ಸಿದ್ದರಾಮಯ್ಯ ರಾಜಿನಾಮೆ ನೀಡುತ್ತಾರೆಂಬ ವಿಶ್ವಾಸವಿದೆ: ಕೇಂದ್ರ ಸಚಿವ ಸೋಮಣ್ಣ
ಮುಡಾ ಹಗರಣ ಸಂಬಂಧ ಹೈಕೋರ್ಟ್ ಪ್ರಾಸಿಕ್ಯೂಷನ್ ನಡೆಸಲು ಆದೇಶ ನೀಡಿರುವ ಹಿನ್ನೆಲೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಶಿವಮೊಗ್ಗ (ಸೆ.30): ಮುಡಾ ಹಗರಣ ಸಂಬಂಧ ಹೈಕೋರ್ಟ್ ಪ್ರಾಸಿಕ್ಯೂಷನ್ ನಡೆಸಲು ಆದೇಶ ನೀಡಿರುವ ಹಿನ್ನೆಲೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನಿಗಿಂತಲೂ ಯಾರೂ ದೊಡ್ಡವರಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ಅವರು ಏನು ಎಂಬುದು ನನಗೆ ಗೊತ್ತಿದೆ. ಅವರು ಸೂಕ್ಷ್ಮ ಮನಸ್ಸಿನ ರಾಜಕಾರಣಿ. ಇದೀಗ ಅವರ ಮೇಲೆ ತನಿಖೆಗೆ ಕೋರ್ಟ್ ಆದೇಶ ನೀಡಿದೆ. ಸಿದ್ದರಾಮಯ್ಯ ಅವರು ಇದನ್ನು ಅರಿತುಕೊಳ್ಳಬೇಕು ಎಂದರು. ಕಾನೂನು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತದೆ. ಹೀಗಾಗಿಯೇ ಆ ವಿಷಯದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಲವಾರು ಯೋಜನೆಗಳನ್ನು ತರುತ್ತೇನೆ: ಇನ್ನು ಎರಡು ಮೂರು ತಿಂಗಳಿನಲ್ಲಿ ಹಲವಾರು ಯೋಜನೆ ತರುವ ಭರವಸೆಯನ್ನು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ನೀಡಿದ್ದಾರೆ. ಅವರು ಮೆಮು ರೈಲಿಗೆ ಚಾಲನೆ ನೀಡಿ ಮಾತನಾಡಿದರು. ಅನಿರೀಕ್ಷಿತವಾಗಿ ಬಂದ ನನ್ನನ್ನು ತುಮಕೂರು ಜಿಲ್ಲೆಯ ಜನತೆ ಲಕ್ಷಾಂತರ ಮತಗಳಿಂದ ಗೆಲ್ಲಿಸಿದರು. ಹಾಗಾಗಿ ಅದರ ಋಣ ತೀರಿಸುವುದಾಗಿ ತಿಳಿಸಿದರು. ಶಿವಮೊಗ್ಗದ ಜನ ಬಿವೈ ರಾಘವೇಂದ್ರ ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅವರ ಕ್ಷೇತ್ರದ ಚಿತ್ರಣ ನೋಡಿದರೆ ಎಲ್ಲಾ ಸಂಸದರು ಕೇಂದ್ರದ ಜೊತೆ ಕೈಜೊಡಿಸಿದರೆ ಏನು ಬೇಕಾದರೂ ಮಾಡಬಹುದು. ಎನ್ನುವ ಮೂಲಕ ರಾಘವೇಂದ್ರ ಅವರನ್ನು ಹೊಗಳಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ರೇಣುಕಾಚಾರ್ಯ
ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು ಸಿದ್ದರಾಮಯ್ಯನವರು ಅವರ ಕಾಲ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರದ ಅಧಿಕಾರವನ್ನು ಅವರೇ ಬೇಡ ಅಂದಾಗ ನ್ಯಾಯಾಂಗವಿದೆ. ಅದರ ಮೇಲುಗಡೆ ಇನ್ನೊಂದು ಇದೆ. ಇದು ಹೀಗೆ ಆಗಬಾರದಿತ್ತು. ಅದ್ಯಾಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು. ಒಂದು ತಪ್ಪು ಮುಚ್ಚಲು ಹೋಗಿ ನೂರಾರು ತಪ್ಪು ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಸಿದ್ದರಾಮಯ್ಯನಂತಹ ನುರಿತ ರಾಜಕಾರಣಿ ಕೂಡ ಹಠಕ್ಕೆ ಬೀಳುತ್ತಾರೆ ಅಂದರೆ ಸ್ವಲ್ಪ ಕಷ್ಟವಾಗುತ್ತದೆ. ಅವರು ಅರ್ಥ ಮಾಡಿಕೊಂಡರೆ ಒಳ್ಳೆಯದು ಅನ್ನುವುದು ನನ್ನ ಭಾವನೆ ಎಂದರು.
ರೈಲ್ವೆ ಇಲಾಖೆಯ ಉದ್ಯೋಗಾವಕಾಶ ಪಡೆಯಿರಿ: ರೈಲ್ವೆ ಇಲಾಖೆಯಲ್ಲಿ 46 ಸಾವಿರ ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದರಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯುವಂತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ತಿಗಳ ಸಮಾಜದವರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ತಿಗಳ ಸಮುದಾಯಕ್ಕೂ ತಮಗೂ ಅವಿನಾಭಾವ ಸಂಬಂಧವಿದೆ.
ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ: ಸಚಿವ ಪ್ರಲ್ಹಾದ್ ಜೋಶಿ
45 ವರ್ಷಗಳ ಹಿಂದೆ ತಾವು ಬೆಂಗಳೂರಿಗೆ ಬಂದಾಗ ಆಶ್ರಯ ನೀಡಿದವರು ತಿಗಳ ಸಮಾಜದವರು, ಸ್ವಾಭಿಮಾನ, ಸಂಸ್ಕಾರಕ್ಕೆ ತಿಗಳ ಸಮಾಜ ಮತ್ತೊಂದು ಹೆಸರು ಎಂದರು. ಶ್ರಮಜೀವಿ ತಿಗಳ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಆದ್ಯತೆ ನೀಡಬೇಕು, ರೈಲ್ವೆ ಇಲಾಖೆಯ ಉದ್ಯೋಗ ಅವಕಾಶವನ್ನು ಮಕ್ಕಳು ಪಡೆಯಲು ಪ್ರೇರೇಪಿಸಬೇಕು. ಭಾರತ ಸರ್ಕಾರದಿಂದ ದೊರೆಯಬಹುದಾದ ಅನುಕೂಲಗಳನ್ನು ಸಮಾಜಕ್ಕೆ ಒದಗಿಸಲು ತಾವು ಬದ್ಧ ಎಂದು ಹೇಳಿದರು.