ದಲಿತ ಸಿಎಂ ಬೇಡಿಕೆ ಸಾಯುವವರೆಗೂ ಒತ್ತಾಯ: ಸಂಸದ ರಮೇಶ ಜಿಗಜಿಣಗಿ

ದಲಿತ ಸಿಎಂ ವಿಚಾರ ನಾನು ಸಾಯುವವರೆಗೆ ಜೀವಂತವಾಗಿಡುತ್ತೇನೆ. ನಾನು ಜೀವನದಲ್ಲಿ ಯಾವುದೇ ಆಸೆ ಇಟ್ಟಿಲ್ಲ. ಯಾವುದಕ್ಕೂ ಬೆನ್ನು ಬಿದ್ದಿಲ್ಲ. ಬಂದರೆ ತಾನೇ ಬರುತ್ತದೆ. ಬಂದರೆ ಚಾರ್‌ ಆಣೆ, ಹೋದರೆ ಬಾರಾ ಆಣೆ ಎಂದು ತಿಳಿಸಿದ ಜಿಗಜಿಣಗಿ. 

Vijayapura BJP MP Ramesh Jigajinagi Talks Over Dalit Chief Minister in Karnataka grg

ವಿಜಯಪುರ(ಫೆ.07):  ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂಬುವುದನ್ನು ನಾನು ಸಾಯುವವರೆಗೆ ಒತ್ತಾಯಿಸುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಸಂಸದ ರಮೇಶ ಜಿಗಜಿಣಗಿ ರಾಜ್ಯದ ಸಿಎಂ ಆಗಬೇಕು ಎಂಬ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಹೇಳಿಕೆ ಹಾಗೂ ರಾಜ್ಯದಲ್ಲಿ ದಲಿತ ಸಿಎಂ ವಿಚಾರವಾಗಿ ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ದಲಿತ ಸಿಎಂ ವಿಚಾರ ನಾನು ಸಾಯುವವರೆಗೆ ಜೀವಂತವಾಗಿಡುತ್ತೇನೆ. ನಾನು ಜೀವನದಲ್ಲಿ ಯಾವುದೇ ಆಸೆ ಇಟ್ಟಿಲ್ಲ. ಯಾವುದಕ್ಕೂ ಬೆನ್ನು ಬಿದ್ದಿಲ್ಲ. ಬಂದರೆ ತಾನೇ ಬರುತ್ತದೆ. ಬಂದರೆ ಚಾರ್‌ ಆಣೆ, ಹೋದರೆ ಬಾರಾ ಆಣೆ ಎಂದು ತಿಳಿಸಿದರು.

ಆದರೆ ದಲಿತ ಸಿಎಂ ಆಗಬೇಕು ಎಂಬ ಇಚ್ಚೆ ಇಟ್ಟಿದ್ದೇವೆ. ಆದರೆ ಬೇಕೆ ಬೇಕು ಎಂಬ ಅಪೇಕ್ಷೆ ಜೀವನದಲ್ಲಿ ಇಟ್ಟಿಲ್ಲ. ಆದರೆ ದೇವರು ನನ್ನ ಕೈ ಬಿಟ್ಟಿಲ್ಲ. ಯಾವ ಚೆಲುವ ಏನು ಮಾಡಿದರೂ ನನಗೇನೂ ಆಗಲ್ಲ. ದೇವರ ರಕ್ಷಣೆ ನನಗಿದೆ. ನನಗೆ ದೇವರು ತುಂಬಾ ಶಕ್ತಿ ಕೊಟ್ಟಿದ್ದಾನೆ. ಆನೆಯಂತಹ ಶಕ್ತಿಯನ್ನು ಮನಸಿನಲ್ಲಿ ಇಟ್ಟುಕೊಂಡು ಇರುವೆ ಹಾಗೇ ಜೀವನ ಮಾಡುತ್ತೇನೆ ಎಂದರು.

ನಾವು ಪಕ್ಷ ಸೇರದಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ: ಸಂಸದ ರಮೇಶ ಜಿಗಜಿಣಗಿ

ನಾನು ಬಸವ ನಾಡಿನವರಾಗಿರುವುದರಿಂದ ಎಲ್ಲರಿಗಿಂತ ಸಣ್ಣವನಾಗಿ ಕೆಲಸ ಮಾಡುತ್ತೇನೆ. ಬಸವಣ್ಣನವರು ಹೇಳಿದಂತೆ ನನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಬಜೆಟ್‌ ಕಣ್ಣೊರೆಸುವ ತಂತ್ರವಾಗಿದೆ ಎಂಬ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿದ್ದಾರೆ. ಅವರು ವಿರೋಧಿಸುವುದು ಸಹಜ. ನಾವು ವಿರೋಧ ಪಕ್ಷದಲ್ಲಿದ್ದಾಗ ಇದೇ ರೀತಿ ಮಾತನಾಡುತ್ತಿದ್ದೆವು. ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುತ್ತೇವೆ. ರೈಲ್ವೆ ಇಲಾಖೆಗೆ .7561 ಕೋಟಿ ನೀಡಲಾಗಿದೆ. ಕಳೆದ ಬಾರಿಗಿಂತ ಈ ಸಲ ಶೇ.33ರಷ್ಟುಹೆಚ್ಚಿಗೆ ಹಣ ನೀಡಲಾಗಿದೆ. ಇದನ್ನು ಕುಮಾರಸ್ವಾಮಿ ಸರಿಯಾಗಿ ಓದಲಿಲ್ಲ ಎನಿಸುತ್ತದೆ ಎಂದರು.

ರಾಜ್ಯದಲ್ಲಿ ಬ್ರಾಹ್ಮಣರನ್ನು ಸಿಎಂ ಮಾಡುವ ಹುನ್ನಾರ ನಡೆಯುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ, ದೇವೇಗೌಡ ಅಷ್ಟೇಯಲ್ಲ. ಯಾವುನೇ ಆಗಿರಲಿ, ಜಾತಿಗಳ ನಿಂದನೆ ಮಾಡಬಾರದು. ಅದು ಒಳ್ಳೆಯದಲ್ಲ. ಅದು ಯಾರೇ ಇರಲಿ. ಯಾವುದೇ ಜಾತಿಯಿರಲಿ. ಜಾತಿಗಳ ನಿಂದನೆ ಅವರ ಎತ್ತರಕ್ಕೆ ಸಲ್ಲುವುದಿಲ್ಲ. ಎರಡು ಬಾರಿ ಸಿಎಂ ಆದವರು ಇಂಥ ಮಾತನಾಡಬಾರದು ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಂಡಿ ಜಿಲ್ಲೆ: ಯಶವಂತರಾಯಗೌಡ ಪಾಟೀಲ

ನ್ಯಾಯಯುತ ಸಂಪಾದನೆಯ ಆಸ್ತಿ ಮೌಲ್ಯ ಹೆಚ್ಚಳ

2008ರಿಂದ 2019ರ ಅವಧಿಯಲ್ಲಿ ಸತತ ಮೂರು ಬಾರಿ ಆಯ್ಕೆಯಾದ 71 ಜನ ಸಂಸದರ ಆಸ್ತಿ ಪೈಕಿ ಸಂಸದ ರಮೇಶ ಜಿಗಜಿಣಗಿ ಅವರ ಆಸ್ತಿ ಎಲ್ಲರಿಗಿಂತಲೂ ಹೆಚ್ಚಾಗಿದೆ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಲಂಚ ತಿನ್ನಲಾರದೆ ಎಲ್ಲರಿಗಿಂತ ನನ್ನ ಆಸ್ತಿ ಹೆಚ್ಚಿದೆ ಎಂದು ಖಡಕ್‌ ಆಗಿ ಹೇಳಿದರು.

ಈ ಹಿಂದೆ ನಾನು ನಾಲ್ಕು ಸಾವಿರ ರು.ಗಳಿಗೆ ಒಂದು ಎಕರೆಯಂತೆ 150 ಎಕರೆ ಖರೀದಿ ಮಾಡಿದ್ದೇನೆ. ಇಂದು ಆ ಜಮೀನು ಪ್ರತಿ ಎಕರೆಗೆ ನಾಲ್ಕು ಎಕರೆಗೆ ಮಾರಾಟವಾಗುವುದಿಲ್ಲ. ಇದೀಗ ಆಸ್ತಿ ಮೌಲ್ಯ ಹೆಚ್ಚಿದೆ. ನಾನೇನು ರೋಡ್‌ ಕೆತ್ತಲು ಹೋಗಿ ರೊಕ್ಕ ತಂದಿಲ್ಲ. ಯಾರ ಕಿಸೆಗೂ ಕೈ ಹಾಕಿಲ್ಲ. ನ್ಯಾಯಯುತವಾಗಿ ಆಸ್ತಿ ಹೆಚ್ಚಾಗಿದೆ ಎಂದು ಜಿಗಜಿಣಗಿ ಸಮರ್ಥಿಸಿಕೊಂಡರು.

Latest Videos
Follow Us:
Download App:
  • android
  • ios