Asianet Suvarna News Asianet Suvarna News

ಕೊರೋನಾ ಬಗ್ಗೆ ಬೇಜವಾಬ್ದಾರಿ ಹೇಳಿಕೆ: ಶ್ರೀರಾಮುಲು ಆಯ್ತು, ಇದೀಗ ಮತ್ತೋರ್ವ ಸಚಿವರ ಸರದಿ

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್-19 ಸೋಂಕು ಇನ್ನಷ್ಟು ಹೆಚ್ಚಳವಾಗುತ್ತದೆ. ರಾಜ್ಯದ ಜನರನ್ನು ದೇವರೇ ಕಾಪಾಡಬೇಕು ಎಂದು ಇತ್ತೀಚೆಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದರು. ಇದೀಗ  ಮತ್ತೋರ್ವ ಸಚಿವರ ಸರದಿ

we have to learn leave with coronavirus says minister ramesh jarkiholi
Author
Bengaluru, First Published Jul 27, 2020, 10:22 PM IST

ಬೆಳಗಾವಿ, (ಜುಲೈ.27): ನಾವು ಕೋವಿಡ್-19 ಜೊತೆ ಬದುಕುವುದನ್ನು ಕಲಿಯಬೇಕು. ಸಾವು ಬದುಕು ನಮ್ಮ ಕೈಯಲ್ಲಿಲ್ಲ, ಹೋರಾಟ ಮಾಡಿ ಉಳಿಸುವ ಯತ್ನ ಮಾಡಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. 

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್-19 ಸೋಂಕು ಇನ್ನಷ್ಟು ಹೆಚ್ಚಳವಾಗುತ್ತದೆ. ರಾಜ್ಯದ ಜನರನ್ನು ದೇವರೇ ಕಾಪಾಡಬೇಕು ಎಂದು ಇತ್ತೀಚೆಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದರು. ಇದೀಗ ಜಲಸಂಪನ್ಮೂಲ ಸಚಿವ ರಮೇಶ್ ಕುಮಾರ್ ಅವರ ಸರದಿ

ಕೊರೋನಾ ವಿಚಾರದಲ್ಲಿ ಶ್ರೀರಾಮುಲು ಅಸಹಾಯಕತೆ: ಜನ ಸಾಮಾನ್ಯರ ಗತಿ...?. 

ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೋವಿಡ್ ನಾವು ಅಂದುಕೊಂಡಂತೆ ದೊಡ್ಡ ರೋಗವೇನಲ್ಲ. ಜನರು ಇದಕ್ಕೆ ಹೆದರಬಾರದು ಎಂದರು.

ಈ ವೇಳೆ ಬಿಮ್ಸ್ ದಲ್ಲಿ ನಡೆದಿರುವ ಅವಾಂತರಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಬಿಮ್ಸ್ ಬಳಿ ಆಯಂಬುಲೆನ್ಸ್‌ ಸುಟ್ಟ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತೇವೆ. ಅಧಿಕಾರಿಗಳು ಯಾರಾದರೂ ತಪ್ಪು ಮಾಡಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಬಿಮ್ಸ್ ಆಡಳಿತ ಮಂಡಳಿಗೆ ಶೀಘ್ರ ಸರ್ಜರಿ ಮಾಡಲಾಗುವದು. ಅಲ್ಲಿಯ ವ್ಯವಸ್ಥೆ ಸುಧಾರಣೆ ಮಾಡಲು ಗಮನ ಹರಿಸಲಾಗುವದು ಭರವಸೆ ನೀಡಿದರು.

ಕೋವಿಡ್ ನಿಯಂತ್ರಣ ಸಂದರ್ಭದಲ್ಲಿ ವರ್ಗಾವಣೆ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣದಿಂದ ಸುಮ್ಮನಿದ್ದೇವೆ ಎಂದು ಹೇಳಿದ ಸಚಿವರು ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಸಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios