Asianet Suvarna News Asianet Suvarna News

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ರಾಜ್ಯದ ಘನತೆ, ಗೌರವ ಕಾಪಾಡಲಿ: ಸಂಸದ ಕಾಗೇರಿ

ಮುಡಾ ಹಗರಣ ಮೂಲಕ ಭ್ರಷ್ಟಾಚಾರದ ಆರೋಪ ಹೊತ್ತವರು, ರಾಜ್ಯದ ಆಡಳಿತ ಯಂತ್ರ ಕುಸಿದು ಬೀಳುವಂತೆ ಮಾಡಿದ್ದಾರೆ. ಇಡೀ ರಾಜ್ಯ ಸರ್ಕಾರ ಇದರಲ್ಲಿ ತೊಡಗಿಕೊಂಡಿದೆ. ಅಭಿವೃದ್ಧಿ ಕೆಲಸ ಮಾತ್ರ ಶೂನ್ಯ ಆಗಿದೆ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಲ್ಲ. ದಿನಾ ಕೋರ್ಟ್ ನಲ್ಲಿ ಏನಾಗುತ್ತೋ ಅಂತಾ ಚಿಂತೆ ಹೊತ್ತೋರಿಗೆ ಬಿಜೆಪಿ ನಾಯಕರ ಬಗ್ಗೆ ಮಾತಾಡೋಕೆ ಯಾವುದೇ ನೈತಿಕತೆ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ 
 

Uttara Kannada BJP MP Vishweshwar Hegde Kageri slams Karnataka CM Siddaramaiah grg
Author
First Published Sep 1, 2024, 6:16 PM IST | Last Updated Sep 1, 2024, 6:16 PM IST

ಉತ್ತರಕನ್ನಡ(ಸೆ.01):  ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯದ ಘನತೆ ಗೌರವ ಕಾಪಾಡಲಿ. ಮುಡಾ ಹಗರಣ ಮೂಲಕ ಭ್ರಷ್ಟಾಚಾರದ ಆರೋಪ ಹೊತ್ತವರು, ರಾಜ್ಯದ ಆಡಳಿತ ಯಂತ್ರ ಕುಸಿದು ಬೀಳುವಂತೆ ಮಾಡಿದ್ದಾರೆ. ಇಡೀ ರಾಜ್ಯ ಸರ್ಕಾರ ಇದರಲ್ಲಿ ತೊಡಗಿಕೊಂಡಿದೆ. ಅಭಿವೃದ್ಧಿ ಕೆಲಸ ಮಾತ್ರ ಶೂನ್ಯ ಆಗಿದೆ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಲ್ಲ. ದಿನಾ ಕೋರ್ಟ್ ನಲ್ಲಿ ಏನಾಗುತ್ತೋ ಅಂತಾ ಚಿಂತೆ ಹೊತ್ತೋರಿಗೆ ಬಿಜೆಪಿ ನಾಯಕರ ಬಗ್ಗೆ ಮಾತಾಡೋಕೆ ಯಾವುದೇ ನೈತಿಕತೆ ಇಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ. 

ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹೆಬ್ಬಾರ್ ಯಾರು?, ಏನು ಅನ್ನೋದ್ರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಹೆಬ್ಬಾರ್ ತಾನು ಯಾರು ಅನ್ನೋದನ್ನು ಈಗಾಗ್ಲೇ ಜನರ ಎದುರು ತೋರಿಸಿಕೊಟ್ಟಿದ್ದಾರೆ. ಜನರು ಮುಂದಿನ ದಿನಗಳಲ್ಲಿ ನಿರ್ಣಯ ಮಾಡ್ತಾರೆ. ಎಲ್ಲವೂ ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ಬರೆದುಕೊಂಡಿದ್ದು, ಜನರು ತೀರ್ಮಾನ ತೆಗೊಳ್ತಾರೆ. ಅದರ ಆಧಾರದಲ್ಲೇ ಜನರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ. 

ಉತ್ತರಕನ್ನಡ: ಹೊನ್ನಾವರದ ಅರಬ್ಬೀ ಸಮುದ್ರದ ಅಳಿವೆಯಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಮೀನುರಾರರ ರಕ್ಷಣೆ

ಶಿರೂರು ದುರಂತದ ಪರಿಹಾರ ವಿಚಾರದ ಬಗ್ಗೆ ಮಾತನಾಡಿದ ಕಾಗೇರಿ, ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿ ಈ ಪರಿಹಾರ ಬಂದಿದೆ. ಅತಿಯಾದ ಮಳೆ ಜಿಲ್ಲೆಯ ಜನತೆಯ ಮೇಲೆ ಆಗಿದೆ. ರಾಜ್ಯ ಸರ್ಕಾರ ಹಾಗೂ ಎನ್.ಡಿ.ಆರ್.ಎಫ್ ಪರಿಹಾರ ಬಂದಿದೆ. ಅನೇಕ ಸಂಘ ಸಂಸ್ಥೆಗಳು ಕೂಡಾ ಸಹಾಯ ಮಾಡಿವೆ. ಪ್ರಧಾನಿ ಪರಿಹಾರ ನಿಧಿಯಿಂದ ಪರಿಹಾರಕ್ಕಾಗಿ ಮನವಿ ಮಾಡಿದ್ದೆ ಅದಕ್ಕೆ ಸ್ಪಂದಿಸಿ ಗಾಯಾಳುಗಳಿಗೆ 50 ಸಾವಿರ ರೂ. ಮೃತರಾದವರಿಗೆ 2 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ಪ್ರಧಾನಿಯವರನ್ನು ಅಭಿನಂದಿಸುತ್ತೇನೆ. ಅಲ್ಲಿ ಪುನರ್ವಸತಿ ಕೆಲಸಗಳು ನಡೆಯುತ್ತಿದ್ದು, ನಾವೆಲ್ಲರೂ ಅವರ ಜೊತೆ ಇದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios