ಕಾಂಗ್ರೆಸ್‌ ಅಂದರೆ ಜಾತಿ ಮಧ್ಯೆ ಒಡೆದಾಳುವ ಪಕ್ಷ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಾಂಗ್ರೆಸ್‌ ಅಂದರೆ ಜಾತಿ ಹಾಗೂ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ಪಕ್ಷ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Union Minister Shobha Karandlaje Slams On Congress At Chamarajanagar gvd

ಗುಂಡ್ಲುಪೇಟೆ (ಮಾ.03): ಕಾಂಗ್ರೆಸ್‌ ಅಂದರೆ ಜಾತಿ ಹಾಗೂ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ಪಕ್ಷ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಗುಂಡ್ಲುಪೇಟೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಅವರು ಮಾತನಾಡಿ, ಜಾತಿ ಮತ್ತು ಧರ್ಮಒಡೆಯುವ ಪಕ್ಷ ಎಂದರೆ ಅದು ಕಾಂಗ್ರೆಸ್‌, ಸಿದ್ದರಾಮಯ್ಯ ಕೇವಲ ಒಂದು ಸಮುದಾಯಕ್ಕೆ ಮಾತ್ರ ಶಾದಿ ಭಾಗ್ಯ ನೀಡಿದರು. ಪ್ರಧಾನಿ ಮೋದಿ 10 ಕೆಜಿ ಅಕ್ಕಿ ನೀಡಿದರೆ ಅದಕ್ಕೆ ಸಿದ್ದರಾಮಯ್ಯ ಅವರು ಅನ್ನ ಭಾಗ್ಯ ಎನ್ನುವ ಸ್ಟಿಕ್ಕರ್‌ ಹಾಕಿಕೊಂಡು ಅನ್ನಭಾಗ್ಯ ಕಾಂಗ್ರೆಸ್‌ ಯೋಜನೆ ಎಂದು ಹೇಳಿಕೊಂಡರು ಎಂದು ಆಕ್ರೋಶ ಹೊರಹಾಕಿದರು.

ಹಿಂದಿನ ಪ್ರಧಾನಿಯ ಸಮಯದಲ್ಲಿ ಭಾರತೀಯರನ್ನು ವಿದೇಶಗಳಲ್ಲಿ ಬಿಕ್ಷುಕರಂತೆ ಕಾಣುತ್ತಿದ್ದರು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಮ್ಮ ದೇಶ ಅಗ್ರಮಾನ್ಯವಾಗಿದೆ, ನಮ್ಮ ದೇಶದ ಪ್ರಧಾನಿ ಬೇರೆ ದೇಶಗಳಿಗೆ ತೆರಳಿದರೆ ರೆಡ್‌ ಕಾರ್ಪೇಟ್‌ ಸ್ವಾಗತ ಸಿಗುತ್ತಿದೆ, ಮೋದಿ ಅವರ ಮಾತನ್ನು ಇಡೀ ವಿಶ್ವ ಕೇಳಿಸಿಕೊಳ್ಳುತ್ತದೆ. ಇದು ಬಿಜೆಪಿ ಬಂದ ನಂತರದ ಬದಲಾವಣೆ. ಮೋದಿ ಅವರನ್ನು ಬಿಡಿ ಅವರ ಸಂಪುಟದ ಸಹೋದ್ಯೋಗಿಗಳ ವಿರುದ್ಧವೂ ಒಂದು ಭ್ರಷ್ಟಾಚಾರದ ಕಪುತ್ರ್ಪ ಚುಕ್ಕೆ ಕೇಳಿಬಂದಿಲ್ಲ ಎಂದರು. ಈ ಬಾರಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ನಿರಂಜನ್‌ ಅವರನ್ನು ಸುಮಾರು 30ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಜೊತೆಗೆ ಚಾಮರಾಜನಗರದ ನಾಲ್ಕು ಕ್ಷೇತ್ರದಲ್ಲೂ ಕಮಲ ಅರಳಿಸಿ ಎಂದು ಮನವಿ ಮಾಡಿದರು. 

ಸಿದ್ದು, ಡಿಕೆಶಿ ಪ್ರಚಾರದಿಂದ ಕಾಂಗ್ರೆಸ್‌ ಠೇವಣಿ ಹೋಗುತ್ತೆ: ಕೆ.ಎಸ್‌.ಈಶ್ವರಪ್ಪ

ಡಿವಿಎಸ್‌ ಕಿಡಿ: ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ, ಜೆಡಿಎಸ್‌ ಪಂಚ ರತ್ನ ಯಾತ್ರೆಯನ್ನು ಪಂಚರ್‌ ರತ್ನ ಯಾತ್ರೆ ಎಂದು ಲೇವಡಿ ಮಾಡಿ ಅವರ ಮನೆಯ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳದವರು ರಾಜ್ಯದ ಸಮಸ್ಯೆಗೆ ಹೇಗೆ ಪರಿಹಾರ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಪಕ್ಷಕ್ಕೆ ಬಂದರೆ ಜೊತೆಯಾಗಿ ಹೋಗುತ್ತೇವೆ: ಪಕ್ಷ ಅನ್ನುವುದು ಸಮುದ್ರ ಇದ್ದಂತೆ ಇಲ್ಲಿ ಎಲ್ಲರೂ ಬೇಕು, ನಮ್ಮ ಜೊತೆ ಬಂದರೆ ಜೊತೆಯಾಗಿ ಹೋಗುತ್ತೇವೆ, ಬರದಿದ್ದವರನ್ನು ಬಿಟ್ಟು ಹೋಗುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪಕ್ಷಕ್ಕೆ ಅವರು ಬೇಕು- ಇವರು ಬೇಕು ಅಂತಲ್ಲಾ, ಎಲ್ಲರೂ ಬೇಕು, ಜೊತೆಯಾಗಿ ಬಂದರೆ ಜೊತೆಯಾಗಿ ಹೋಗುತ್ತೇವೆ, ಬರಲಿಲ್ಲವೆಂದರೇ ಬಿಟ್ಟು ಹೋಗುತ್ತೇವೆ ಎಂದು ಕೊಳ್ಳೇಗಾಲದಲ್ಲಿ ಟಿಕೆಟ್‌ ಆಕಾಂಕ್ಷಿ ಜಿ.ಎನ್‌.ನಂಜುಂಡಸ್ವಾಮಿ ಗೈರಾದ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್‌ ಉತ್ತರ ಕೊಟ್ಟರು.

ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ

ಸಂಸದ ವಿ.ಶ್ರೀನಿವಾಸಪ್ರಸಾದ್‌ ಅನಾರೋಗ್ಯದ ಕಾರಣ ಮಣಿಪಾಲ್‌ ಆಸ್ಪತ್ರೆಯಲ್ಲಿರುವುದರಿಂದ ಸಂಕಲ್ಪ ಯಾತ್ರೆಗೆ ಬರಲಿಲ್ಲ, ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರಿಗೂ ಸಣ್ಣ ಆರೋಗ್ಯ ತೊಂದರೆ ಕಾಣಿಸಿಕೊಂಡಿದೆ ಎಂದು ಕರೆ ಮಾಡಿ ತಿಳಿಸಿದ್ದಾರೆ ಎಂದು ಸೋಮಣ್ಣ ಗೈರಾದದ್ದಕ್ಕೆ ಸ್ಪಷ್ಟನೆ ಕೊಟ್ಟರು. ಅರಿಶಿಣದ ಬೆಲೆ ಪಾತಾಳಕ್ಕೆ ಕುಸಿತ ಕಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಚಾಮರಾಜನಗರಕ್ಕೆ ಕರೆತಂದು ಅರಿಶಿಣ ಉತ್ಪನ್ನ ತಯಾರಿಕೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.

Latest Videos
Follow Us:
Download App:
  • android
  • ios