Asianet Suvarna News Asianet Suvarna News

ಪರಿಷತ್‌ ಎಲೆಕ್ಷನ್‌: ಬಿ.ಕೆ. ಹರಿಪ್ರಸಾದ್‌ ಬಳಿ ಇದೆ 14.62 ಕೋಟಿ ರು. ಮೌಲ್ಯದ ಆಸ್ತಿ

ತಾವು ಮತ್ತು ತಮ್ಮ ಪತ್ನಿಯ ಹೆಸರಲ್ಲಿ ಒಟ್ಟು 14.62 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು 64 ಲಕ್ಷ ರು. ಮೌಲ್ಯದ ಚಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌| ತಮ್ಮ ಹೆಸರಲ್ಲಿ 12.47 ಲಕ್ಷ ಸಾಲ, ಪತ್ನಿ 2 ಕೋಟಿ ರು. ಸಾಲ ಹೊಂದಿದ ಹರಿಪ್ರಸಾದ್‌|

Vidhan Parishat Election Congress Candidate B K Hariprasad Declare his Property Details
Author
Bengaluru, First Published Jun 19, 2020, 1:38 PM IST

ಬೆಂಗಳೂರು(ಜೂ.19): ವಿಧಾನ ಪರಿಷತ್‌ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಅವರು ತಾವು ಮತ್ತು ತಮ್ಮ ಪತ್ನಿಯ ಹೆಸರಲ್ಲಿ ಒಟ್ಟು 14.62 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು 64 ಲಕ್ಷ ರು. ಮೌಲ್ಯದ ಚಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ತಮ್ಮ ಕೈಯಲ್ಲಿ 20 ಸಾವಿರ ರು. ನಗದು, ವಿವಿಧ ಬ್ಯಾಂಕುಗಳಲ್ಲಿ 10.40 ಲಕ್ಷ ರು. ಠೇವಣಿ, 3 ಲಕ್ಷ ರು. ಮೌಲ್ಯದ ಶೇರು, ಡಿಬೆಂಚರ್‌, 9.36 ಲಕ್ಷ ರು. ಮೌಲ್ಯದ ಒಂದು ಹುಂಡೈ ಕ್ಸೆಂಟ್‌, 3.50 ಲಕ್ಷ ರು. ಮೌಲ್ಯದ ಮಾರುತಿ ಜೆನ್‌ ವಾಹನ ಸೇರಿ 26.48 ಲಕ್ಷ ರು. ಮೌಲ್ಯದ ಚರಾಸ್ತಿ, ತಮ್ಮ ಪತ್ನಿ ಕೈಯಲ್ಲಿ 10 ಸಾವಿರ ರು. ನಗದು, ವಿವಿಧ ಬ್ಯಾಂಕುಗಳಲ್ಲಿ 6.64 ಲಕ್ಷ ರು. ಠೇವಣಿ, 31.43 ಲಕ್ಷ ರು. ಮೌಲ್ಯದ 700 ಗ್ರಾಂ. ಚಿನ್ನಾಭರಣ ಸೇರಿ ಪಟ್ಟು 38.08 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಹೊಂದಿರುದಾಗಿ ಘೋಷಿಸಿಕೊಂಡಿದ್ದಾರೆ.

ಪರಿಷತ್‌ ಚುನಾವಣೆ: ನಾಸೀರ್‌ ಅಹ್ಮದ್‌ ಆಸ್ತಿ 36 ಕೋಟಿ

ಇನ್ನು, ಆರ್‌ಟಿ ನಗರದಲ್ಲಿ ತಮ್ಮ ಹೆಸರಲ್ಲಿ 4000 ಚ.ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿರುವ 10.50 ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡ, ತಮ್ಮ ಪತ್ನಿ ಆರ್‌ಎಂವಿ ಎಕ್ಸ್‌ಟೆನ್ಷನ್‌ನಲ್ಲಿ 3,750 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ 4.12 ಕೋಟಿ ರು. ಮೌಲ್ಯದ ವಸತಿ ಸಮುಚ್ಚಯದಲ್ಲಿ ಶೇ.50ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಉಳಿದಂತೆ ತಮ್ಮ ಹೆಸರಲ್ಲಿ 12.47 ಲಕ್ಷ ಸಾಲ, ಪತ್ನಿ 2 ಕೋಟಿ ರು. ಸಾಲ ಹೊಂದಿರುವುದಾಗಿ ಹೇಳಿದ್ದಾರೆ.
 

Follow Us:
Download App:
  • android
  • ios