಿಗೂ ಸ್ವಾತಂತ್ರ್ಯ ನಂತರದ 75 ವರ್ಷಗಳ ಬಳಿಕ ನಮ್ಮನ್ನು ಕೇವಲ ವೋಟ್ ಬ್ಯಾಂಕ್(Vote Bank) ಆಗಿ ಬಳಸಿಕೊಂಡಿದ್ದಾರೆ ಎಂಬುವುದು ಅರ್ಥವಾಗುತ್ತಿದೆ. ಸದ್ಯ ಇಬ್ರಾಹಿಂ ಕಾಂಗ್ರೆಸ್ ತ್ಯಜಿಸುತ್ತಿದ್ದು ಜಮೀರ್(Zameer Ahmed Khan) ಸಹ ಎಲ್ಲಿ ಕಾಣುತ್ತಿಲ್ಲ. ಜಮೀರ ಕಾಂಗ್ರೆಸ್ ಜೊತೆಯೂ ಇಲ್ಲ, ಡಿಕೆಶಿ ಜೊತೆಯೂ ಇಲ್ಲ, ಸಿದ್ದರಾಮಯ್ಯ ಜೊತೆಯೂ ಇಲ್ಲ. ಬಿಜೆಪಿ ಜೊತೆ ದಲಿತರು, ಹಿಂದುಳಿದವರು ಇದ್ದಾರೆ. ಮುಸ್ಲಿಮರು(Muslim) ಮಾತ್ರ ಸ್ವಲ್ಪ ಬಿಜೆಪಿಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಹೇಳಿದರು.
Cabinet Reshuffle:ಕೇಂದ್ರ ನಾಯಕರ ಸೀಕ್ರೆಟ್ ನಾನು ಹೇಳಲ್ಲ: ಈಶ್ವರಪ್ಪ
ಶಾಲಾ-ಕಾಲೇಜುಗಳಲ್ಲಿ ಮಕ್ಕಳು ಶಿಕ್ಷಣ ಕಲಿಯಲಿಕ್ಕೆ ಹೋಗುವುದು, ಮಕ್ಕಳಲ್ಲಿ ಯಾವ ಧರ್ಮ ಅನ್ನುವ ವಿಷಯ ಬರಬಾರದು. ಯಾವುದೇ ಕಾರಣಕ್ಕೂ ಹಿಜಾಬ್(Hijab) ಧರಿಸುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಅಂತ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಾಸಕರು ಸಂಪುಟದ ಕುರಿತು ಗೊಂದಲ ಎಬ್ಬಿಸ್ಬೇಡಿ:
ಶಿವಮೊಗ್ಗ: ನಾಲ್ಕು ಸಚಿವ ಸ್ಥಾನ ಖಾಲಿ ಇದ್ದು, ಆ ಜಾಗ ತುಂಬಬೇಕೋ ಅಥವಾ ಸಂಪುಟ ಪುನಾರಚನೆ ಮಾಡಬೇಕೆ ಎಂಬುದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ಅಲ್ಲಿಯವರೆಗೆ ಯಾವ ಶಾಸಕರೂ ಕೂಡ ಹೇಳಿಕೆ ನೀಡಿ, ಗೊಂದಲ ಎಬ್ಬಿಸುವುದು ಒಳ್ಳೆಯದಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಫೆ.3 ರಂದು ಶಿವಮೊಗ್ಗದಲ್ಲಿ(Shivamogga) ಮಾತನಾಡಿದ ಅವರು, ಸಚಿವ ಶ್ರೀರಾಮುಲು(Sriramulu) ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಮಾಧ್ಯಮಗಳ ಕಲ್ಪನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅವರು ಸ್ನೇಹಿತರು, ನಮ್ಮ ಮನೆಗೂ ಸಿದ್ದರಾಮಯ್ಯ ಬಂದಿದ್ದರು, ನಾನು ಡಿಕೆಶಿ ಮನೆಗೆ ಹೋಗಿದ್ದೆ, ಅದಕ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸ್ನೇಹ ಬೇರೆ, ರಾಜಕಾರಣ ಬೇರೆ ಎಂದು ಹೇಳಿದರು.
ಇನ್ನು ನದಿ ಜೋಡಣೆಗೆ ಸಂಬಂಧಿಸಿದಂತೆ ಮಾತನಾಡಿ, ಅದು ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ. ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೇ ಯೋಜನೆ ಜಾರಿ ಮಾಡಲ್ಲ. ನದಿ ನೀರು ಪೋಲಾಗಬಾರದು ಬರಡು ಭೂಮಿಗೆ ನೀರು ಒದಗಿಸಬೇಕು ಎಂಬುದು ವಾಜಪೇಯಿ ಅವರ ಕನಸಾಗಿತ್ತು. ನದಿ ಜೋಡಣೆಯಿಂದ ಕುಡಿಯಲು ಮತ್ತು ಕೃಷಿಗೆ ನೀರಿನ ಸೌಲಭ್ಯ ಸಿಗುತ್ತದೆ. 9 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಸಿಗಲಿದ್ದು, ಕೇಂದ್ರದ ಈ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ, ರಾಜ್ಯಕ್ಕೆ ಅನ್ಯಾಯ ಮಾಡಿ ನದಿ ಜೋಡಣೆ ಜಾರಿಗೆ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Karnataka Politics: ಸಿದ್ದು, ಇಬ್ರಾಹಿಂ ಇಬ್ಬರೂ ಅವಳಿಯಿದ್ದಂತೆ: ಈಶ್ವರಪ್ಪ
ಮಾರ್ಚ್, ಏಪ್ರಿಲ್‌ನಲ್ಲಿ ಜಿಪಂ, ತಾಪಂ ಚುನಾವಣೆ:
ಜಿಪಂ ಮತ್ತು ತಾಪಂ ಚುನಾವಣೆಗೆ ಸಂಬಂಧಿಸಿದಂತೆ ನಿವೃತ್ತ ಅಧಿಕಾರಿ ಲಕ್ಷ್ಮಿ ನಾರಾಯಣ್ ನೇತೃತ್ವದಲ್ಲಿ ಕ್ಷೇತ್ರವಾರು ವಿಂಗಡಣೆ ಮಾಡಿ ವರದಿ ನೀಡಲು ತಿಳಿಸಿದ್ದು, ಅದರ ಆಧಾರದ ಮೇಲೆ ಮೀಸಲಾತಿ ಪ್ರಕಟಿಸಲಾಗುವುದು. ಮಾಚ್‌ರ್, ಏಪ್ರಿಲ್ ತಿಂಗಳಲ್ಲಿ ಚುನಾವಣೆ(Election) ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ಸರ್ಕಾರ ಸರ್ವ ಸಿದ್ಧತೆ ಮಾಡಿದೆ ಎಂದರು.
ಇಬ್ರಾಹಿಂ ಧೂಳನ್ನೂ ಬಿಜೆಪಿಗೆ ಸೇರಿಸಲ್ಲ!
ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿರುವ ಸಿಎಂ ಇಬ್ರಾಹಿಂ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಅವರ ಹೆಜ್ಜೆ ಧೂಳನ್ನು ಕೂಡ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಅಂತ ಕೆ.ಎಸ್.ಈಶ್ವರಪ್ಪ ತಿಳಿಸಿದ್ದರು.