Asianet Suvarna News Asianet Suvarna News

ನಾವು ಸಿದ್ದರಾಮಯ್ಯರನ್ನ ಹಂದಿ, ಕತ್ತೆ, ಕೋಣ ಎಂದು ಕರೆಯುತ್ತೇವೆ; ಹಳ್ಳಿ ಭಾಷೆ ನಮಗೂ ಬರುತ್ತೆ : ಈಶ್ವರಪ್ಪ

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನಾಯಿಗೆ ಹೋಲಿಸಿ ಮತನಾಡಿರುವ ಸಿದ್ದರಾಮಯ್ಯ ಅವರು ರಾಜ್ಯ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

We call Siddaramaiah a pig  donkey  We also understand village language says Eshwarappa rav
Author
First Published Jan 6, 2023, 7:32 AM IST

ಶಿವಮೊಗ್ಗ (ಜ.6) : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನಾಯಿಗೆ ಹೋಲಿಸಿ ಮತನಾಡಿರುವ ಸಿದ್ದರಾಮಯ್ಯ ಅವರು ರಾಜ್ಯ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿಯಾಗಿದ್ದವರು. ಒಬ್ಬ ಮುಖ್ಯಮಂತ್ರಿಗೆ ಹೇಗೆ ಸಂಬೋಧಿಸಬೇಕೆಂಬ ಕಲ್ಪನೆಯೂ ಇಲ್ಲ. ನಾಯಿಮರಿಗೆ ಹೋಲಿಸುತ್ತಾರೆ. ನಮಗೂ ಹೋಲಿಕೆ ಮಾಡಲು ಬೇಕಾದಷ್ಟುಪ್ರಾಣಿಗಳಿವೆ. ಕೇವಲ ನಾಯಿ ಅಲ್ಲ ಹಂದಿಯೂ ಇದೆ. ನಿಂದನೆ ಮಾಡಲು ನಮಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ನಾವು ನಿಮಗೆ ನಾಯಿಮರಿ, ಕತ್ತೆ ಮರಿ, ಹಂದಿ ಮರಿ ಹೀಗೆ ಎಲ್ಲವನ್ನು ಕರೆಯಬಹುದಾಗಿತ್ತು. ಆದರೆ, ನಾವು ಹಾಗೆ ಮಾಡಿಲ್ಲ. ಈಗ ನೋಡಿದ್ರೆ ಹಳ್ಳಿ ಭಾಷೆ ಅಂತ ಹೇಳುತ್ತಾರೆ. ನಾವು ಹಾಗೆ ಹೇಳಿ ಹಳ್ಳಿ ಭಾಷೆ ಅಂತ ಹೇಳಬಹುದಲ್ಲವೇ ಎಂದು ಹರಿಹಾಯ್ದರು.

Assembly eleciton: ಬಿಜೆಪಿ ಭ್ರಷ್ಟ ಸರ್ಕಾರ: ರಾಜ್ಯವನ್ನುಳಿಸಲು ಕಾಂಗ್ರೆಸ್ ಗೆಲ್ಲಿಸಿ; ಸಿದ್ದರಾಮಯ್ಯ ಕರೆ

ಧರ್ಮ ಸಂರಕ್ಷಣೆಯೂ ಅಭಿವೃದ್ಧಿಯೇ:

ಅಭಿವೃದ್ಧಿ(development) ಎಂದರೆ ಕೇವಲ ಚರಂಡಿ, ರಸ್ತೆ ಅಭಿವೃದ್ಧಿ ಮಾತ್ರವಲ್ಲ. ಈ ದೇಶದ ಧರ್ಮವನ್ನು ಕಾಪಾಡುವುದೂ ಅಭಿವೃದ್ಧಿಯೇ. ಹಾಗಾಗಿಯೇ ಬಿಜೆಪಿ ಧರ್ಮದ ರಾಜಕಾರಣ ಮಾಡುತ್ತಿದೆ. ಬ್ರಿಟಿಷರ ಕಾಲದಲ್ಲಿ ಚರಂಡಿ, ರಸ್ತೆಗಳು ಆಗಿರಲಿಲ್ಲವೇ? ನಮ್ಮ ಶ್ರದ್ಧಾ ಕೇಂದ್ರಗಳು ಧ್ವಂಸವಾದವು. ದೇವಾಲಯಗಳು ನಾಶಗೊಂಡವು. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ನಮ್ಮ ಹಿರಿಯರ ಬಲಿದಾನವಾಗಿದೆ. ನಮ್ಮ ಗೋಮಾತೆ ನಮಗೆ ಉಳಿಯಬೇಕು. ಧ್ವಂಸಗೊಂಡ ದೇವಾಲಯಗಳು ಮರುನಿರ್ಮಾಣಗೊಳ್ಳಬೇಕು. ಅಯೋಧ್ಯೆ, ಮಥುರಾ, ಕಾಶಿ, ಮುಂತಾದ ಸ್ಥಳಗಳು ಮತ್ತೆ ಶ್ರದ್ಧಾಕೇಂದ್ರಗಳಾಗಬೇಕು. ದೇಶ, ಧರ್ಮ ಅಭಿವೃದ್ಧಿಯೇ ಬಿಜೆಪಿಯ ಮಂತ್ರ ಎಂದರು.

ಅಭಿವೃದ್ಧಿ, ಸಂಘಟನೆಯ ಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ನಿಮ್ಮ ಪಕ್ಷದ ಸಂಘಟನೆ ಎಲ್ಲಿ ಇದೆ. ನಿಮ್ಮ ಚುನಾವಣಾ ನೇತೃತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ. ಕಾಂಗ್ರೆಸ್‌ನಲ್ಲಿ ನೇತೃತ್ವ, ಸಂಘಟನೆ ಯಾವುದು ಇಲ್ಲ. ಸಾಮಾನ್ಯ ಜನರನ್ನು ಮರಳು ಮಾಡುವಲ್ಲಿ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನಿಸ್ಸೀಮರು. ಕಾಂಗ್ರೆಸ್‌ ಸಮೀಕ್ಷೆಯನ್ನು ಕಾಂಗ್ರೆಸ್‌ನವರೇ ನಂಬುವುದಿಲ್ಲ. ಈ ತಂತ್ರಗಳು ಕುಮಾರಸ್ವಾಮಿಗೆ ಹಾಗೂ ಕಾಂಗ್ರೆಸ್‌ನವರಿಗೆ ಗೊತ್ತಿದೆ. ನಮಗೆ ಯಾವುದೇ ತಂತ್ರಗಾರಿಕೆæ ಗೊತ್ತಿಲ್ಲ ಎಂದರು.

ಬಿಜೆಪಿ(Karnaka BJP) ರಾಜ್ಯದಲ್ಲಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಎಲ್ಲಾ ವರ್ಗದ ಹಿತವನ್ನು ಕಾಪಾಡುವುದರ ಜೊತೆಗೆ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುತ್ತದೆ. ಜೊತೆಗೆ ಅಭಿವೃದ್ಧಿಯನ್ನೂ ಮಾಡುತ್ತದೆ. ಸರ್ವ ಸ್ವಂತಂತ್ರವಾದ ಸರ್ಕಾರ ಬರಲು ರಾಜ್ಯದ ಎಲ್ಲಾ ನಾಯಕರು ರಾಷ್ಟ್ರ ನಾಯಕರ ಜೊತೆ ಸೇರಿಕೊಂಡು ಪಕ್ಷವನ್ನು ಗಟ್ಟಿಗೊಳಿಸುತ್ತಿದ್ದಾರೆ. ಬೂತ್‌ ಮಟ್ಟದಿಂದ ಈಗಾಗಲೇ ಸಂಘಟನೆ ಆರಂಭವಾಗಿದೆ. ವರಿಷ್ಠರ ಅಪೇಕ್ಷೆಯಂತೆ ಎಲ್ಲಾ 224 ಕ್ಷೇತ್ರಗಳಲ್ಲೂ ಕೂಡ ಬಿಜೆಪಿ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಬಿಜೆಪಿ ದಲಿತರನ್ನು ಹೇಗೆ ತುಳಿಯುತ್ತಿದೆ ಎಂದು ತಿಳಿಸಲು ಎಸ್ಸಿ ಎಸ್ಟಿ ಸಮಾವೇಶ: ಡಾ.ಜಿ.ಪರಮೇಶ್ವರ...

ಯಡಿಯೂರಪ್ಪ ತಾವಾಗಿಯೇ ರಾಜೀನಾಮೆ ಕೊಟ್ಟಿದ್ದಾರೆ:

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌. ಯಡಿಯೂರಪ್ಪ(BS Yadiyurappa) ಅವರಿಂದ ರಾಜೀನಾಮೆ ಕೊಡಿಸಿದರು ಎಂದು ಕಾಂಗ್ರೆಸ್ಸಿಗರು ಹೇಳುವಲ್ಲಿ ಅರ್ಥವಿಲ್ಲ. ಯಡಿಯೂರಪ್ಪ ಅವರು ತಾವಾಗಿಯೇ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಈ ಸಿದ್ದರಾಮಯ್ಯ ಅವರನ್ನು ಜನರೇ ಓಡಿಸಿದ್ದಾರೆ. ಯಾವ ಕಾರಣಕ್ಕೂ ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟರ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ, ಬಿಜೆಪಿ ಸರ್ಕಾರ ಅವರ ಅಭಿವೃದ್ಧಿಗಾಗಿ ಏನೆಲ್ಲಾ ಮಾಡಿದೆ ಎಂದು ತಿಳಿದುಕೊಳ್ಳಲಿ ಎಂದು ಕುಟುಕಿದರು.

Follow Us:
Download App:
  • android
  • ios