ರಾಮ​ಲಿಂಗಾರೆಡ್ಡಿಗೆ ರಾಮ​ನೂ​ರಿನ ಉಸ್ತು​ವಾರಿ ಹೊಣೆ: ಎಚ್‌ಡಿಕೆ-ಡಿಕೆಶಿ ಕರ್ಮ​ಭೂ​ಮಿ​ಯಲ್ಲಿ ರೆಡ್ಡಿ ಪರ್ವ ಶುರು

ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹಾಗೂ ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ರಾಜಕೀಯ ಕರ್ಮ​ಭೂ​ಮಿ​ಯಾ​ಗಿ​ರುವ ರಾಮ​ನ​ಗರ ಜಿಲ್ಲೆಯ ಉಸ್ತು​ವಾರಿ ಸಚಿ​ವರ ಹೊಣೆ​ಗಾರಿ​ಕೆ​ಯನ್ನು ಸಾರಿಗೆ ಸಚಿವ ರಾಮ​ಲಿಂಗಾ​ರೆಡ್ಡಿ ಹೆಗ​ಲಿಗೆ ವಹಿ​ಸಿ​ರು​ವುದು ಅಚ್ಚರ ಮೂಡಿ​ಸಿದೆ. 

Minister Ramalinga Reddy is In Charge of Ramanagara District gvd

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಜೂ.10): ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹಾಗೂ ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ರಾಜಕೀಯ ಕರ್ಮ​ಭೂ​ಮಿ​ಯಾ​ಗಿ​ರುವ ರಾಮ​ನ​ಗರ ಜಿಲ್ಲೆಯ ಉಸ್ತು​ವಾರಿ ಸಚಿ​ವರ ಹೊಣೆ​ಗಾರಿ​ಕೆ​ಯನ್ನು ಸಾರಿಗೆ ಸಚಿವ ರಾಮ​ಲಿಂಗಾ​ರೆಡ್ಡಿ ಹೆಗ​ಲಿಗೆ ವಹಿ​ಸಿ​ರು​ವುದು ಅಚ್ಚರ ಮೂಡಿ​ಸಿದೆ. ಕನ​ಕ​ಪುರ(ಸಾ​ತ​ನೂರು - 3ಬಾರಿ) ಕ್ಷೇತ್ರದಿಂದ 8ನೇ ಬಾರಿ ಗೆದ್ದು ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಉಪ​ಮು​ಖ್ಯ​ಮಂತ್ರಿ ಪಟ್ಟಅಲಂಕ​ರಿ​ಸಿ​ರುವ ಡಿ.ಕೆ.​ಶಿ​ವ​ಕು​ಮಾರ್‌ ಅವರೇ ರಾಮ​ನ​ಗರ ಜಿಲ್ಲಾ ಉಸ್ತು​ವಾರಿ ಸಚಿವ ಸ್ಥಾನದ ​ಜ​ವಾ​ಬ್ದಾರಿ ವಹಿ​ಸಿ​ಕೊ​ಳ್ಳು​ತ್ತಾ​ರೆಂದು ಎಲ್ಲರು ಭಾವಿ​ಸಿ​ದ್ದರು. ರಾಮ​ಲಿಂಗಾ​ರೆ​ಡ್ಡಿ​ ಬೆಂಗ​ಳೂರು ಗ್ರಾಮಾಂತರ ಜಿಲ್ಲಾ ಉಸ್ತು​ವಾರಿ ಸಚಿ​ವ​ರಾಗು​ತ್ತಾರೆಂದು ಕೇಳಿ ಬಂದಿ​ತ್ತು. 

ಆದರೀಗ ಡಿ.ಕೆ.​ಶಿ​ವ​ಕು​ಮಾರ್‌ ಅವರು ಬೆಂಗ​ಳೂರು ನಗರ ಜಿಲ್ಲಾ ಉಸ್ತು​ವಾರಿ ಸಚಿವ ಸ್ಥಾನ ಅಲಂಕ​ರಿ​ಸಿ​, ಹೊರ​ಗಿ​ನ​ವ​ರಾದ ರಾಮ​ಲಿಂಗಾ​ರೆಡ್ಡಿ ಅವ​ರಿಗೆ ರಾಮ​ನ​ಗರ ಜಿಲ್ಲಾ ಉಸ್ತು​ವಾರಿ ಸಚಿವ ಸ್ಥಾನದ ಪಟ್ಟಕಟ್ಟ​ಲಾ​ಗಿದೆ. ಅಷ್ಟಕ್ಕೂ ರಾಮ​ಲಿಂಗಾ​ರೆ​ಡ್ಡಿ​ರ​ವರು ಡಿಕೆ ಸಹೋ​ದ​ರ​ರೊಂದಿಗೆ ಉತ್ತಮ ಒಡ​ನಾಟವನ್ನೇ ಹೊಂದಿ​ದ್ದಾ​ರೆ. ಬೆಂಗ​ಳೂರು ಮಹಾ​ನ​ಗರ ಪಾಲಿಕೆ, ವಿಧಾನ ಪರಿ​ಷತ್‌ , ಜಿಲ್ಲಾ ಮತ್ತು ತಾಲೂಕು ಪಂಚಾ​ಯಿತಿ ಹಾಗೂ 2024ರ ಲೋಕ​ಸಭಾ ಚುನಾ​ವ​ಣೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಜಿಲ್ಲಾ ಉಸ್ತು​ವಾರಿ ಸಚಿ​ವ ಸ್ಥಾನ​ಗಳ ಹಂಚಿಕೆ ನಡೆ​ದಿ​ದೆ ಎನ್ನ​ಲಾ​ಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯುವ್ಯ ಕರ್ನಾ​ಟಕ ರಸ್ತೆ​ಸಾ​ರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾ​ಟಕ ಸಾರಿಗೆ ಸಂಸ್ಥೆಗಳಿಗೆ ಪ್ರತ್ಯೇಕ ವ್ಯಕ್ತಿ​ಗ​ಳನ್ನು ಅಧ್ಯ​ಕ್ಷ​ರ​ನ್ನಾಗಿ ನೇಮಕ ಮಾಡ​ಲಾ​ಗು​ತ್ತಿತ್ತು. ಆದರೆ, ಈ ಬಾರಿ ಸಾರಿಗೆ ಸಚಿ​ವ​ ರಾಮ​ಲಿಂಗಾ​ರೆಡ್ಡಿ ಅವ​ರಿ​ಗೇ ನಾಲ್ಕು ನಿಗ​ಮದ ಸಾರಥ್ಯ ನೀಡ​ಲಾ​ಗಿದೆ. ಇದರ ಜೊತೆಗೆ ರಾಮ​ನ​ಗರ ಜಿಲ್ಲಾ ಉಸ್ತು​ವಾರಿ ಸಚಿ​ವರ ಜವಾ​ಬ್ದಾ​ರಿ​ಯೂ ಹೆಗ​ಲಿಗೆ ಬಿದ್ದಿ​ದೆ.

ಇಂದು- ನಾಳೆ ಡಿ.ಕೆ.ಶಿವಕುಮಾರ್‌ ಮಧ್ಯಪ್ರದೇಶದಲ್ಲಿ ಟೆಂಪಲ್‌ ರನ್‌

ಹೊರ​ಗಿ​ನ​ವ​ರ ಹೆಗ​ಲಿಗೆ ಉಸ್ತು​ವಾರಿ ಹೊರೆ: ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 2007ರಲ್ಲಿ ರಾಮನಗರ ಜಿಲ್ಲೆಯನ್ನು ರಚಿಸಿದರು. ಆಗ ಆಯಕಟ್ಟಿನ ಡಬಲ… ಖಾತೆಗಳ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ಅವರಿಗೆ ಹಾಸನದ ಜತೆಗೆ ರಾಮನಗರದ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಬಿ.ಎಸ್‌.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಮೊದಲಿಗೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಬೆಂಗಳೂರು ಜತೆಗೆ ರಾಮನಗರದ ಹೆಚ್ಚುವರಿ ಹೊಣೆ ವಹಿಸಿಕೊಂಡರು. ನಂತರದಲ್ಲಿ ಉಮೇಶ್‌ ಕತ್ತಿ, ಬಿ.ಶ್ರೀರಾಮುಲು ಹಾಗೂ ಬಿ.ಎನ್‌.ಬಚ್ಚೇಗೌಡ ರಾಮನಗರದಲ್ಲಿ ಉಸ್ತುವಾರಿ ಸಚಿವರಾಗಿ ದರ್ಬಾರ್‌ ನಡೆಸಿದ್ದರು.

ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದಗೌಡ ಅಧಿಕಾರದಲ್ಲಿದ್ದಾಗ ಜಿಲ್ಲೆಯವರೇ ಆದ ಸಿ.ಪಿ.ಯೋಗೇಶ್ವರ್‌ ಇಲ್ಲಿನ ಉಸ್ತುವಾರಿ ಸಚಿವರಾದರು. ಇವರೇ ರಾಮನಗರ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಮೊಟ್ಟಮೊದಲ ಸ್ಥಳೀಯ ಸಚಿವ ಎನಿಸಿಕೊಂಡಿದ್ದರು. ಸದಾನಂದಗೌಡ ಪದತ್ಯಾಗದ ಬಳಿಕ ಸಿಎಂ ಹುದ್ದೆಗೇರಿದ ಜಗದೀಶ್‌ ಶೆಟ್ಟರ್‌ ಉಸ್ತುವಾರಿಗಳನ್ನು ಬದಲಿಸಿದರು. ಯೋಗೇಶ್ವರ್‌ ಅವರನ್ನು ನೆರೆಯ ಮಂಡ್ಯಕ್ಕೆ ಎತ್ತಂಗಡಿ ಮಾಡಿ, ಈ ಜಿಲ್ಲೆಗೆ ಹೊನ್ನಾಳಿಯವರಾದ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಪ್ರತಿಷ್ಠಾಪಿಸಿದ್ದರು.

ಡಿಕೆಶಿ ಬದಲು ಬೇರೊಬ್ಬ​ರಿಗೆ ಸಾರ​ಥ್ಯ: ಕಾಂಗ್ರೆಸ್‌ ಅಧಿ​ಕಾ​ರ​ದ​ಲ್ಲಿದ್ದಾಗ ಡಿಕೆಶಿ ಬದ​ಲಿಗೆ ಬೇರೊ​ಬ್ಬ​ರಿಗೆ ಜಿಲ್ಲಾ ಉಸ್ತು​ವಾರಿ ಸಚಿವ ಹೊಣೆ​ಗಾ​ರಿಕೆ ನೀಡಿರು​ವುದು 2ನೇ ಬಾರಿ​ಯಾ​ಗಿ​ದೆ. ಬೆಂಗ​ಳೂರು ಗ್ರಾಮಾಂತರ ಜಿಲ್ಲೆ ಆಗಿ​ದ್ದಾಗ ಎಸ್‌.ಎಂ.​ಕೃ​ಷ್ಣ​ರ​ವರ ಸಚಿವ ಸಂಪು​ಟ​ದಲ್ಲಿ ಸಹ​ಕಾರ ಮತ್ತು ನಗ​ರಾ​ಭಿ​ವೃದ್ಧಿ ಸಚಿ​ವ​ರಾ​ಗಿದ್ದ ಡಿ.ಕೆ.​ಶಿ​ವ​ಕು​ಮಾರ್‌ ಜಿಲ್ಲಾ ಉಸ್ತು​ವಾ​ರಿ ಸಚಿ​ವ​ರಾ​ಗಿ​ದ್ದರು. 2013ರಲ್ಲಿ ಸಿದ್ದ​ರಾ​ಮ​ಯ್ಯ​ರ​ವರ ಸರ್ಕಾ​ರ​ದಲ್ಲಿ ಒಂದು ವರ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಸಚಿವ ಸ್ಥಾನ ಸಿಕ್ಕಿ​ರ​ಲಿಲ್ಲ. ಆ ಸಮ​ಯ​ದಲ್ಲಿ ಕೃಷ್ಣ​ಬೈ​ರೇ​ಗೌಡ ಉಸ್ತು​ವಾ​ರಿ ಸಚಿ​ವ​ ಸ್ಥಾನ ನಿಭಾ​ಯಿ​ಸಿ​ದ್ದ​ರು. 

ಆನಂತರ ಇಂಧನ ಸಚಿ​ವ​ರಾದ ಡಿಕೆಶಿ ಜಿಲ್ಲಾ ಉಸ್ತು​ವಾರಿ ಸಚಿ​ವ​ರಾ​ದರು. 2018ರಲ್ಲಿ ಜೆಡಿ​ಎಸ್‌ - ಕಾಂಗ್ರೆಸ್‌ ದೋಸ್ತಿ ಸರ್ಕಾ​ರ​ದಲ್ಲಿ ನೀರಾ​ವರಿ ಸಚಿ​ವ​ರಾ​ಗು​ವು​ದರ ಜೊತೆಗೆ ಉಸ್ತು​ವಾರಿ ಹೊಣೆ​ಯನ್ನು ಹೊತ್ತಿ​ದ್ದರು. 2019ರಿಂದ 2021ರಲ್ಲಿ ಯಡಿ​ಯೂ​ರಪ್ಪ ಹಾಗೂ 2021-23ರವ​ರೆಗೆ ಬಸ​ವ​ರಾ​ಜ​ಬೊ​ಮ್ಮಾಯಿ ನೇತೃ​ತ್ವದ ಬಿಜೆಪಿ ಸರ್ಕಾ​ರದ ಅವ​ಧಿ​ಯಲ್ಲಿ ಮಾಗಡಿ ಮೂಲ​ದ​ವ​ರಾದ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ ಜಿಲ್ಲಾ ಉಸ್ತು​ವಾರಿ ಸಚಿ​ವ​ರಾ​ಗಿ​ದ್ದ​ರು. ಈಗ ರಾಮ​ನೂ​ರಿನ ಉಸ್ತು​ವಾರಿ ಹೊಣೆ ಅನು​ಭವಿ ರಾಜ​ಕಾ​ರ​ಣಿ​ಯಾ​ಗಿ​ರುವ ರಾಮ​ಲಿಂಗಾ​ರೆಡ್ಡಿ ಹೆಗ​ಲಿಗೆ ಬಿದ್ದಿ​ದೆ.

ಹೊರ​ಗಿ​ನವರ ಸಾಧನೆ ಏನು ಇಲ್ಲ: ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸುವ ಸಂದರ್ಭದಲ್ಲಿ ಡಿ.ಕೆ.​ಶಿ​ವ​ಕು​ಮಾರ್‌, ಸಿ.ಪಿ.​ಯೋ​ಗೇ​ಶ್ವರ್‌ ಹಾಗೂ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ ಅವ​ರನ್ನು ಹೊರತು ಪಡಿಸಿ ಬೇರೆ​ಯ​ವರು ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಲೇ ಇಲ್ಲ. ಜಿಲ್ಲೆಯ ಪರಿ​ಸ್ಥಿತಿ ಅರ್ಥ ಮಾಡಿ​ಕೊಂಡು ಸಮ​ಸ್ಯೆ ಬಗೆ​ಹ​ರಿಸಿ, ಅಭಿ​ವೃದ್ಧಿ ಕಾರ್ಯ ಕೈಗೆ​ತ್ತಿ​ಕೊ​ಳ್ಳು​ವು​ದ​ರಲ್ಲಿ ಉಸ್ತು​ವಾ​ರಿ ಸಚಿ​ವರೇ ಬದ​ಲಾ​ವ​ಣೆ​ಯಾದ ಉದಾ​ಹ​ರ​ಣೆ​ಗಳಿದೆ. ಆಗೊಂದು ಈಗೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳ ತಲೆ ಎಣಿಸಿದ್ದೇ ಉಸ್ತುವಾರಿ ಸಚಿವರ ಸಾಧನೆಯಾಗಿ​ತ್ತು. ಯೋಗೇಶ್ವರ್‌ ತಮ್ಮ ಅವ​ಧಿ​ಯಲ್ಲಿ ಒಂದಿಷ್ಟುಯೋಜನೆಗಳನ್ನು ಚನ್ನಪಟ್ಟಣಕ್ಕೆ ಸೀಮಿತವಾಗಿ ಮಂಜೂರು ಮಾಡಿಸಿಕೊಂಡರು. ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯ​ಣ​ರವರು​ ಅಭಿ​ವೃದ್ಧಿ ವಿಚಾ​ರ​ದಲ್ಲಿ ಇಡೀ ಜಿಲ್ಲೆಗೆ ನ್ಯಾಯ ಕೊಡಿ​ಸಿ​ದ​ರು. ಹೊರಗಿನ ಉಸ್ತುವಾರಿಗಳು ಈ ಜಿಲ್ಲೆಯ ಉಸಾಬರಿ ಬಗ್ಗೆ ಉತ್ಸಾಹವನ್ನೇ ತೋರಲಿಲ್ಲ. ಎಲ್ಲ ಹಂತದಲ್ಲೂ ಅವರು ಹೊರೆ ಎನಿಸಿಕೊಂಡರಷ್ಟೇ.

ಈಡೇ​ರು​ವುದೇ ಜಿಲ್ಲೆಯ ಜನರ ನಿರೀ​ಕ್ಷೆ​ಗಳು?
* ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರ​ಕಿದೆ. ಈ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ.

* ರಾಮನಗರ ನೂತನ ಜಿಲ್ಲಾಸ್ಪತ್ರೆಗೆ ಅಗತ್ಯ ವೈದ್ಯ​ಕೀಯ ಸಿಬ್ಬಂದಿ ಒದ​ಗಿ​ಸು​ವುದು, ಹಳೇಯ ಜಿಲ್ಲಾ​ಸ್ಪ​ತ್ರೆ​ಯನ್ನು ತಾಯಿ ಮಗು​ವಿನ ಆಸ್ಪ​ತ್ರೆ​ಯ​ನ್ನಾಗಿ ಮಾರ್ಪ​ಡಿ​ಸು​ವುದು. ​ಸು​ಸ​ಜ್ಜಿ​ತ​ವಾದ ಒಳ ಮತ್ತು ಹೊರ ಕ್ರೀಡಾಂಗಣ ನಿರ್ಮಾ​ಣ.

* ರಾಮನಗರದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ಸುಸ​ಜ್ಜಿತ ಬಸ್‌ ನಿಲ್ದಾಣ ಸ್ಥಾಪನೆ. ಆರ್ಥಿ​ಕ​ತೆಯ ದೃಷಿ​ಯಿಂದ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯನ್ನು ಸುಸಜ್ಜಿತ ಮಾರುಕಟ್ಟೆ (ಕೆ.ಆರ್‌.ಮಾರ್ಕಟ್‌ ರೀತಿಯಲ್ಲಿ) ನಿರ್ಮಾಣ ಮಾಡಿ ಉಳಿ​ಸಿ​ಕೊ​ಳ್ಳು​ವು​ದು.

* ಕಾವೇರಿ ನದಿಗೆ ಮೇಕೆದಾಟು ಬಳಿ ಅಡ್ಡ​ಲಾಗಿ ಜಲಾಶಯ ನಿರ್ಮಾಣ, ಸತ್ತೇ​ಗಾಲ ನೀರಾ​ವರಿ ಯೋಜ​ನೆಗೆ ವೇಗ ನೀಡು​ವು​ದು. ಕನ​ಕ​ಪು​ರ​ದಲ್ಲಿ ಸರ್ಕಾರಿ ಮೆಡಿ​ಕಲ್‌ ಕಾಲೇಜು ಸ್ಥಾಪನೆ ಮಾಡು​ವುದು.

*ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕೆ ಪ್ರದೇಶ ಸಾಕಷ್ಟುಅಭಿವೃದ್ದಿ ಕಾಣುತ್ತಿದ್ದು ಸಾರಿಗೆ ಒತ್ತಡ ಕಡಿಮೆ ಮಾಡಲು ಕೆಂಗೇ​ರಿ​ಯಿಂದ ಮೆಟ್ರೋ ರೈಲು ವಿಸ್ತ​ರಣೆ.

ಬೆಂಗ​ಳೂ​ರಿ​ನಿಂದ ಕನ​ಕ​ಪುರ - ಚಾಮ​ರಾ​ಜ​ನ​ಗರ ಮಾರ್ಗ​ವಾಗಿ ತಮಿ​ಳು​ನಾ​ಡಿನ ಕೊಯ​ಮ​ತ್ತೂ​ರಿಗೆ ರೇಲ್ವೆ ಸಂಪರ್ಕ ಕಲ್ಪಿ​ಸು​ವು​ದು.

* ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಬೆಂಗ​ಳೂರು - ಮಾಗಡಿ ನಾಲ್ಕು ಪಥದ ರಸ್ತೆ ಕಾಮ​ಗಾರಿಗೆ ವೇಗ ನೀಡು​ವು​ದು.

*ವಂದಾ​ರ​ಗುಪ್ಪೆ ಬಳಿ ರೇಷ್ಮೆ​ಗೂಡಿನ ಹೈಟೆಕ್‌ ಮಾರು​ಕಟ್ಟೆ ಹಾಗೂ ಬೈರಾ​ಪ​ಟ್ಟ​ಣ​ದಲ್ಲಿ ಮಾವು ಸಂಸ್ಕ​ರಣಾ ಘಟಕವನ್ನು ತ್ವರಿ​ಗ​ತಿ​ಯಲ್ಲಿ ನಿರ್ಮಾಣ ಮಾಡು​ವು​ದು.

ವಸತಿ ಶಾಲೆ ಪ್ರವೇಶ, ಕೆಇಎನಿಂದ ಪಟ್ಟಿ ಬಿಡುಗಡೆ ವಿಳಂಬ: ಪೋಷಕರ ಪರದಾಟ

*ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮ, ಲಿಂಗೈಕ್ಯ ಶ್ರೀ ಶಿವ​ಕು​ಮಾ​ರ​ಸ್ವಾ​ಮಿ​ಗಳ ಹುಟ್ಟೂರು ವೀರಾ​ಪುರ ಹಾಗೂ ಭೈರ​ವೈಕ್ಯ ಶ್ರೀ ಬಾಲ​ಗಂಗಾ​ಧ​ರ​ನಾಥ ಸ್ವಾಮೀ​ಜಿ​ಗಳ ಹುಟ್ಟೂ​ರಾದ ಬಾನಂದೂರು ಗ್ರಾಮ​ಗಳ ಅಭಿ​ವೃ​ದ್ಧಿ ಪಡಿ​ಸು​ವು​ದು.

* ಪ್ರವಾಸೋಮದ್ಯಮಕ್ಕೆ ಸಾಕಷ್ಟುಅವಕಾಶವಿದ್ದು ಸಂಗಮ -ಮೇಕೆದಾಟು ಅಭಿವೃದ್ದಿ, ಚುಂಚಿ​ಫಾಲ್ಸ್‌ , ಮಾವ​ತ್ತೂರು ಕೆರೆ ಅಭಿ​ವೃದ್ಧಿ, ಕಣ್ವ ಜಲಾ​ಶ​ಯ​ದಲ್ಲಿ ಚಿಲ್ಡ್ರನ್‌ ಪಾರ್ಕ್ ಸ್ಥಾಪನೆ, ಮಂಚ​ನ​ಬೆ​ಲೆ ಜಲಾ​ಶಯ ಬಳಿ ಉದ್ಯಾ​ನ​ವನ ನಿರ್ಮಾ​ಣ, ಟ್ರಕ್ಕಿಂಗ್‌ ಗೆ ಹೆಸರಾದ ಬೆಳಿಕಲ್ ಬೆಟ್ಟ, ಅಚ್ಚಲು ಬೆಟ್ಟ, ಕಬ್ಬಾಳ್‌ ಬೆಟ್ಟಕ್ಕೆ ಸಂಪರ್ಕ ಕಲ್ಪಿ​ಸುವ ರಸ್ತೆ ಅಭಿವೃದ್ಧಿ ಸೇರಿ​ದಂತೆ ಮೂಲ ಸೌಲಭ್ಯ ಕಲ್ಪಿ​ಸು​ವು​ದು.

Latest Videos
Follow Us:
Download App:
  • android
  • ios