Asianet Suvarna News Asianet Suvarna News

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಂಡಿ ಜಿಲ್ಲೆ: ಯಶವಂತರಾಯಗೌಡ ಪಾಟೀಲ

ಜನರ ಜೇಬಿಗೆ ಹಣ ಹಾಕಿದರೆ ಅದು ಅಭಿವೃದ್ಧಿ ಅಲ್ಲ, ಮತಕ್ಷೇತ್ರದ ಸಾರ್ವಜನಿಕರಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದರ ಜೊತೆಗೆ ಜಿಲ್ಲೆಯಲ್ಲಿ ಮಾದರಿ ಮತಕ್ಷೇತ್ರ ಮಾಡುವುದು ಅಭಿವೃದ್ಧಿ ಕಾರ್ಯವಾಗಿದೆ: ಯಶವಂತರಾಯಗೌಡ ಪಾಟೀಲ 

Indi District if Congress Get Power in Karnataka Says Yashvantaraya Gouda Patil grg
Author
First Published Feb 4, 2023, 7:30 PM IST

ಇಂಡಿ(ಫೆ.04): 2013 ರಿಂದ 18 ವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷದ ಮಾದರಿಯಲ್ಲಿ ಮುಂಬರುವ 2023ರಲ್ಲಿಯೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಂಡಿ ಜಿಲ್ಲೆ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಗುರುವಾರ ಸಂಜೆ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಇಂಡಿ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮೆಗಾ ಮಾರುಕಟ್ಟೆ ಮೊದಲನೇ ಹಂತದ ಕಟ್ಟಡ ಉದ್ಘಾಟನೆ, ಮೆಗಾ ಮಾರುಕಟ್ಟೆ ಎರಡನೇ ಹಂತದ ಕಾಮಗಾರಿ ಶಂಕುಸ್ಥಾಪನೆ, 24‍X7 ಶುದ್ಧ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ, ವಾರ್ಡ್‌ 20,22 ಹಾಗೂ 23ರಲ್ಲಿ ಬರುವ ತಾಂಡಾಗಳಿಗೆ ನೀರು ಸರಬರಾಜು ವಿತರಣಾ ಜಾಲ ವ್ಯವಸ್ಥೆ ಕಲ್ಪಿಸುವ ಕಾಮಗಾರಿ, ಡಾ.ಬಿ.ಆರ್‌.ಅಂಬೇಡ್ಕರ್‌ ನೂತನ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಹಾಗೂ ವಿಕಲಚೇತನರಿಗೆ ತ್ರಿಚಕ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಿ.ಶಿವಾನಂದ ಪಾಟೀಲ ಪತ್ನಿ ವಿಶಾಲಾಕ್ಷಿ ಸಿಂದಗಿ ಜೆಡಿಎಸ್‌ ಅಭ್ಯರ್ಥಿ: ಎಚ್‌ಡಿಕೆ

ಜನರ ಜೇಬಿಗೆ ಹಣ ಹಾಕಿದರೆ ಅದು ಅಭಿವೃದ್ಧಿ ಅಲ್ಲ, ಮತಕ್ಷೇತ್ರದ ಸಾರ್ವಜನಿಕರಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದರ ಜೊತೆಗೆ ಜಿಲ್ಲೆಯಲ್ಲಿ ಮಾದರಿ ಮತಕ್ಷೇತ್ರ ಮಾಡುವುದು ಅಭಿವೃದ್ಧಿ ಕಾರ್ಯವಾಗಿದೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ,ಮತಕ್ಷೇತ್ರದಲ್ಲಿ ಇನ್ನೂಳಿದ 18 ಕೆರೆಗಳನ್ನು ತುಂಬಿಸುವುದು,ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು ನನ್ನ ಮೊದಲ ಚಿಂತನೆಯಾಗಿದೆ ಎಂದು ಹೇಳಿದರು.

ಇಂಡಿ ಪಟ್ಟಣದ ಎಲ್ಲ ವಿಧದಲ್ಲಿಯೂ ಅಭಿವೃದ್ದಿ ಹೊಂದಲು ಮಾಸ್ಟರ್‌ಪ್ಲಾನ್‌ ಆಗಲು ನಿರ್ಣಯಿಸಲಾಗಿದೆ. ಇಂಡಿ ಜಿಲ್ಲಾ ಮಾಡುವ ಮುಂದಿನ ಚಿಂತನೆಯಿಂದಲೇ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ವಿಧಾನಸಭೆ ಚುನಾವಣೆ ಮುಗಿದ ಮೇಲೆ ಜನಸಂಖ್ಯೆ ಸರ್ವೆ ನಡೆದಾಗ ಇಂಡಿ ಜನಸಂಖ್ಯೆ 50 ಸಾವಿರಕ್ಕಿಂತ ಹೆಚ್ಚಾಗಲಿದ್ದು, ಅಂದು ಇಂಡಿ ಪುರಸಭೆ ನಗರಸಭೆಯಾಗಲಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ರಾಜಕೀಯ ರಣಕಹಳೆ ಊದಲು ತಮ್ಮ ಮನೆಯ ಬಾಗಿಲಿಗೆ ಬಂದು ಮತಕ್ಷೇತ್ರದ ಅಭಿವೃದ್ಧಿ ಮುಂದಿಟ್ಟು ದುಡಿದಿರುವ ಕೂಲಿ ಕೇಳಲು ಬರುವೇನು.ಪ್ರಬುದ್ಧ,ಇಚ್ಚಾಸಕ್ತಿ,ಕಳಕಳಿ,ನೀತಿ,ಸಿದ್ದಾಂತದ ಉಳ್ಳವರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು.

Vijayapura: ಚುನಾವಣೆಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್ ಅಧಿಕಾರಿ!

ತಹಸೀಲ್ದಾರ್‌ ನಾಗಯ್ಯಾ ಹಿರೇಮಠ, ತಾಪಂ ಇಒ ಸುನೀಲ ಮದ್ದಿನ, ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ, ಸದಸ್ಯರಾದ ಭೀಮನಗೌಡ ಪಾಟೀಲ, ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಜಗದೀಶ ಕ್ಷತ್ರಿ, ಶ್ರೀಕಾಂತ ಕೂಡಿಗನೂರ, ಜಾವೀದ ಮೋಮಿನ್‌, ಮಂಜುನಾಥ ಕಾಮಗೊಂಡ, ಭೀಮಾಶಂಕರ ಮೂರಮನ, ಪ್ರಶಾಂತ ಕಾಳೆ, ಲಿಂಬಾಜಿ ರಾಠೋಡ, ಸುನೀಲ ಕುಲಕರ್ಣಿ, ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವಳಿ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ಮುಸ್ತಾಕ ಇಂಡಿಕರ್‌, ಶ್ರೀಶೈಲ ಪೂಜಾರಿ, ಉಮೇಶ ದೇಗಿನಾಳ, ಶೇಖರ ನಾಯಕ, ಇಇ ಮನೋಜಕುಮಾರ ಗಡಬಳ್ಳಿ, ಎಇಇ ಎಸ್‌.ಆರ್‌ ರುದ್ರವಾಡಿ, ರಷೀದ ಅರಬ, ಅಣ್ಣಾರಾಯ ಬಿದರಕೋಟಿ ,ಎಂ.ಆರ್‌ ಪಾಟೀಲ, ಧರ್ಮು ವಾಲಿಕಾರ, ಯಮುನಾಜಿ ಸಾಳುಂಕೆ, ನೀಲಕಂಠಗೌಡ ಪಾಟೀಲ, ಕಲ್ಲನಗೌಡ ಪಟೀಲ, ಶಾಂತುಗೌಡ ಬಿರಾದಾರ,ಸದಾಶಿವ ಪ್ಯಾಟಿ,ಸತೀಶ ಕುಂಬಾರ,ಸುಧಿರ ಕರಕಟ್ಟಿ,ಉಮೇಶ ದೇಗಿನಾಳ,ಲಿಂಬಾಜಿ ರಾಠೋಡ,ಶ್ರೀಶೈಲ ಪೂಜಾರಿ,ಅಶೋಕ ಚಂದನ,ಪ್ರವೀಣ ಸೋನಾರ,ಅಮರಣ್ಣವರ,ಹುಚ್ಚಪ್ಪ ಶಿವಶರಣ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

ಪಟ್ಟಣದಲ್ಲಿ ಚನ್ನಮ್ಮನ ವೃತ್ತ, ಪುತ್ಥಳಿ, ಶಿವಾಜಿ ಮಹಾರಾಜ, ಮಡಿವಾಳ ಮಾಚಿದೇವ,ದಾದಾಗೌಡರು,ಸ್ವಾಮಿ ವಿವೇಕಾನಂದರಂತಹ ರಾಷ್ಟ್ರನಾಯಕರ ಹೆಸರಿನಲ್ಲಿ ವೃತ್ತ,ಪುತ್ಥಳಿ ನಿರ್ಮಿಸಿ ಗೌರವಿಸುವ ಕೆಲಸ ಮುಂಬರುವ ದಿನದಲ್ಲಿ ಮಾಡೋಣ ಅಂತ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ. 

Follow Us:
Download App:
  • android
  • ios