Asianet Suvarna News Asianet Suvarna News

ಉತ್ತರ ಪ್ರದೇಶ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ, ಗೆಲುವು ಬಹುತೇಕ ಪಕ್ಕಾ!

ಲೋಕಸಭೆ ಚುನಾವಣೆ, ವಿಧಾನಸಭಾ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆ ನಡೆಯಲಿದೆ.  ಇದೀಗ ಉತ್ತರ ಪ್ರದೇಶ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಿಸಿದೆ. ಗೆಲುವು ಬಹುತೇಕ ಪಕ್ಕಾ ಆಗಿದೆ.

Uttar Pradesh Rajya Sabha By polls BJP announces former DCM Dr Dinesh Sharma as a candidate ckm
Author
First Published Sep 3, 2023, 5:03 PM IST

ಲಖನೌ(ಸೆ.03) ಒಂದೆಡೆ ಲೋಕಸಭೆ ಹಾಗೂ 5 ರಾಜ್ಯಗಳ ವಿಧಾನಸಭಾಚುನಾವೆ ಸಮೀಪಿಸುತ್ತಿದೆ. ಮತ್ತೊಂದೆಡೆ ಒಂದು ದೇಶ ಒಂದು ಚುನಾವಣೆ ಚರ್ಚೆ ನಡೆಯುತ್ತಿದೆ. ಇದರ ನಡುವೆ ಉತ್ತರ ಪ್ರದೇಶ ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಿಸಿದೆ. ಉತ್ತರ ಪ್ರದೇಶದ ರಾಜ್ಯ ಸಭೆಗೆ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಿಸಿದೆ. ರಾಜ್ಯ ಸಭಾ ಸಂಸದ ಹರಿದ್ವಾರ್ ದುಬೆ ನಿಧನದ ಬಳಿಕ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಸ್ಥಾನಕ್ಕೆ ಬಿಜೆಪಿ, ಯೋಗಿ ಮೊದಲ ಅವಧಿಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಾ. ದಿನೇಶ್ ಶರ್ಮಾ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಸೆಪ್ಟೆಂಬರ್ 15 ರಂದು ಉತ್ತರ ಪ್ರದೇಶದ ರಾಜ್ಯಸಭಾ ಉಪ ಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಗೆಲುವು ಬಹುತೇಕ ಪಕ್ಕಾ ಆಗಿದೆ. ಕಾರಣ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿರುವ ಕಾರಣ ಗೆಲುವು ಸುಲಭವಾಗಲಿದೆ. ಹರಿದ್ವಾರ್ ದುಬೆ ಅಕಾಲಿಕ  ಮರಣದಿಂದ ರಾಜ್ಯಸಭೆ ಸಂಸದ ಸ್ಥಾನ ತೆರವಾಗಿತ್ತು. ಈ ಸ್ಥಾನದ ಅವಧಿ 2026ರ ನವೆಂಬರ್ ವರೆಗೆ ಇರಲಿದೆ.

ಅವಧಿಗೂ ಮುನ್ನವೇ ನಡೆಯುತ್ತಾ ಲೋಕಸಭೆ ಎಲೆಕ್ಷನ್ ? 5 ದಿನಗಳ ಅಧಿವೇಶನ, ರಾಜಕೀಯ ಲೆಕ್ಕಾಚಾರ ಬದಲಿಸುತ್ತಾ?

2017ರಿಂದ 2022ರ ವರೆಗಿನ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ದಿನೇಶ್ ಶರ್ಮಾರನ್ನು ಇದೀಗ ರಾಜ್ಯಸಭೆಯಲ್ಲಿ ಆಯ್ಕೆ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ. ಚನಾವಣೆ ಸಮೀಪಿಸುತ್ತಿದ್ದಂತೆ  ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಿಸಿದೆ.  

ಇನ್ನು 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕಗಳು ಶೀಘ್ರದಲ್ಲೇ ಘೋಷಣೆಯಾಗಲಿದೆ. ಬಳಿಕ 2024ರ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಇದಕ್ಕೂ ಮೊದಲು ಒಂದು ದೇಶ ಒಂದುಚುನಾವಣೆ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಚರ್ಚೆಗಳು ನಡೆಯುತ್ತಿದೆ. ಸೆ.18ರಿಂದ 22ರವರೆಗೆ ಐದು ದಿನಗಳ ವಿಶೇಷ ಸಂಸತ್‌ ಅಧಿವೇಶನವನ್ನು ಕೇಂದ್ರ ಸರ್ಕಾರ ಕರೆದ ಬೆನ್ನಲ್ಲೇ ‘ಒಂದು ದೇಶ ಒಂದು ಚುನಾವಣೆ’ ಅಧ್ಯಯನಕ್ಕೆ ಸಮಿತಿ ರಚನೆಯಾಗಿರುವುದು ಕುತೂಹಲ ಮೂಡಿಸಿದೆ. ಬೇರೆ ಬೇರೆ ಅವಧಿಯಲ್ಲಿ ದೇಶದಲ್ಲಿ ನಿರಂತರವಾಗಿ ಚುನಾವಣೆಗಳನ್ನು ನಡೆಸುವುದರಿಂದ ದೇಶದ ಬೊಕ್ಕಸಕ್ಕೆ ಆಗುವ ಖರ್ಚನ್ನು ತಗ್ಗಿಸಲು ಹಾಗೂ ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುವುದನ್ನು ತಪ್ಪಿಸಲು ಒಂದೇ ಸಲ ವಿಧಾನಸಭೆ ಹಾಗೂ ಲೋಕಸಭೆಗೆ ಚುನಾವಣೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಹೊಂದಿದೆ.

ಅಸೆಂಬ್ಲಿ, ಸಂಸತ್‌ ಜತೆ ಪಂಚಾಯ್ತಿ, ನಗರಕ್ಕೂ ಏಕಕಾಲಕ್ಕೆ ಎಲೆಕ್ಷನ್? ಅಧ್ಯಯನ ಸಮಿತಿಗೆ ಅಮಿತ್ ಶಾ ಸೇರಿ 8 ಮಂದಿ

ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ, ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದಲ್ಲಿ ಈ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಿದೆ. ಕೋವಿಂದ್‌ ಸಮಿತಿಯ ಅಧ್ಯಯನದ ಬಳಿಕ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಗೆ ಒಮ್ಮತ ಮೂಡಿದರೆ ಕೇಂದ್ರ ಸರ್ಕಾರ ಈ ವರ್ಷಾಂತ್ಯಕ್ಕೆ ನಡೆಯಲಿರುವ ಮಿಜೋರಂ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ರಾಜಸ್ಥಾನದ ಚುನಾವಣೆಯ ಜೊತೆಗೇ ಲೋಕಸಭೆ ಚುನಾವಣೆಯನ್ನೂ ನಡೆಸುವ ಸಾಧ್ಯತೆಯಿದೆ. 
 

Follow Us:
Download App:
  • android
  • ios