ಲೋಕಸಭೆ ಚುನಾವಣೆ 2024: ಅಡುಗೆ ಮಾಡುವ ಹೆಣ್ಣಿಗೆ ಈ ಸಲ ವೋಟ್‌ ಹಾಕಿ, ಸಂಸದ ಸಿದ್ದೇಶ್ವರ್‌ ಕರೆ

ಸಂಸದ ಸಿದ್ದೇಶ್ವರ್ ಅವರಂತು ಅಡುಗೆ ಮಾಡುವ ಹೆಣ್ಣಿಗೆ ಮತ ಕೊಡಿ ಎಂಬುದಾಗಿ ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಹೆಣ್ಣುಮಕ್ಕಳು ಅಡುಗೆ ಮಾಡುತ್ತಾರೆ. ಶೇ.95ರಷ್ಟು ಮಹಿಳೆಯರು ಅಡುಗೆ ಮಾಡಿಕೊಂಡೇ, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಅಡುಗೆ ಮಾಡುವ ಮಹಿಳೆಯ ಸಾಧನೆ ಹೆಜ್ಜೆ ಗುರುತಿದೆಯೆಂದು ಸಂಬಂಧದಲ್ಲಿ ತಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಟಾಂಗ್ ಕೊಟ್ಟ ಸಿದ್ದೇಶ್ವರ್ 

Vote for the woman who cooks Says Davanagere BJP MP GM Siddeshwar grg

ದಾವಣಗೆರೆ(ಏ.02): ಗಾಯತ್ರಿ ಸಿದ್ದೇಶ್ವರ್‌ ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂಬ ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನೇ ಲೋಕಸಭೆ ಚುನಾವಣೆಗೆ ಬ್ರಹ್ಮಾಸ್ತ್ರ ಮಾಡಿಕೊಂಡು ಸಂಸದ ಜಿ.ಎಂ.ಸಿದ್ದೇಶ್ವರ್‌ ಸೇರಿ ಇಡೀ ಬಿಜೆಪಿ ಪ್ರಚಾರಕ್ಕೆ ಚುರುಕು ಕೊಟ್ಟಿದೆ.

ಸಂಸದ ಸಿದ್ದೇಶ್ವರ್ ಅವರಂತು ಅಡುಗೆ ಮಾಡುವ ಹೆಣ್ಣಿಗೆ ಮತ ಕೊಡಿ ಎಂಬುದಾಗಿ ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಹೆಣ್ಣುಮಕ್ಕಳು ಅಡುಗೆ ಮಾಡುತ್ತಾರೆ. ಶೇ.95ರಷ್ಟು ಮಹಿಳೆಯರು ಅಡುಗೆ ಮಾಡಿಕೊಂಡೇ, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಅಡುಗೆ ಮಾಡುವ ಮಹಿಳೆಯ ಸಾಧನೆ ಹೆಜ್ಜೆ ಗುರುತಿದೆಯೆಂದು ಸಂಬಂಧದಲ್ಲಿ ತಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಸಿದ್ದೇಶ್ವರ್‌ಗೆ ಟಿಕೆಟ್ ಸಿಕ್ಕರೆ ತಂದು ಎಂಪಿ ಚುನಾವಣೆಗೆ ನಿಲ್ಲಲಿ, ನಾನೇ ಫಂಡ್ ಮಾಡುತ್ತೇನೆ: ಶಾಮನೂರು ಶಿವಶಂಕರಪ್ಪ

ಯಾವಾಗ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಅಂತರ್‌ ರಾಷ್ಟ್ರೀಯ ಕ್ರೀಡಾಪಟು ಸೈನಾ ನೆಹ್ವಾಲ್‌ ಸಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹ ಶಾಮನೂರು ಅವರ ಹೇಳಿಕೆಗೆ ಆಕ್ಷೇಪಿಸಿರುವುದು ಬಿಜೆಪಿ ಪಾಳೆಯದ ರಣೋತ್ಸಾಹ ಹೆಚ್ಚಿಸಿದೆ. ಹೆಣ್ಣು ವಿಮಾನದ ಪೈಲಟ್‌, ರಾಕೆಟ್ ಉಡಾವಣೆ ಮಾಡುತ್ತಾಳೆ. ಅಷ್ಟೇ ಅಲ್ಲ, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಸಹ ಮಹಿಳೆಯೆನ್ನುವ ಮೂಲಕ ಸಂಸದ ಸಿದ್ದೇಶ್ವರ ತಿರುಗೇಟು ನೀಡುತ್ತಿದ್ದಾರೆ.

ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನೆಂದು ಜನರಿಗೆ ಮೊದಲು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios