'ಆಟೋಶಂಕರ' ಉಪೇಂದ್ರ ಪ್ರಜಾಕೀಯ ಪಕ್ಷಕ್ಕೆ 'ಆಟೋ' ಗುರುತು, ಶುರುವಾಯ್ತು ರಾಜಕೀಯ!

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ  ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿರುವ ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಚುನಾವಣಾ ಆಯೋಗ 'ಆಟೋ' ಅವನ್ನು ಚುನಾವಣಾ ಗುರುತನ್ನಾಗಿ ನೀಡಿದೆ.

Upendra Uttama Prajakeeya Party gets Auto symbol for karnataka assembly election san

ಬೆಂಗಳೂರು (ಫೆ.24): ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಡುವೆ ತನ್ನ ಸ್ಥಾನಕ್ಕಾಗಿ ಸಣ್ಣ ಮಟ್ಟದ ಹೋರಾಟ ನಡೆಸುತ್ತಿರುವ ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರ ನಡುವೆ ಕೇಂದ್ರ ಚುನಾವಣಾ ಆಯೋಗ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆಯನ್ನು ಗುರಿತಾಗಿ ನೀಡಿದೆ. ನಟ ಉಪೇಂದ್ರ ಚುನಾವಣಾ ಅಯೋಗ ನೀಡಿದ ಆದೇಶ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ ಆಟೋ ರಿಕ್ಷಾ “ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು' ಎಂದು ಉಪೇಂದ್ರ ಟ್ವೀಟ್‌ ಮಾಡಿದ್ದಾರೆ. ಇನ್ನು ಉಪೇಂದ್ರ ಅವರ ಪಕ್ಷಕ್ಕೆ ಆಟೋ ಗುರುತು ಸಿಕ್ಕಿದ್ದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆರಂಭವಾಗಿದೆ.  'ಸಿನಿಮಾಗಳಿಗೆ ಆಟೋ ಫ್ಯಾನ್ಸ್ ಬರ್ತಾರೆ ಅಂತ ಎಲೆಕ್ಷನ್ ಪಾರ್ಟಿಗೂ ಸಿಂಬಲ್ ಆಟೋ ಇಟ್ಟಿದೀಯಲ್ಲ ಗುರುವೇ, ಅವ್ರ್ ಹೆಮ್ಮೆಯಿಂದ ವೋಟ್ ಮಾಡ್ತಾರೆ ಅಂತ ಕಮರ್ಷಿಯಲ್ ಯೋಚನೆ' ಎಂದು ಒಬ್ಬರು ಉಪೇಂದ್ರ ಅವರ ಪೋಸ್ಟ್‌ಗೆ ಟ್ವೀಟ್‌ ಮಾಡಿದ್ದಾರೆ.


ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ ಈಗಾಗಲೇ ಚುನಾವಣೆ ನಿಮಿತ್ತ ಸಣ್ಣ ರಾಜ್ಯಪ್ರವಾಸವನ್ನೂ ಮಾಡಿದ್ದಾರೆ. ಅದಲ್ಲದೆ, ಈ ಪಕ್ಷಕ್ಕೆ ಗ್ರಾಮ ಪಂಚಾಯತ್‌ನಲ್ಲಿ ಬೆಂಬಲಿತ ಸದಸ್ಯ ಕೂಡ ಇದ್ದಾರೆ. ಯುಪಿಪಿ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳಿಗೆ ಆಟೋ ರಿಕ್ಷಾ ಸಾಮಾನ್ಯ ಚಿಹ್ನೆಯಾಗಿ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ರಾಜಕೀಯ: ಇನ್ನು ಉಪೇಂದ್ರ ಅವರ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ಸಿಕ್ಕಿರುವ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ರಾಜಕೀಯ ಶುರುವಾಗಿದೆ. 'ಬೆಂಗಳೂರು ಆಟೋ ಡ್ರೈವರ್ ಗಳು ಕರೆದ್ರೆ ಬರೋಲ್ಲ. ಇನ್ನ್ಯಾರು ಆಟೋಗೆ ವೋಟ್ ಹಾಕ್ತಾರೆ??' ಎಂದು ಒಬ್ಬ ವ್ಯಕ್ತಿ ಟ್ವೀಟ್‌ ಮಾಡಿದ್ದರೆ, ಇನ್ನೊಬ್ಬರು ಅಟೋ ರಿಕ್ಷಾಕ್ಕಿಂತ ಎತ್ತಿನ ಬಂಡಿ ಗುರುತು ಚೆನ್ನಾಗಿರ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ಮೊದಲು ಎಲ್ಲಾ ಅಭ್ಯರ್ಥಿಗಳು ನೇರವಾಗಿ ಭೇಟಿ ಮಾಡಿ. ಚುನಾವಣೆ ಟೈಮ್‌ನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಮೀಟ್‌ ಆದ್ರೆ ವೋಟ್‌ ಬೀಳೋದಿಲ್ಲ ಎಂದು ಬರೆದಿದ್ದಾರೆ.

Upendra: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್!

'ರಾಜ ಆಗ್ಬೇಕು ಅಂಕೊಂಡಿರುವ ಇಂದಿನ ಸಾಮಾನ್ಯ ಪ್ರಜೆಯ ಆಯ್ಕೆ "ಆಟೋ"..!!' ಎಂದು ಲಕ್ಷ್ಮೀಪ್ರಸನ್ನ ಎನ್ನುವ ವ್ಯಕ್ತಿ ಉಪೇಂದ್ರ ಅವರ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 'ಮಾನ್ಯವಾಗಿರದೇ ಇರೋ ನಮ್ಮ ಯುಪಿಪಿ ಪಾರ್ಟಿ ಆದಷ್ಟು ಬೇಗೆ ಚುನಾವಣಾ ಆಯೋಗ ಗುರುತಿಸಿದ ಅಧಿಕೃತ ಪಾರ್ಟಿ ಆಗಲಿ ಅಂತ ದೇವರಲ್ಲಿ ಅಶಿಸೋಣ' ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಪ್ರಣಾಳಿಕೆ ಜಾರಿ ಮಾಡದ ಸರ್ಕಾರ ರದ್ದು ಮಾಡಬೇಕು : ಉಪೇಂದ್ರ

ಚುನಾವಣೆಗೆ ಈಗಾಗಲೇ ಉತ್ತಮ ಪ್ರಜಾಕೀಯ ಪಕ್ಷ ಭಿನ್ನವಾಗಿ ಪ್ರಚಾರ ಕಾರ್ಯವನ್ನು ಆರಂಭಿಸಿರುವುದು ಗೊತ್ತೇ ಇದೆ. ಕಾಂತಾರ ಚಿತ್ರದಲ್ಲಿ ದೈವ ಹೇಳುವ ಮಾತಿನ ದೃಶ್ಯಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. 'ಬಹಳ ಒಳ್ಳೆಯ ಪ್ರಾರ್ಥನೆ ರಾಜಕೀಯ ನಾಯಕರೇ, ಈ ಊರಿನ ಜನರ ಮತವನ್ನು ನಿಮಗೆ ಹಾಕಿಸಿ ಕೊಡ್ತೀನಿ. ಆದರೆ, ಇದುವರೆಗೆ ಇವರು ಕಟ್ಟಿದಂಥ ತೆರಿಗೆ ಹಣವನ್ನು ಹಿಂತಿರುಗಿಸಿ ಕೊಡಬಹುದಾ ರಾಜಕೀಯ ನಾಯಕರೇ?'' ಎಂದು ಹೇಳಿರುವ ಪಂಜುರ್ಲಿ ವಿಡಿಯೋವನ್ನು ಪಕ್ಷದ ಅಭಿಮಾನಿಗಳು ಸೋಶಿಯಲ್‌ ಮಿಡಿಯಾದಲ್ಲಿ ಪ್ರಕಟಿಸಿದ್ದಾರೆ.
ರಾಜಕೀಯ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಮುನ್ನಡೆಯುತ್ತಿರುವ ನಟ ಉಪೇಂದ್ರ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷದ ಛಾಪು ಮೂಡಿಸುವ ಇರಾದೆಯಲ್ಲಿದದ್ದಾರೆ. ಆ ನಿಟ್ಟಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲೂ ಭಿನ್ನ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios