ವಿಜಯೇಂದ್ರ ಗೆಲುವಿಗೆ ಕಾಂಗ್ರೆಸ್ ಕಾರಣವೆಂದು ಡಿಕೆಶಿ ಹೇಳಿದ್ದಾರೆ; ಇಂತವರ ಜೊತೆ ನಾನು ಹೊಂದಾಣಿಕೆ ಮಾಡ್ಕೊಳ್ಬೇಕಾ? ಯತ್ನಾಳ್
ನೋ ನೋ ನಾನು ಯಾರ ಜೊತೆಗೂ ಹೊಂದಾಣಿಕೆಗೆ ಒಪ್ಪೊಲ್ಲ. ನನ್ನ ವಿಜಯೇಂದ್ರ ನಡುವಿನ ಒಪ್ಪಂದದ ಬಗ್ಗೆ ಯಾರೂ ಮಾತನಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರ (ಆ.15): ನೋ ನೋ ನಾನು ಯಾರ ಜೊತೆಗೂ ಹೊಂದಾಣಿಕೆಗೆ ಒಪ್ಪೊಲ್ಲ. ನನ್ನ ವಿಜಯೇಂದ್ರ ನಡುವಿನ ಒಪ್ಪಂದದ ಬಗ್ಗೆ ಯಾರೂ ಮಾತನಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಒಬ್ಬೊಬ್ಬರೇ ಯಾವುದೇ ಒಪ್ಪಂದ, ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ನಾವೆಲ್ಲರೂ ನಿರ್ಧರಿಸಿದ್ದೇವೆ , ಏನೇ ಆದ್ರೂ ಎಲ್ಲರೂ ಸೇರಿ ಮಾತುಕತೆ ನಡೆಸುತ್ತೇವೆ. ಮೊನ್ನೆ ಡಿಕೆ ಶಿವಕುಮಾರ ಹೇಳಿದ್ದಾರೆ, ವಿಜಯೇಂದ್ರ ಶಾಸಕನಾಗಿ ಆಯ್ಕೆ ಆಗಲು ಕಾಂಗ್ರೆಸ್ ಕಾರಣ ಎಂದು. ಈ ಹೊಂದಾಣಿಕೆ ಬಗ್ಗೆ ನಾನು ಮುಂಚೆಯೇ ಹೇಳಿದ್ದೆ ಯಾರೂ ನಂಬಲಿಲ್ಲ. ಈಗ ಡಿಕೆ ಶಿವಕುಮಾರ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಹೊಂದಾಣಿಕೆಗಾರರ ಜೊತೆ ನನ್ನ ಹೊಂದಾಣಿಕೆ ಸಾಧ್ಯವಿಲ್ಲ ಎಂದರು.
ಸಂಘದವರು, ಹೈಕಮಾಂಡ್‌ನವರು ಮಧ್ಯಸ್ಥಿಕೆ ವಹಿಸಿದರೆ ಅವರ ಜೊತೆ ಮಾತುಕತೆ ಮಾಡುತ್ತೇವೆ. ನಾವು ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದಕ್ಕೆ ಕಟೀಲ ಅವರು ಬರುವವರ ಇದ್ರು. ಆದರೆ ಅವರಿಗೆ ಡೆಂಗ್ಯೂ ಆದ ಕಾರಣ ಬರುತ್ತಿಲ್ಲ. ಇನ್ನು ಕೆಲವರು ಬರುವವರಿದ್ದಾರೆ. ಕಾದು ನೋಡಿ ಯಾರಾರು ಬರುತ್ತಾರೆ ಎಂದು. ಇದು ಬಿಜೆಪಿ ಬಂಡಾಯ ಅಂತಾ ಮಾಧ್ಯಮದವರು ಸುದ್ದಿ ಮಾಡಬೇಡಿ. ನಿಮಗೆ ಕೈಮುಗಿದು ಕೇಳಿಕೊಳ್ತೇನೆ. ನಮ್ಮದು ಬಿಜೆಪಿ ನಿಷ್ಠಾವಂತರ ಪಕ್ಷ. ಹೈಕಮಾಂಡ್ ಪರವಾನಗಿ ಪಡೆದುಕೊಂಡೇ ಪಾದಯಾತ್ರೆ ಮಾಡುತ್ತೇವೆ ಎಂದರು.
ಮುಡಾ ಹಗರಣ: ಮೂರು ಪಾರ್ಟಿಯಲ್ಲೂ ಮೂರು ಬಿಟ್ಟವರು ಇದ್ದಾರೆ - ಎಚ್ ವಿಶ್ವನಾಥ್ ಕಿಡಿ
ಬಿಜೆಪಿ ಸಂವಿಧಾನ ವಿರೋಧಿ ಇದೆ, ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡ್ತಾರೆ, ಮೀಸಲಾತಿ ಬದಲಾವಣೆ ಮಾಡ್ತಾರೆ ಅಂತಾ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದಾರೆ. ಇದೇ ಕಾರಣಕ್ಕೆ 240 ಸೀಟುಗಳು ಬಂದವು. ಜನರ ಮನಸಲ್ಲಿ ಇರುವ ತಪ್ಪು ಭಾವನೆಯನ್ನ ಹೋಗಲಾಡಿಸಲು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು '187 ಕೋಟಿ ರೂ. ಅಲ್ಲ 82 ಕೋಟಿ ಮಾತ್ರ ಭ್ರಷ್ಟಾಚಾರ ಆಗಿದೆ' ಅಂತಾ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾದರೆ ಆ 82 ಕೋಟಿ ರೂ. ಅಂದ್ರೆ ಅದು ದಲಿತರ ಹಣ ಅಲ್ವಾ? ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದೋಚಿದ್ದಾರೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ದಲಿತರ, ಹಿಂದುಳಿದ ಅವರಿಗೆ ಸೇರಿದ ಹಣವನ್ನ ಸದುಪಯೋಗ ಮಾಡಿದ್ದೇವೆ. ಇದರೆಲ್ಲದರ ಬಗ್ಗೆ ಪಾದಾಯತ್ರೆ ಮಾಡಿ ಜನರಿಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತೇವೆ ಎಂದರು.
ಗಣೇಶೋತ್ಸವ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡ್ರೆ ಕ್ರಮ: ಗೃಹ ಸಚಿವ ವಾರ್ನಿಂಗ್
ನಮ್ಮ ಪಾದಯಾತ್ರೆ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತೆ. ಇದಕ್ಕೆ ಯಾರೂ ಬೇಕಾದರೂ ಬರಬಹುದು ಎಂದರು ಇದೇ ವೇಳೆ ದೇವೇಗೌಡರ ಪತ್ನಿ ಹೆಸರಲ್ಲಿ ಕೆರೆ ಒತ್ತುವರಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಯತ್ನಾಳರು, 1974 ರಲ್ಲಿ ನಡೆದಿದ್ದೇ ಆದ್ರೆ ಈಗೇಕೆ ಹೊರಬಂದಿದೆ. ಇಷ್ಟು ದಿನ ಏನು ಮಾಡುತ್ತಿದ್ದರು. ಯಡಿಯೂರಪ್ಪ ಸರ್ಕಾರ ಇತ್ತು ಆಗ ಏಕೆ ಇದನ್ನ ತನಿಖೆ ಮಾಡಿಸಲಿಲ್ಲ? ತನಿಖೆ ಮಾಡಿಸಿ ತಪ್ಪಿದ್ರೆ ಶಿಕ್ಷೆ ಕೊಡಿಸಬಹುದಿತ್ತು. ಆದರೆ ಆಗ ಸುಮ್ಮನಿದ್ದು, ಈಗ ಅವರದು ಬಂತು ಅಂತಾ ಇದನ್ನೆಲ್ಲ ಬಹಿರಂ ಮಾಡುತ್ತಿದ್ದಾರೆ. ಅವರದು ಇವರು ಮುಚ್ಚುವುದು, ಇವರದು ಅವರು ಮುಚ್ಚುವುದು ಎಲ್ಲರೂ ಇದೇ ರೀತಿ ಹೊಂದಾಣಿಕೆ ಮಾಡುತ್ತಲೇ ಬಂದಿದ್ದಾರೆ. ಇದನ್ನೇ ನಾನು ಮೊದಲಿನಿಂದಲೂ ಹೇಳ್ತಿರೋದು ಇವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಅಂತಾ. ಇಂತಹವರ ಜೊತೆ ನಾನು ಒಪ್ಪಂದ, ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.