ಸಿದ್ದೇಶ್ವರ್‌ಗೆ ಟಿಕೆಟ್ ಸಿಕ್ಕರೆ ತಂದು ಎಂಪಿ ಚುನಾವಣೆಗೆ ನಿಲ್ಲಲಿ, ನಾನೇ ಫಂಡ್ ಮಾಡುತ್ತೇನೆ: ಶಾಮನೂರು ಶಿವಶಂಕರಪ್ಪ
ದಾವಣಗೆರೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ಗೆ ಈ ಬಾರಿ ಟಿಕೆಟ್ ಸಿಕ್ಕರೆ ತಂದು ನಿಲ್ಲಲಿ. ಆತನಿಗೆ ನಾನೇ ಫಂಡ್ ಮಾಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸವಾಲನ್ನ ಹಾಕಿದ್ದಾರೆ.
ದಾವಣಗೆರೆ (ಜೂ.15): ದಾವಣಗೆರೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ಗೆ ಈ ಬಾರಿ ಟಿಕೆಟ್ ಸಿಕ್ಕರೆ ತಂದು ನಿಲ್ಲಲಿ. ಆತನಿಗೆ ನಾನೇ ಫಂಡ್ ಮಾಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸವಾಲನ್ನ ಹಾಕಿದ್ದಾರೆ. ದಾವಣಗೆರೆಯ ಅವರ ನಿವಾಸದಲ್ಲಿ ಈ ಬಗ್ಗೆ ಮಾದ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ್ ಸೋಲುವುದನ್ನ ನಾನು ನೋಡಬೇಕು ಎಂದು ಸಿದ್ದೇಶ್ವರ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ. ಅವನಿಗೆ ಸಿಕ್ಕರೆ ಟಿಕೆಟ್ ತಂದು ನಿಲ್ಲಲಿ. ಬೇಕಾದರೆ ಫಂಡ್ ಕೊಡುತ್ತೇನೆ, ನಿಲ್ಲಲಿ ನೋಡೋಣ ಎಂದಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ನಲ್ಲಿಯೂ ತುಂಬ ಜನ ಸ್ಪರ್ಧಾಳುಗಳಿದ್ದಾರೆ. ಯಾರು ನಿಲ್ಲದಿದ್ದರೆ ಕೊನೆಗೆ ನಾನೇ ಸೆಡ್ಡು ಹೊಡೆಯುತ್ತೇನೆ. ನಾವು ಅವರು ಸಂಬಂಧದಲ್ಲಿ ಅಳಿಯ ಮಾವನಾಗಬೇಕು ಎಂದು ಅಚ್ಚರಿಯನ್ನ ಮೂಡಿಸಿದ್ದಾರೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ. ಇನ್ನು, ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಕಂಡೀಷನ್ ಹಾಕಿರುವುದಕ್ಕು ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಬೇಕು. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವುದು ಬೇಡ. ಈ ಕಾಂಗ್ರೆಸ್ ನವರು ತಪ್ಪು ಮಾಡುವುದು ಬೇಡ. ಈಗ ವಿದ್ಯುತ್ ರೇಟ್ ಜಾಸ್ತಿ ಮಾಡುವುದಿದ್ದರೆ ಮುಂದೆ ಮಾಡಿಕೊಳ್ಳಿ. ಈಗ ಮಾತುಕೊಟ್ಟಂತೆ ನಡೆದುಕೊಳ್ಳಿ. ನಾನು ಕಾಂಗ್ರೆಸ್ ನವನಾಗಿಯೇ ಈ ಮಾತನ್ನ ಹೇಳುತ್ತಿದ್ದೇನೆ ಎಂದು ಹೇಳಿದರು.
ಹೊಂದಾಣಿಕೆ ಇಲ್ಲದಿದ್ದರೆ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿ: ಪ್ರತಾಪ್ ಸಿಂಹ ಸವಾಲು
ವಿದ್ಯುತ್ ದರ ಏರಿಕೆಯಿಂದ ಎಲ್ಲ ಕೈಗಾರಿಕೆಗಳಿಗೆ ತೊಂದರೆಯಾಗುತ್ತಿದೆ. ಬಿಜೆಪಿಯವರು ನಾವು ಮಾಡಿಲ್ಲ ಎನ್ನುತ್ತಿದ್ದಾರೆ. ಕೆಇಆರ್ ಸಿ ಮಾಡಿದ್ದಕ್ಕೆ ಇವರು ಸಹಿ ಹಾಕಿದ್ಧಾರೆ. ಕೆಇಆರ್ ಸಿ ಮಾಡಿರುವುದನ್ನ ಕಾಂಗ್ರೆಸ್ ನವರು ಒಪ್ಪಬಾರದು. ಹಿಂದೆ ಎಲ್ಲ ಕೊಡುತ್ತೇವೆ ಎಂದು ಹೇಳಿದ್ದಾರೆ, ಅದರಂತೆ ಈಗ ಕೊಡಬೇಕು. ಗ್ಯಾರಂಟಿ ಯೋಜನೆಗಳಿಗೆ ಸುಮ್ಮನೆ ಕಂಡೀಷನ್ ಹಾಕಿದ್ದಾರೆ. ಸೀರೆ ಉಟ್ಟುಕೊಂಡು ಬಂದವರು ಮಹಿಳೆಯರು ಅಲ್ಲವೇ, ಬಸ್ ಗಳಲ್ಲಿ ಅವರಿಗೆ ಯಾಕೆ ಕಂಡೀಷನ್ ಗಳನ್ನ ಹಾಕಬೇಕು. ಅಲ್ಲದೇ, 200 ಯುನಿಟ್ ಕೊಡಲು ಒಪ್ಪಿಕೊಂಡಿದ್ದಾರೆ. ಅಷ್ಟು ಈಗ ಕೊಡಬೇಕು. ಹೀಗೆ ಕಡೀಷನ್ ಗಳನ್ನ ಹಾಕಿದರೆ ಏನು ಪ್ರಯೋಜನ ? ಎಂದು ತಮ್ಮದೇ ಸರ್ಕಾರಕ್ಕೆ ಶಾಮನೂರು ಶಿವಶಂಕರಪ್ಪ ಪ್ರಶ್ನೆಯನ್ನ ಮಾಡಿದ್ದಾರೆ.
ಬೊಮ್ಮಾಯಿ ಬೀಗರು, ರಾಜಕೀಯ ಚರ್ಚಿಸಿಲ್ಲ: ನಾನು, ಬಸವರಾಜ ಬೊಮ್ಮಾಯಿ ಬೀಗರು. ಚುನಾವಣೆ ಆದ ಬಳಿಕ ಭೇಟಿ ಆಗಿರಲಿಲ್ಲ. ಇಬ್ಬರೂ ಗೆದ್ದಿದ್ದು, ನನಗೆ ಅವ್ರು ಹಾರ ಹಾಕಿದ್ರು, ನಾನು ಶಾಲು ಹೊದಿಸಿ, ಅಭಿನಂದಿಸಿದೆ ಎಂದು ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಂಬಂಧ ಹೀಗೆಯೇ ಮುಂದುವರಿಯಲಿ ಎಂಬುದಾಗಿ ಹೇಳಿದೆ. ಕೆಲವೊಂದು ವಿಚಾರಗಳ ನಾವು ಮಾಧ್ಯಮಗಳ ಮುಂದೆಲ್ಲಾ ಹೇಳಲು ಆಗುವುದೂ ಇಲ್ಲ ಎಂದರು. ಬೊಮ್ಮಾಯಿ ಬಿಜೆಪಿಯವರು. ನಾವು ಕಾಂಗ್ರೆಸಿನವರು. ನಮ್ಮ ಮಧ್ಯೆ ರಾಜಕೀಯ ಮಾತುಕತೆಯಾದರೂ ಏನಿರುತ್ತದೆ? ಹೊಂದಾಣಿಕೆ ರಾಜಕಾರಣ ಮಾಡುವುದಕ್ಕೆ ನಾವು ಚುನಾವಣೆ ಪೂರ್ವದಲ್ಲಿ ಭೇಟಿಯಾಗಿಲ್ಲ.
ಬಿಟ್ಟಿ ಯೋಜನೆಗೆ ಹಣಕಾಸನ್ನು ಹೇಗೆ ಹೊಂದಿಸ್ತೀರಿ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಚುನಾವಣೆ ನಂತರ ಭೇಟಿ ಆಗಿದ್ದೇವೆ. ಮೈಸೂರು ಸಂಸದ ಪ್ರತಾಪ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಅಂತಾ ನಾನು ನೋಡಿದ್ದೀನಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತಂತೆ ವೀರಶೈವ ಮಹಾಸಭಾದ ಪದಾಧಿಕಾರಿಗಳ ಸಭೆ ಕರೆದು, ತೀರ್ಮಾನ ಕೈಗೊಳ್ಳುತ್ತೇವೆ. ಸಮೀಕ್ಷೆ ಬಹಿರಂಗದ ಸಾಧಕ-ಬಾಧಕಗಳ ಬಗ್ಗೆ ಆ ಸಭೆಯಲ್ಲಿ ಚರ್ಚಿಸಿ, ಮಹಾಸಭಾ ಏನು ಮಾಡಬೇಕೆಂಬ ತೀರ್ಮಾನ ಕೈಗೊಳ್ಳುತ್ತೇವೆ. ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ? ಜಾಮದಾರ ಒಬ್ಬ ಇದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು. ಇಲ್ಲಾಂದ್ರೆ ನಾವು ಕಳಿಸುತ್ತೇವೆ. ಪ್ರತ್ಯೇಕ ಧರ್ಮದ ಬಗ್ಗೆ ಮುಂದಿನ ದಿನಗಳಲ್ಲಿ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.