ನಮಗೆ ಒಂದು ರೈಲ್ವೆ ಟಿಕೆಟ್ ಖರೀದಿಸಲೂ ಹಣವಿಲ್ಲ; ಎಲ್ಲ ಅಕೌಂಟ್‌ ಫ್ರೀಜ್ ಆಗಿವೆ: ರಾಹುಲ್ ಗಾಂಧಿ

ಬಿಜೆಪಿ ಚುನಾವಣೆಗೆ ಅಂತನೇ ಕಾಯ್ತಾ ಇದ್ದುಕೊಂಡು, ನಮ್ಮನ್ನು ಕುಗ್ಗಿಸಲು ಬ್ಯಾಂಕ್ ಖಾತೆ ಫ್ರೀಜ್‌ ಮಾಡಿದ್ದಾರೆ. ನಮ್ಮ ಬಳಿ ರೈಲ್ವೆ ಟಿಕೆಟ್ ಖರೀದಿಸಲೂ ಹಣವಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದರು.

We have no money to railway ticket buying our all Bank accounts are frozen said Rahul Gandhi sat

ನವದೆಹಲಿ (ಮಾ.21): ಭಾರತವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅಂತ ಹೇಳಲಾಗುತ್ತಿತ್ತು. ಆದರೆ, ಈಗ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲ. ನಮ್ಮ ಬ್ಯಾಂಕ್ ಖಾತೆಯಿಂದ ನಮಗೆ ಹಣ ತೆಗಿಯೋಕೆ ಆಗ್ತಿಲ್ಲ. ಬಿಜೆಪಿ ಚುನಾವಣೆಗೆ ಅಂತನೇ ಕಾಯ್ತಾ ಇದ್ದುಕೊಂಡು, ನಮ್ಮನ್ನು ಕುಗ್ಗಿಸಲು ಬ್ಯಾಂಕ್ ಖಾತೆ ಫ್ರೀಜ್‌ ಮಾಡಿದ್ದಾರೆ. ನಮ್ಮ ಬಳಿ ರೈಲ್ವೆ ಟಿಕೆಟ್ ಖರೀದಿಸಲೂ ಹಣವಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕಾಂಗ್ರೆಸ್‌ನಿಂದ ಗುರುವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ನಮ್ಮ ಹಣ ನಮಗೆ ಬಳಕೆ ಮಾಡೋಕೆ ಬಿಟ್ಟಿಲ್ಲ ಅಂದ್ರೆ ಏನು ಅರ್ಥ? ಒಂದು ಕುಟುಂಬಕ್ಕೆ ಹೀಗಾದರೆ ಏನಾಗುತ್ತೆ? ಆ ಕುಟುಂಬಕ್ಕೆ ಹಸಿವಿನಿಂದ ಬಳಲುವ ಪರಿಸ್ಥಿತಿ ಬರುತ್ತದೆ. ಯಾವುದಾದರೂ ಬಿಸಿನೆಸ್‌ನಲ್ಲಿ ಹೀಗಾದರೆ ಎಲ್ಲವೂ ಮುಳುಗಿಹೋಗುತ್ತದೆ. ನಮಗೆ ಪೇಪರ್ ನಲ್ಲಿ ಜಾಹಿರಾತು ಕೊಡೋಕು ಸಹ ನಮ್ಮ ಬಳಿ ದುಡ್ಡಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಯೇ? ಇಂಡಿಯಾ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಅಂತ ಇತ್ತು. ಆದ್ರೆ ಈಗ ಭಾರತದಲ್ಲಿ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲ ಎಂದು ಆರೋಪ ಮಾಡಿದರು.

ಬಿಜೆಪಿ ನಮ್ಮ ಖಾತೆಯಲ್ಲಿನ ಹಣ ಫ್ರೀಜ್‌ ಮಾಡಿ, ಕಾಂಗ್ರೆಸ್ ಕುಗ್ಗಿಸಲು ಯತ್ನಿಸುತ್ತಿದೆ : ಸೋನಿಯಾ ಗಾಂಧಿ ಆರೋಪ

ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನಮಗೆ ತೆಗಿಯೋಕೆ ಆಗ್ತಿಲ್ಲ. ಬಿಜೆಪಿ ನಾಯಕರು ಚುನಾವಣೆಗೆ ಅಂತನೇ ಕಾಯ್ತಾ ಇದ್ದರು. ಇಂತಹ ಸಂಧರ್ಭದಲ್ಲಿ ಹೀಗೆ ಮಾಡಿದ್ದಾರೆ. ನಮ್ಮ ಹಣವನ್ನ ಹೀಗೆ ಫ್ರೀಜ್ ಮಾಡೋದಾ? ನಮ್ಮ ಎಲ್ಲಾ ಅಕೌಂಟ್ ಗಳನ್ನ ಫ್ರೀಜ್ ಮಾಡಿದ್ದಾರೆ. ಇದು ನಮ್ಮ ಜನರ ಮೇಲೆ ಮಾಡಿರುವ ಆಕ್ರಮಣವಾಗಿದೆ. ಎಲ್ಲರೂ ನಾಟಕ ನೋಡಿದಂತೆ ನೋಡ್ತಿದ್ದಾರೆ. ನಮಗೆ ಒಂದು ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ಆಗ್ತಾ ಇಲ್ಲಾ. ಮಾಧ್ಯಮಗಳು ಕೂಡ ಈ ಬಗ್ಗೆ ಒಂದು ಮಾತನ್ನೂ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕ ಬಿಜೆಪಿಯಲ್ಲಿನ ಜಾತಿವಾದ, ಭ್ರಷ್ಟಾಚಾರ, ಕುಟುಂಬವಾದದ ಶುದ್ಧೀಕರಣ ಮಾಡ್ತೇನೆ: ಸಂಸದ ಸದಾನಂದಗೌಡ!

ನಾವು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ರಾಜಕೀಯ ಪಕ್ಷಗಳು ಯಾವುದೇ ತೆರಿಗೆ ನೀಡೋದಿಲ್ಲ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆದಾಯ ತೆರಿಗೆಯನ್ನು (ಐಟಿ) ಅನ್ವಯ ಮಾಡಲಾಗುತ್ತಿದೆ. ಬಿಜೆಪಿ ಸಹ ಯಾವುದೇ ತೆರಿಗೆ ನೀಡಿಲ್ಲ. ಹಾಗಾಗಿ ಈ ವಿಚಾರವನ್ನ ಸುಪ್ರಿಂಕೋರ್ಟ್ ಗಂಭಿರವಾಗಿ ಪರಿಗಣಿಸಬೇಕು. ಆ ಮೂಲಕ ನಿಷ್ಪಕ್ಷಪಾತವಾಗಿ ಚುನಾವಣೆ ಮಾಡಲು ಅವಕಾಶ ಮಾಡಿಕೊಡಬೇಕು. ಮುಖ್ಯವಾಗಿ ದೇಶದಲ್ಲಿ ಪಾರದರ್ಶಕ ಚುನಾವಣೆ ನಡೆಯಬೇಕಾದರೆ, ಕಾಂಗ್ರೆಸ್ ಪಕ್ಷದ ಖಾತೆಗಳಲ್ಲಿನ ಹಣ ಬಳಕೆ ಮಾಡಲು ಅವಕಾಶ ಕೊಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾಧ್ಯಮಗಳ ಮೂಲಕ ಮನವಿ ಮಾಡಿದರು.

Latest Videos
Follow Us:
Download App:
  • android
  • ios