ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾರ‍್ಯಕರ್ತರು ಶ್ರದ್ಧೆಯಿಂದ ಶ್ರಮಿಸಬೇಕು. ಪರಸ್ಪರ ಒಗ್ಗಟ್ಟಿನಿಂದ, ಒಕ್ಕೊರಲಿನಿಂದ ಕೆಲಸ ಮಾಡಿದಾಗ ಗೆಲುವು ನಮ್ಮದಾಗಲಿದೆ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಉಪ್ಪಿನಂಗಡಿ (ಫೆ.6) : ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾರ‍್ಯಕರ್ತರು ಶ್ರದ್ಧೆಯಿಂದ ಶ್ರಮಿಸಬೇಕು. ಪರಸ್ಪರ ಒಗ್ಗಟ್ಟಿನಿಂದ, ಒಕ್ಕೊರಲಿನಿಂದ ಕೆಲಸ ಮಾಡಿದಾಗ ಗೆಲುವು ನಮ್ಮದಾಗಲಿದೆ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಭಾನುವಾರ ನೆಲ್ಯಾಡಿಯಲ್ಲಿ ಕಡಬ ಮತ್ತು ನೆಲ್ಯಾಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ 35 ವರ್ಷಗಳಿಂದ ಬಿಜೆಪಿ. ಶಾಸಕರು ಇದ್ದು, ಕಾಂಗ್ರೆಸ್‌ ಪಕ್ಷದ ಕಾರ‍್ಯಕರ್ತರು ಮತ್ತು ಮತದಾರರು ಇಷ್ಟೂವರ್ಷಗಳ ವನವಾಸದಿಂದ ಮುಕ್ತರಾಗಬೇಕು, ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತದೋ ಅವರನ್ನು ಗೆಲ್ಲಿಸುವ ಕೆಲಸ ಕಾರ್ಕಕರ್ತರಿಂದ ಆಗಬೇಕು ಎಂದರು.

ಧರ್ಮದ ಹೆಸರನಲ್ಲಿ ಬಿಜೆಪಿ ಸರ್ಕಾರ ರಾಜಕೀಯ: ಬಿ.ಕೆ. ಹರಿಪ್ರಸಾದ್‌

ಪ್ರದೇಶ ಕಾಂಗ್ರೆಸ್‌ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ದೇಶದ ಭವಿಷ್ಯ ಕರ್ನಾಟಕ ರಾಜ್ಯದ ಮತದಾರರ ಕೈಯಲ್ಲಿ ಇದೆ, ರಾಜ್ಯದ ಮತದಾರರ ಹಿತದೃಷ್ಟಿಯಿಂದ ಕಾಂಗ್ರೆಸ್‌ ಪಕ್ಷ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಹೀಗೆ ಪ್ರದೇಶವಾರು, ಸ್ಥಳೀಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅಭಿವೃದ್ಧಿ ದೃಷ್ಠಿಯಿಂದ ಬೇರೆ ಬೇರೆ ಪ್ರಣಾಳಿಕೆಯನ್ನು ಮಾಡಲಾಗಿದೆ, ಪಕ್ಷದ ಕಾರ‍್ಯಕರ್ತರು ಈ ವಿಚಾರವನ್ನು ಮತದಾರರಿಗೆ ತಿಳಿಸುವುದರ ಜೊತೆಗೆ ಬಿಜೆಪಿ. ಸರ್ಕಾರದ ದುರಾಡಳಿತವನ್ನು ತಿಳಿಸುತ್ತಾ ಮತದಾರರ ಮನಸ್ಸು ಗೆಲ್ಲುವ ಕೆಲಸ ಮಾಡಬೇಕು ಎಂದರು.

ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್‌ ಮಾಜಿ ಸದಸ್ಯ ಐವಾನ್‌ ಡಿ’ಸೋಜಾ, ಮಹಿಳಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿಮಾತನಾಡಿದರು.

Brahmin CM: ಬಿಜೆಪಿ ಗೆದ್ದರೆ ಪ್ರಲ್ಹಾದ್ ಜೋಶಿ ಸಿಎಂ: 'ಬ್ರಾಹ್ಮಣ ಸಿಎಂ' ಬಾಂಬ್‌ ಹಾಕಿದ ಎಚ್‌ಡಿಕೆ!

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್‌ ಹಮೀದ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಲುಕ್‌ಮಾನ್‌, ಕೆಪಿಸಿಸಿ. ಸದಸ್ಯರಾದ ರಕ್ಷಿತ್‌ ಶಿವರಾಮ್‌, ಡಾ. ರಘು, ಪಿ.ವಿ. ಮೋಹನ್‌, ಎಂ.ಎಸ್‌. ಮಹಮ್ಮದ್‌, ಕೃಷ್ಣಪ್ಪ, ನಂದಕುಮಾರ್‌, ಕೆ.ಪಿ. ತೋಮಸ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶ್ಯಾಲೆಟ್‌ ಪಿಂಟೋ, ಅಪ್ಪಿ ಮಂಗಳೂರು, ಅಶೋಕ್‌ ಕುಮಾರ್‌ ರೈ ಇದ್ದರು. ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್‌ ಕುಮಾರ್‌ ರೈ ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್‌ ಸದಸ್ಯ ಸರ್ವೋತ್ತಮ ಗೌಡ ವಂದಿಸಿದರು. ಗಂಗಾಧರ ಶೆಟ್ಟಿ, ಪೂವಪ್ಪ ಕರ್ಕೇರ ನಿರೂಪಿಸಿದರು.