Asianet Suvarna News Asianet Suvarna News

UP Elections : ಮಂದಿರ, ಮಸೀದಿ ಬೇಕಾಗಿಲ್ಲ, ಅಭಿವೃದ್ಧಿ ಬೇಕು ಇದು ಮಥುರಾ ಮಹಿಳೆಯರ ಮಾತು!

ಮಥುರಾದಲ್ಲಿ ಏಷ್ಯಾನೆಟ್ ನ್ಯೂಸ್ ಟೀಮ್
ಮಂದಿರ, ವಿಚಾರ ನಮಗೆ ಬೇಕಾಗಿಲ್ಲ
ಅಭಿವೃದ್ಧಿ ತೋರುವಂಥ ನಾಯಕ ಬೇಕು ಎಂದ ಮಥುರಾ ಮಹಿಳೆಯರು

Uttar Pradesh Elections we want one to work on ground instead of one talking about temple mosque says womens of Mathura san
Author
Bengaluru, First Published Feb 2, 2022, 11:00 PM IST | Last Updated Feb 2, 2022, 11:00 PM IST

ಮಥುರಾ (ಫೆ. 1): ಉತ್ತರ ಪ್ರದೇಶದಲ್ಲಿ ವಿಧಾನಸಭಾ (Uttar Pradesh Election) ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಏಷ್ಯಾನೆಟ್ ನ್ಯೂಸ್ ತಂಡವು ಮಥುರಾ (Mathura) ತಲುಪಿದ್ದು, ಅಲ್ಲಿನ ಮಹಿಳೆಯರು (Womens) ತಮ್ಮ ಪ್ರದೇಶದಲ್ಲಿನ ಸಮಸ್ಯೆಗಳ (Issues) ಬಗ್ಗೆ ಏನು ಯೋಚಿಸುತ್ತಿದ್ದಾರೆ ಎನ್ನುವುದನ್ನು ತಿಳಿಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ರಾಜ್ಯವನ್ನು ಆಳುವ ಮುಖ್ಯಮಂತ್ರಿ ಯಾವ ರೀತಿ ಇರಬೇಕು ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀಕೃಷ್ಣನ ಜನ್ಮಸ್ಥಳವಾಗಿರುವ ಮಥುರಾದ ಮಹಿಳೆಯರಿಗೆ ತಮ್ಮ ಮುಖ್ಯಮಂತ್ರಿ (Chief Minister) ಜನಪರವಾಗಿ ಕೆಲಸ ಮಾಡಬೇಕು ಎನ್ನುವ ಆಸೆಯಲ್ಲಿದ್ದಾರೆ. ಅವರು ಮಾಡಿರುವ ಕೆಲಸಗಳು ಜನರಿಗೆ ಗೋಚರವಾಗುವಂತಿರಬೇಕು, ಜನರಿಗೆ ಸಹಾಯವಾಗುವಂತಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂದಿರ (temple ), ಮಸೀದಿ (mosque ) ವಿಚಾರಗಳು ಚುನಾವಣೆಯ ಸಮಯದಲ್ಲಿ ಬಹಳ ಹಳೆಯತಾದವು. ಈಗ ಅವುಗಳನ್ನೆಲ್ಲಾ ಹಿಂದೆ ಬಿಟ್ಟು ಅಭಿವೃದ್ಧಿಯ ಕಡೆಗೆ ಮುಖಮಾಡುವಂಥ ಸಮಯ ಎಂದು ಹೇಳಿದ್ದಾರೆ. ತಮ್ಮ ಮುಖ್ಯಮಂತ್ರಿ ಉದ್ಯೋಗದ ಬಗ್ಗೆ, ಉತ್ತಮ ಆರೋಗ್ಯ ಹಾಗೂ ಸರ್ವರಿಗೂ ಶಿಕ್ಷಣ ನೀಡುವಂಥ ವಿಚಾರಗಳ ಬಗ್ಗೆ ಹೆಚ್ಚಾಗಿ ಮಾತನಾಡಬೇಕು. ಆ ನಿಟ್ಟಿನಲ್ಲಿ ತಮ್ಮ ಮತಗಳು ನಿರ್ಧಾರವಾಗುತ್ತದೆ ಎಂದಿದ್ದಾರೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಸಾಕಷ್ಟು ಮಂದಿ ಪದವೀಧರರಿದ್ದಾರೆ. ಆದರೆ, ಅವರಿಗೆ ಸೂಕ್ತ ಉದ್ಯೋಗಾವಕಾಶವಿಲ್ಲ (employment). ಉದ್ಯೋಗವನ್ನು ಅರಸಿಕೊಂಡು ಉತ್ತರ ಪ್ರದೇಶದ ಹೆಚ್ಚಿನ ವಿದ್ಯಾವಂತರು ರಾಷ್ಟ್ರ ರಾಜಧಾನಿ ವಲಯದ ಕಡೆ ಹೋಗುತ್ತಿದ್ದಾರೆ. ಇನ್ನೂ ಊರಲ್ಲೇ ಉಳಿಯಬೇಕು ಎಂದು ಮನಸ್ಸುಳ್ಳವರು ಕೇವಲ 8 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂಥ ನಾಯಕರು ಬೇಕಾಗಿದೆ ಎನ್ನುವುದು ಇಲ್ಲಿನವರ ಅಭಿಪ್ರಾಯ.

ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಮಥುರಾದಲ್ಲಿ ಇಂದಿಗೂ ಒಂದು ಸುಸಜ್ಜಿತ ಆಸ್ಪತ್ರೆಯಿಲ್ಲ (Hospital). ಗಂಭೀರ ಸಮಸ್ಯೆಗಳು ಉಂಟಾದಲ್ಲಿ ರೋಗಿಯನ್ನು ಕರೆದುಕೊಂಡು ದೂರದ ದೆಹಲಿ (Delhi) ಅಥವಾ ಆಗ್ರಾಗೆ (Agra) ತೆರಳಬೇಕು. ಯಾಕೆ ಸರ್ಕಾರಗಳು ಮಥುರಾದಲ್ಲಿ ಒಂದು ಉತ್ತಮ ಆಸ್ಪತ್ರೆಯನ್ನು ನಿರ್ಮಿಸಿಲ್ಲ ಎನ್ನುವುದು ಇಲ್ಲಿನ ಮಹಿಳೆಯರ ಪ್ರಶ್ನೆ. ಉತ್ತಮ ಆಸ್ಪತ್ರೆಗಳು ಇದ್ದಲ್ಲಿ, ನಮ್ಮ ಜನರು ಮಥುರಾದಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ದೂರದ ದೆಹಲಿ ಹಾಗೂ ಆಗ್ರಾಕ್ಕೆ ಹೋಗುವ ಪ್ರಮೇಯವೇ ಇರುವುದಿಲ್ಲ ಎಂದು ಹೇಳುತ್ತಾರೆ. ಅದಲ್ಲದೆ, ಮಥುರಾದಲ್ಲಿ ಒಂದು ಉತ್ತಮ ಸರ್ಕಾರಿ ವಿಶ್ವ ವಿದ್ಯಾನಿಲಯವಿಲ್ಲ. ಇಲ್ಲಿನ ಜನರಿಗೆ ಉತ್ತಮ ವಿದ್ಯಾಭ್ಯಾಸಕ್ಕಾಗಿ ಸುಸಜ್ಜಿತವಾಗಿ ಸರ್ಕಾರಿ ವಿಶ್ವವಿದ್ಯಾನಿಲಯದ ಅಗತ್ಯವಿದೆ ಎನ್ನುವುದು ಇಲ್ಲಿನ ಮಹಿಳೆಯರ ಮಾತು. ಖಾಸಗಿ ವಿಶ್ವ ವಿದ್ಯಾನಿಲಯಗಳಲ್ಲಿ ಶಿಕ್ಷಣ ವೆಚ್ಚ ಬಹಳ ದುಬಾರಿ. ಅವರು ಬಡ ಜನರು ಕೂಡ  ನಮ್ಮ ವಿದ್ಯಾಸಂಸ್ಥೆಗಳಲ್ಲಿ ಓದಬಹುದು ಎನ್ನುವ ನಿಟ್ಟಿನಲ್ಲಿ ಶುಲ್ಕಗಳನ್ನು ಕಡಿಮೆ  ಮಾಡಿದರೂ, ಇಲ್ಲಿನ ಜನರಿಗೆ ಅದೇ ಹೆಚ್ಚು ಎನಿಸುತ್ತದೆ. ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಉತ್ತಮ ಆಲೆಯ ಅಗತ್ಯವಿದೆ. ಆದರೆ, ಸದಸ್ಯ ಉತ್ತರಪ್ರದೇಶದಲ್ಲಿ ಉತ್ತಮ ಶಾಲೆಗಳ ಸಂಖ್ಯೆಯೇ ವಿರಳವಾಗಿದೆ. ಈಗಿರುವ ಶಾಲೆಗಳು ತಮ್ಮದೇ ನಿಯಮಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದೆ ಎನ್ನುವುದು ಇಲ್ಲಿನವರ ಅನಿಸಿಕೆ.

Rahul Gandhi In Parliament : ರಾಹುಲ್ ಗಾಂಧಿ ಮಾತಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ಜೈಶಂಕರ್!
ಅದರೊಂದಿಗೆ ಬೀದಿಗಳಲ್ಲಿ ಪ್ರಾಣಿಗಳ ಕಾಟವೂ ಜಾಸ್ತಿಯಾಗಿದೆ. ದನಗಳ ಹಾಲು ಕರೆಯುವ ವ್ಯಕ್ತಿ ಅದನ್ನು ರಸ್ತೆಯಲ್ಲಿ ಬಿಟ್ಟುಬಿಡುತ್ತಾನೆ. ಇದು ಮಥುರಾದಲ್ಲಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗಿದೆ. ಈ ಕುರಿತಾಗಿ ಸ್ಥಲೀಯ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು. 

UP Elections: ಎಸ್‌ಪಿ ಪ್ಲಾನ್‌ ಫುಲ್ ಚೇಂಜ್, ಫಾಜಿಲ್‌ನಗರ ಅಭ್ಯರ್ಥಿಯೇ ಬದಲು!
ಹಾಗೇನಾದರೂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆಯಾದಲ್ಲಿ ನಿಮ್ಮ ಮೊದಲ ಬೇಡಿಕೆ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಿರಣ್ ಎನ್ನುವ ಮಹಿಳೆ, "ಮಥುರಾಗೆ ಅಭಿವೃದ್ಧಿಯ ಅಗತ್ಯವಿದೆ. ಸರ್ಕಾರಿ ಕ್ಷೇತ್ರಗಳಲ್ಲಿ ಇರುವ ಭ್ರಷ್ಟಾಚಾರವನ್ನು ಕೊನೆ ಮಾಡಬೇಕು. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸರ್ಕಾರಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಇಲ್ಲಿನ ಪ್ರತಿ ಕೆಲಸಕ್ಕೂ ಮೊದಲು ಹಣ ಕೇಳಲಾಗುತ್ತದೆ. ಇಂಥ ಭ್ರಷ್ಟಾಚಾರಗಳಿಗೆ ಮೊದಲು ಕೊನೆ ಬೀಳಬೇಕು' ಎನ್ನುತ್ತಾರೆ.

Latest Videos
Follow Us:
Download App:
  • android
  • ios