Karnataka Politcs: ನನ್ನ ಹುದ್ದೆಗೂ, ಇಬ್ರಾಹಿಂ ವಿಚಾರಕ್ಕೂ ಸಂಬಂಧ ಇಲ್ಲ: ಖಾದರ್‌

*  ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ತಾರತಮ್ಯ ಆಗಿಲ್ಲ, ಬಿಜೆಪಿ ದೂರ ಇಡೋದೆ ಗುರಿ
*  ಇಬ್ರಾಹಿಂ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದಾರೆ, ಮುಂದೆಯೂ ಇರುತ್ತಾರೆ
*  ಕ್ಷೇತ್ರದ ಜನರಿಗೆ ಸಿಕ್ಕಿದ ಗೌರವ 

UT Khader React on CM Ibrahim Leave Congress grg

ಮಂಗಳೂರು(ಫೆ.01):  ನನ್ನನ್ನು ವಿಧಾನಸಭೆಯ ವಿಪಕ್ಷ ಉಪನಾಯಕನನ್ನಾಗಿ(Opposition Deputy Leader) ಮಾಡಿರುವುದಕ್ಕೂ, ಕಾಂಗ್ರೆಸ್‌ ಎಂಎಲ್ಸಿ ಸಿ.ಎಂ. ಇಬ್ರಾಹಿಂ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ. ಉಪನಾಯಕನ ಸ್ಥಾನ ಖಾಲಿ ಇತ್ತು. ಪಕ್ಷದ ಎಲ್ಲ ಹಿರಿಯ ನಾಯಕರು ವಿಚಾರ ಮಾಡಿ ನನಗೆ ಅವಕಾಶ ನೀಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ನೂತನ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್‌(UT Khader) ಹೇಳಿದ್ದಾರೆ.

ಹೊಸ ಸ್ಥಾನಮಾನ ದೊರೆತ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿ.ಎಂ. ಇಬ್ರಾಹಿಂ(CM Ibrahim) ಅವರು ಕಾಂಗ್ರೆಸ್‌(Congress) ಪಕ್ಷದಲ್ಲೇ ಇದ್ದಾರೆ, ಮುಂದೆಯೂ ಇರುತ್ತಾರೆ. ಎಲ್ಲರನ್ನೂ ಜತೆಯಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ, ಅದನ್ನು ನಿರ್ವಹಿಸುತ್ತೇನೆ. ಇಬ್ರಾಹಿಂ ಬಳಿ ನಾನು ಮಾತನಾಡಿದಾಗ ಕಾಂಗ್ರೆಸ್‌ ಬಿಡುವ ಬಗ್ಗೆ ಏನನ್ನೂ ಹೇಳಿಲ್ಲ ಎಂದರು.

Karnataka Legislative Assembly: ಯು.ಟಿ ಖಾದರ್ ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆ!

ಅಲ್ಪಸಂಖ್ಯಾತರಿಗೆ(Minorities) ತಾರತಮ್ಯ ಆಗಿಲ್ಲ: ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ನೀಡಿದಷ್ಟುಅವಕಾಶವನ್ನು ಬೇರೆ ಯಾರೂ ನೀಡಿಲ್ಲ. ಎಸ್‌.ಎಂ. ಕೃಷ್ಣ(SM Krishna) ಮುಖ್ಯಮಂತ್ರಿಯಾಗಿದ್ದಾಗ 7 ಮಂದಿ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಸಿದ್ದರಾಮಯ್ಯ(Siddaramaiah) ಅವಧಿಯಲ್ಲೂ ಅಲ್ಪಸಂಖ್ಯಾತರಿಗೆ ಅವಕಾಶ ಸಿಕ್ಕಿದೆ ಎಂದು ಖಾದರ್‌ ಹೇಳಿದರು.

ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾ(DK Shivakumar) ಸಂಪೂರ್ಣ ಒಪ್ಪಿಗೆ ಸೂಚಿಸಿ ವಿಶ್ವಾಸದಿಂದ ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆ. ಎಂದೂ ಜನಪರವಾಗಿಲ್ಲದ, ದ್ವೇಷದ ರಾಜಕೀಯ ಮಾಡುವ ಬಿಜೆಪಿಯನ್ನು(BJP) ದೂರ ಇಡುವುದೇ ನಮ್ಮ ಮುಖ್ಯ ಗುರಿ ಎಂದರು.

ಕ್ಷೇತ್ರದ ಜನರಿಗೆ ಸಿಕ್ಕಿದ ಗೌರವ: 

ಎನ್‌ಎಸ್‌ಯುಐ ಕಾರ್ಯದರ್ಶಿ, ಅಧ್ಯಕ್ಷನಾಗಿ, ಯುವ ಕಾಂಗ್ರೆಸ್‌ನ ಬ್ಲಾಕ್‌ ಅಧ್ಯಕ್ಷನಾಗಿ, ಸೇವಾದಳದ ವಿವಿಧ ಹುದ್ದೆಯಲ್ಲಿದ್ದು, ಕೆಪಿಸಿಸಿ ಕಾರ್ಯದರ್ಶಿಯಾಗಿ, ನಾಲ್ಕು ಬಾರಿ ಶಾಸಕನಾಗಿ, ನಾಲ್ಕು ವಿವಿಧ ಖಾತೆಗಳ ಸಚಿವನಾಗಿ, 3 ಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದೆಲ್ಲ ಅನುಭವಗಳನ್ನು ಪರಿಗಣಿಸಿ ಪ್ರಮುಖ ಅವಕಾಶ ನೀಡಿದ್ದಾರೆ. ಜಿಲ್ಲೆಯ ಎಲ್ಲ ನಾಯಕರು ಸಹಕಾರ ನೀಡಿದ್ದಾರೆ. ಪಕ್ಷದ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಜಿಲ್ಲೆಯ ಗೌರವವನ್ನು ಇನ್ನಷ್ಟುಎತ್ತರಕ್ಕೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಖಾದರ್‌ ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್‌, ಮುಖಂಡರಾದ ಮುಹಮ್ಮದ್‌ ಮೋನು, ಸಂತೋಷ್‌ ಕುಮಾರ್‌ ಶೆಟ್ಟಿ, ಲುಕ್ಮಾನ್‌ ಬಂಟ್ವಾಳ, ಶುಭೋದಯ ಆಳ್ವ, ಟಿ.ಕೆ.ಸುಧೀರ್‌, ನಝೀರ್‌ ಬಜಾಲ್‌ ಮತ್ತಿತರರಿದ್ದರು.

ಪ್ರಸ್ತುತ ಬಿಜೆಪಿ ಸರ್ಕಾರದ(BJP Government) ವೈಫಲ್ಯದ ವಿರುದ್ಧ ವಿಧಾನಸಭೆ ಒಳಗೂ, ಹೊರಗೂ ಸಮರ್ಥವಾಗಿ ಹೋರಾಟ ನಡೆಸುವ ಜವಾಬ್ದಾರಿಯುತ ಸ್ಥಾನ ದೊರೆತಿದೆ. ಬಿಜೆಪಿಯ ಆಡಳಿತ ವೈಫಲ್ಯ, ಜನರು ಅನುಭವಿಸಿದ ಸಂಕಷ್ಟಗಳು, ಅಭಿವೃದ್ಧಿ ಕುಂಠಿತವಾಗಿರುವುದು ಇವೆಲ್ಲದರ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತುವ ಕೆಲಸ ಮಾಡಲಾಗುವುದು ಅಂತ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್‌ ತಿಳಿಸಿದ್ದಾರೆ.  

Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ

ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ, ಸಮರ್ಥಿಸಿಕೊಂಡ ಸಚಿವರಿಗೆ ಖಾದರ್ ನೀತಿ ಪಾಠ

ಮಂಗಳೂರು: ನಗರದ ಹೊರವಲಯದ ಉಳ್ಳಾಲಬೈಲ್​ನಲ್ಲಿ ‘ಹಿಂದುಗಳಿಗೆ (Hindu) ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ’ ಎಂಬ ಆಕ್ಷೇಪಾರ್ಹ ಬ್ಯಾನರ್​ಗಳನ್ನು ಅಳವಡಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ (Sunil Kumar) ಸಮರ್ಥಿಸಿಕೊಂಡಿದ್ದರು.

ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆ ಸಮರ್ಥಿಸಿಕೊಂಡ‌‌ ಸಚಿವ ಸುನಿಲ್ ಕುಮಾರ್, ಬ್ಯಾನರ್ ವಿಚಾರದಲ್ಲಿ ಕಾರ್ಯಕರ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ ಎಂದಿದ್ದರು. ಇದಕ್ಕೆ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ (UT Khader)ಆಕ್ರೋಶ ವ್ಯಕ್ತಪಡಸಿದ್ದರು. 
 

Latest Videos
Follow Us:
Download App:
  • android
  • ios