Asianet Suvarna News Asianet Suvarna News

ಮೈತ್ರಿ ಬಲದಿಂದ ಪರಿಷತ್‌ ಚುನಾವಣೆಯಲ್ಲೂ ಗೆಲುವು: ಬಿ.ವೈ.ರಾಘವೇಂದ್ರ

ಮೈತ್ರಿ ಬಲದಿಂದಾಗಿ ಲೋಕಸಭೆ ಮತ್ತು ಪರಿಷತ್‌ ಚುನಾವಣೆಯಲ್ಲಿಯೂ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Victory in the Parishad elections also with the strength of the alliance Says BY Raghavendra gvd
Author
First Published May 17, 2024, 5:36 PM IST

ಮೈಸೂರು (ಮೇ.17): ಮೈತ್ರಿ ಬಲದಿಂದಾಗಿ ಲೋಕಸಭೆ ಮತ್ತು ಪರಿಷತ್‌ ಚುನಾವಣೆಯಲ್ಲಿಯೂ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ಲೋಕಸಭೆಯ ಜತೆಗೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲೂ ಗೆಲ್ಲುತ್ತೇವೆ. ಈ ಬಾರಿಯ ಚುನಾವಣೆಗೆ ಮೈತ್ರಿಯ ಬಲವಿದೆ. ನಾವು ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದರು.

ರಘುಪತಿ ಭಟ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರ ಜತೆಪಕ್ಷದ ಮುಖಂಡರು ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ. ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಮೂರು ದಿನ ಕಾಲಾವಕಾಶವಿದೆ. ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡುತ್ತಾರೆ. ಕಾರ್ಯಕರ್ತರೇ ನಮ್ಮ ಪಕ್ಷದ ಬಲ. ಅವರ ಬಲದಿಂದ ನಾವು ಚುನಾವಣೆ ಎದುರಿಸುತ್ತೇವೆ. ಗೆಲ್ಲುವ ನಂಬಿಕೆ ಇದೆ ಎಂದರು.

ಬಿಜೆಪಿಗರಿಗೆ ಹೇಳಿಕೊಳ್ಳಲು ಏನೂ ಇಲ್ಲ. ಸುಳ್ಳು ಹೇಳುವುದೇ ಅವರ ಕಾಯಕ: ಸಚಿವ ಈಶ್ವರ ಖಂಡ್ರೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ. ಚುನಾವಣಾ ಆಯೋಗಕ್ಕೆ ಕೆ.ಎಸ್. ಈಶ್ವರಪ್ಪ ದೂರು ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಚುನಾವಣಾ ಫಲಿತಾಂಶ ಹೊರ ಬಂದ ಮೇಲೆ ಮಾತನಾಡುವೆ. ಈಶ್ವರಪ್ಪ ಬಂಡಾಯ ಸ್ಪರ್ಧೆಯಿಂದ ಗೆಲುವಿಗೆ ಯಾವ ಅಡ್ಡಿಯೂ ಇಲ್ಲ ಎಂದು ಅವರು ಹೇಳಿದರು.

ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿರುವಂತೆ ದೇಶದಲ್ಲಿ 400 ಕ್ಷೇತ್ರಗಳಿಗೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಈಗ ನಡೆದಿರುವ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸುತ್ತದೆ ಎನ್ನುವುದರ ಬಗ್ಗೆ ಅಂಕಿ ಅಂಶ ಹೇಳುತ್ತಿವೆ ಎಂದು ಅವರು ತಿಳಿಸಿದರು. ಪ್ರಜ್ವಲ್‌ ಪೆನ್‌ ಡ್ರೈವ್ ಪ್ರಕರಣದಿಂದ ವಿಧಾನ ಪರಿಷತ್‌ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಡಿಕೆಶಿ ಮಾಸ್ಟರ್‌ಮೈಂಡ್: ಸಿ.ಪಿ.ಯೋಗೇಶ್ವರ್

ಜನರು ಕ್ಷೇತ್ರಕ್ಕೆ ಅಭ್ಯರ್ಥಿಯಾದ ಮೇಲೆ ಯಾವ ರೀತಿ ಅನುಕೂಲ ಆಗುತ್ತದೆ ಎಂಬುದನ್ನು ನೋಡುತ್ತಾರೆಯೇ ಹೊರತು ವೈಯಕ್ತಿಕ ವಿಚಾರವನ್ನು ರಾಜಕೀಯಕ್ಕೆ ತರುವುದಿಲ್ಲ ಅಂಥ ನನಗೆ ಅನ್ನಿಸುತ್ತದೆ. ಈಗಾಗಲೇ ಪೆನ್‌ ಡ್ರೈವ್ ಪ್ರಕರಣ ಸಂಬಂಧ ಜೆಡಿಎಸ್‌ ನಾಯಕರು ಉತ್ತರಿಸಿದ್ದಾರೆ. ಈ ಸಂಬಂಧ ಎಸ್‌ಐಟಿ ಕೂಡ ತನಿಖೆ ನಡೆಸುತ್ತಿದೆ. ಹೀಗಾಗಿ, ನಾನೇನೂ ಹೇಳುವಂತದ್ದು ಇಲ್ಲ ಎಂದರು.

Latest Videos
Follow Us:
Download App:
  • android
  • ios