Asianet Suvarna News Asianet Suvarna News

ಬಿಜೆಪಿಯವರು ಉಡುಪಿಯಲ್ಲಿ ಪ್ರಯೋಗಶಾಲೆ ಮಾಡಿದ್ದಾರೆ: ಸೊರಕೆ

*  ಚುನಾವಣೆಗೆಗಾಗಿ ಹಿಜಾಬ್‌ ವಿವಾದ, ರಸ್ತೆಗೆ ಗೂಡ್ಸೆ ಹೆಸರು ನಾಮಕರಣ
*  ಚಡ್ಡಿ ಕಳಿಸಿದರೆ ಬಟವಾಡೆ ಮಾಡುತ್ತೇವೆ
*  ಸಿದ್ದರಾಮಯ್ಯ ಏನು ಹೇಳಿದರೂ ಅದಕ್ಕೆ ತೂಕ ಇದೆ

Vinay Kumar Sorake Slams to BJP grg
Author
Bengaluru, First Published Jun 9, 2022, 2:13 PM IST

ಉಡುಪಿ(ಜೂ.09):  ಮುಂದಿನ ಚುನಾವಣೆಯಲ್ಲಿ ಹೇಳಿಕೊಳ್ಳುವುದಕ್ಕೆ ಬಿಜೆಪಿಯವರಲ್ಲಿ ಯಾವ ಸಾಧನೆಯೂ ಇಲ್ಲ, ಅದಕ್ಕೆ ಉಡುಪಿ ಜಿಲ್ಲೆಯನ್ನು ತಮ್ಮ ಪ್ರಯೋಗಶಾಲೆಯನ್ನಾಗಿ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ಕಾರ್ಕಳದಲ್ಲಿ ರಸ್ತೆಗೆ ಗೋಡ್ಸೆ ಹೆಸರಿಟಿದ್ದಾರೆ. ಹಿಜಾಬ್‌ ವಿವಾದ ಹುಟ್ಟು ಹಾಕಿದ್ದಾರೆ. ಚುನಾವಣೆಗೋಸ್ಕರ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗುತ್ತದೆ, ಮಹಾತ್ಮ ಗಾಂಧೀಜಿಯವರಿಗೆ ಗೌರವ ಇಲ್ಲದ ರಾಷ್ಟ್ರ ಇಲ್ಲ. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆಯ ಹೆಸರನ್ನು ರಸ್ತೆಯ ನಾಮಫಲಕದಲ್ಲಿ ಹಾಕುವುದು ಬಿಜೆಪಿಯವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.

ಕೊಲೆ ಬೆದರಿಕೆ: ಹಿಂದುತ್ವ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಯಶ್ಪಾಲ್ ಸುವರ್ಣ

ಹಿಜಾಬ್‌ ವಿವಾದ ಕಾಪು ಪುರಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐಗೆ ಲವ್‌ ಆಗಿ, ಉಡುಪಿಯಲ್ಲಿ ಹುಟ್ಟಿದ ಕೂಸು ಎಂದು ಲೇವಡಿ ಮಾಡಿದ ಸೊರಕೆ, ನಾನು ಹೊಡೆದ ಹಾಗೆ ಮಾಡುತ್ತೇನೆ ನೀನು ಕೂಗಿದ ಹಾಗೆ ಮಾಡು ಎಂದು ಬಿಜೆಪಿ ಮತ್ತು ಎಸ್‌ಡಿಪಿಐ ವರ್ತಿಸುತ್ತಿವೆ ಎಂದರು.

ಶಾಸಕ ಯು.ಟಿ. ಖಾದರ್‌ ಮುಸ್ಲಿಂ ಸಮುದಾಯದವರಾದರೂ, ಹಿಜಾಬ್‌ನ ಬಗ್ಗೆ ಅವರ ಸಮುದಾಯದ ವಿದ್ಯಾರ್ಥಿನಿಯರಿಗೆ ವಾಸ್ತವ ತಿಳುವಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ, ಬೊಮ್ಮಾಯಿಗೆ ಈ ಧೈರ್ಯ ಇದೆಯಾ ಎಂದವರು ಪ್ರಶ್ನಿಸಿದರು.

Karnataka Politics: ಆರ್‌ಎಸ್‌ಎಸ್ ಚಡ್ಡಿಯಿಂದ ದೇಶ ಉಳಿದಿದೆ: ಶಾಸಕ ರಘುಪತಿ ಭಟ್

ಸಿದ್ದರಾಮಯ್ಯ ಏನು ಹೇಳಿದರೂ ಅದಕ್ಕೆ ತೂಕ ಇದೆ, ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಕ್ಕೆ ಉಡುಪಿ ಜಿಲ್ಲಾಬಿಜೆಪಿ ನಾಯಕರಿಗೆ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಮಾತನಾಡಿದರೆ ಬೊಮ್ಮಾಯಿ ಯಡಿಯೂರಪ್ಪ ಉತ್ತರ ಕೊಡಲಿ, ಆಡಳಿತ ನಡೆಸುವುದು ಹೇಗೆ ಎಂದು ಸಿದ್ದರಾಮಯ್ಯ ಅವರಿಂದ ಬಿಜೆಪಿ ಸಲಹೆ ಪಡೆಯಲಿ ಎಂದು ಸಲಹೆ ಮಾಡಿದರು.

ಚಡ್ಡಿ ಕಳಿಸಿದರೆ ಬಟವಾಡೆ ಮಾಡುತ್ತೇವೆ: 

ಉಡುಪಿ ಜಿಲ್ಲಾ ಜೆಪಿಯವರು ಬೆಂಗಳೂರು ಕೆಪಿಸಿಸಿ ಕಚೇರಿಗೆ ಚಡ್ಡಿ ಕಳಿಸುತ್ತಿದ್ದಾರೆ, ಉಡುಪಿ ಜಿಲ್ಲಾ ಕಚೇರಿಗೆ ಕಳಿಸಿದ್ದರೆ ನಾವೆ ಸೂಕ್ತವಾಗಿ ಬಟವಾಡೆ ಮಾಡುತ್ತಿದ್ದೆವು. ನಮ್ಮ ಕೈಗೆ ಇನ್ನೂ ಚಡ್ಡಿ ಸಿಗಲಿಲ್ಲ, ಸಿಕ್ಕಿದರೆ ಬಟವಾಡೆ ಮಾಡುತ್ತೇವೆ ಎಂದು ವ್ಯಂಗ್ಯವಾಡಿದ ಸೊರಕೆ, ಬಿಜೆಪಿಯವರು ತಮ್ಮ ಲೋಪದೋಷಗಳನ್ನು ಮುಚ್ಚಿಹಾಕಲು ಈ ಚಡ್ಡಿ ಅಭಿಯಾನ ಮಾಡುತ್ತಿದ್ದಾರೆ ಎಂದರು. 

Follow Us:
Download App:
  • android
  • ios