ದಿಕ್ಕು ತಪ್ಪಿದ ಬೋಟ್ ರಾತ್ರಿ ಬೆಳಿಗ್ಗೆ ಆಗುವುದರೊಳಗೆ ಮೇಲಕ್ಕೆ ಬಂದು ಬೇರೆಡೆ ಬಂದು ನಿಂತಿತ್ತು. ಇದರಿಂದ ಮತ್ತಷ್ಟು ಸಂಕಷ್ಟದ ಸ್ಥಿತಿ ಉಂಟಾಗಿ ಮೀನುಗಾರರು ಬೋಟ್‌ನಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಭರತ ಕಾಣಿಸುತ್ತಿದ್ದಂತೇ ಇತರ ಬೋಟ್‌ಗಳ ಸಹಾಯದಿಂದ ಅತಂತ್ರವಾಗಿದ್ದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ.   

ಉತ್ತರಕನ್ನಡ(ಆ.31):  ಅಳಿವೆಯಲ್ಲಿ ಸಿಲುಕಿದ್ದ ಮೀನುಗಾರರನ್ನ ಇತರ ಬೋಟ್‌ಗಳ ಸಹಾಯದಿಂದ ರಕ್ಷಿಸಿದ ಘಟನೆ ಜಿಲ್ಲೆಯ ಹೊನ್ನಾವರದಲ್ಲಿ ಇಂದು(ಶನಿವಾರ) ನಡೆದಿದೆ. ಹೊನ್ನಾವರ ಕಾಸರಕೋಡ ಟೊಂಕ ಬಳಿ ಅರಬ್ಬೀ ಸಮುದ್ರದ ಅಳಿವೆಯಲ್ಲಿ ಘಟನೆ ನಡೆದಿದೆ. 

ಕಾಸರಕೋಡ ಟೊಂಕಾದ ಅನ್ಸರ್ ಮಾಲೀಕತ್ವದ ಅರೇಬಿನ್ ಬೋಟ್ ಅಳಿವೆಯಲ್ಲಿ ಸಿಲುಕಿತ್ತು. ಇದರಲ್ಲಿದ್ದ 30ಕ್ಕೂ ಹೆಚ್ಚು ಮೀನುಗಾರರು ಬೋಟ್‌ನಲ್ಲಿಯೇ ಸಿಲುಕಿದ್ದರು. ಇತರ ಬೋಟ್‌ಗಳ ಸಹಾಯದಿಂದ ಬೋಟ್ ಮೇಲಕ್ಕೆ ಎಳೆಯುವ ಪ್ರಯತ್ನ ಕೂಡ ಸಫಲಗೊಂಡಿಲ್ಲ. ದಿಕ್ಕು ತಪ್ಪಿದ ಬೋಟ್ ರಾತ್ರಿ ಬೆಳಿಗ್ಗೆ ಆಗುವುದರೊಳಗೆ ಮೇಲಕ್ಕೆ ಬಂದು ಬೇರೆಡೆ ಬಂದು ನಿಂತಿತ್ತು. ಇದರಿಂದ ಮತ್ತಷ್ಟು ಸಂಕಷ್ಟದ ಸ್ಥಿತಿ ಉಂಟಾಗಿ ಮೀನುಗಾರರು ಬೋಟ್‌ನಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಭರತ ಕಾಣಿಸುತ್ತಿದ್ದಂತೇ ಇತರ ಬೋಟ್‌ಗಳ ಸಹಾಯದಿಂದ ಅತಂತ್ರವಾಗಿದ್ದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ.

ಕಾರವಾರ: ಅಂಕೋಲಾದ ಬಳಿ ಕಾಲುವೆಗೆ ಬಿದ್ದ ಟ್ಯಾಂಕರ್‌, ಚರಂಡಿಯಲ್ಲಿ ಹರಿದ ಆ್ಯಸಿಡ್..!

ಈ ಘಟನೆಯಿಂದ ಅಳಿವೆಯಲ್ಲಿ ಸಿಲುಕಿದ್ದ ಬೋಟ್‌ಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. 200ರಿಂದ 300ಮೀ. ಅಗಲವಿದ್ದ ಅಳಿವೆ ಇದೀಗ 15-20ಮೀ. ನಷ್ಟು ಕಿರಿದಾಗಿರುವ ಬಗ್ಗೆ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡಾ 5ರಿಂದ 6 ಬೋಟ್ ಅಳಿವೆಗೆ ಸಿಲುಕಿ ಹಾನಿ ಉಂಟಾಗಿತ್ತು. ಅಳಿವೆಯ ಹೂಳು ತೆಗೆಯಲು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.