ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿದ್ದೇ ತಡ, ಮುಂಬರುವ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಬಂದಿದೆ. 

ಚಿಕ್ಕಬಳ್ಳಾಪುರ (ಜೂ.10): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿದ್ದೇ ತಡ, ಮುಂಬರುವ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಬಂದಿದೆ. ಕಳೆದ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಎನ್‌.ಬಚ್ಚೇಗೌಡ ಜಯ ಗಳಿಸಿದ್ದರು. ಆಗ ಸೋಲಿನಿಂದ ನಿರಾಶರಾಗಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಈಗ ಮೈಗೊಡವಿ ನಿಂತಿದ್ದಾರೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಚೇತ್ರದಲ್ಲಿ ಎರಡುಬಾರಿ ಗೆಲುವಿನ ರುಚಿ ಕಂಡಿರುವ ಮೊಯ್ಲಿ ಮೂರನೇ ಬಾರಿ ಸ್ಪರ್ಧೆ ಮಾಡಿ ಗೆಲುವು ಸಾಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳ ಕ್ರೋಡೀಕರಣ ಮಾಡಲು ತಯಾರಿ ನಡೆಸಿದ್ದಾರೆ. ಜನರ ಜೊತೆ ಸಂಪರ್ಕ ಸಾಧಿಸಲು ಚಿಕ್ಕಬಳ್ಳಾಪುರ ಪ್ರಶಾಂತ ನಗರದಲ್ಲಿ ಶುಕ್ರವಾರ ನೂತನ ಕಚೇರಿ ತೆರೆದಿದ್ದಾರೆ. ಬಿಜೆಪಿಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಕಾಂಗ್ರೆಸ್‌ನಿಂದ ನಾನು ಸ್ಪರ್ಧೆ ಮಾಡುವೆ ಎಂಬ ಸುಳಿವು ನೀಡಿದ್ದಾರೆ.

ರಾಮ​ಲಿಂಗಾರೆಡ್ಡಿಗೆ ರಾಮ​ನೂ​ರಿನ ಉಸ್ತು​ವಾರಿ ಹೊಣೆ: ಎಚ್‌ಡಿಕೆ-ಡಿಕೆಶಿ ಕರ್ಮ​ಭೂ​ಮಿ​ಯಲ್ಲಿ ರೆಡ್ಡಿ ಪರ್ವ ಶುರು

ಆಭ್ಯರ್ಥಿ ಆಯ್ಕೆ ಪಕ್ಷಕ್ಕೆ ಬಿಟ್ಟಿದ್ದು: ಚಿಕ್ಕಬಳ್ಳಾಪುರ ನಗರದಲ್ಲಿ ಹೊಸ ಕಚೇರಿ ತೆರೆದಿರುವ ವೀರಪ್ಪ ಮೊಯ್ಲಿ, ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಜನರ ಸೇವೆಗಾಗಿ ಹೊಸ ಕಚೇರಿ ತೆರೆಯುತ್ತಿದ್ದೇನೆ. ವಾರದಲ್ಲಿ ಎರಡು ದಿನ ಕಚೇರಿಯಲ್ಲಿ ಸಿಗುತ್ತೇನೆ. ಇಂದಿನಿಂದ ಕಚೇರಿ ಕಾರ್ಯಾರಂಭ ಮಾಡುತ್ತದೆ. ಸದ್ಯದಲ್ಲೆ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಬರುತ್ತಿವೆ, ಎರಡೂ ಚುನಾವಣೆ ನಂತರ ಲೋಕಸಭಾ ಚುನಾವಣೆ ಬರುತ್ತಿದೆ. ಲೋಕಸಭೆಗೆ ಅಭ್ಯರ್ಥಿ ಆಯ್ಕೆ ಕಾರ್ಯಕಾರಿ ಸಮಿತಿಗೆ ಬಿಟ್ಟಿದ್ದು ಎನ್ನುತ್ತಲೇ ನಾನಿನ್ನು ಎರಡು ಚುನಾವಣೆ ಎದುರಿಸಿವಷ್ಟುಉತ್ಸಾಹದಲ್ಲಿದ್ದೇನೆ ಎಂದರು.

ಇಂದು- ನಾಳೆ ಡಿ.ಕೆ.ಶಿವಕುಮಾರ್‌ ಮಧ್ಯಪ್ರದೇಶದಲ್ಲಿ ಟೆಂಪಲ್‌ ರನ್‌

ಡಾ.ಸುಧಾಕರ್‌ ವಿರುದ್ಧ ಸ್ಪರ್ಧೆ?: ಮೂರು ಸಲ ಚಿಕ್ಕಬಳ್ಳಾಪುರದಿಂದ ನಿಂತು ಎರಡು ಸಲ ಗೆದ್ದಿದ್ದೇನೆ ಒಮ್ಮೆ ಸೋತಿದ್ದೇನೆ, ಈ ಸಲ ನಿಲ್ಲುವ ಉತ್ಸಾಹದಲ್ಲಿದ್ದೇನೆ. ಬಿಜೆಪಿಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಕಾಂಗ್ರೆಸ್‌ನಿಂದ ನಾನು ಸ್ಪರ್ಧೆ ಮಾಡುವೆ ಎಂದು ಮಾಜಿ ಸಚಿವ ಡಾ .ಕೆ ಸುಧಾಕರ್‌ ವಿರುದ್ಧ ಸ್ಪರ್ಧೆ ಮಾಡಲಿರುವುದಾಗಿ ಹೆಸರು ಹೇಳದೆ ಪರೋಕ್ಷವಾಗಿ ಹೇಳಿದರು. ಈಗಿನಿಂದಲೇ 2024ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಸುಳಿವು ನೀಡಿದರು. ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಂ, ಮಾಜಿ ನಗರಸಭಾ ಸದಸ್ಯ ಸುರೇಶ್‌, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ವಿ.ಕೃಷ್ಣಪ್ಪ ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು.