ಕಾಂಗ್ರೆಸ್‌ ದುರಾಡಳಿತಕ್ಕೆ ಬೇಸತ್ತ ಜನತೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಗಾಗಿ ಲಕ್ಷಾಂತರ ಕೋಟಿ ರುಪಾಯಿಗಳ ಹಣದ ಹೊಳೆ ಹರಿಯಿಸಿದ್ದರೂ ಒಂದು ಪೈಸೆಯೂ ಅದರಲ್ಲಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಂಡರು. ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿ ಮಾಡಲು ದೇಶದ ಜನರು ತಿರ್ಮಾನ ಮಾಡಿದ್ದಾರೆ. ಮೋದಿ ನಾಯಕತ್ವ ಸಾಮಾನ್ಯ ಜನರಲ್ಲಿ ವಿಶ್ವಾಸ ತುಂಬಿದೆ: ಶೋಭಾ ಕರಂದ್ಲಾಜೆ

Union Minister Shobha Karandlaje Slams Karnataka Congress Government grg

ಇಂಡಿ(ಮೇ.05):  ಬಿಜೆಪಿ ಆಡಳಿತವಿದ್ದಾಗ ಮಳೆ, ನೆರೆಹಾವಳಿ ಇದ್ದರೂ ರೈತರು ಖುಷಿಯಲ್ಲಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಮಳೆಯೂ ಇಲ್ಲ, ಬೆಳೆಯೂ ಇಲ್ಲ. ಕೇವಲ ಬರವಿದೆ. ಯಾಕೆ ಏನು ಎಂಬುದು ಭಗವಂತನಿಗೆ ಗೊತ್ತು ಎಂದು ಕಾಂಗ್ರೆಸ್‌ ವಿರುದ್ಧ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಟೀಕಾ ಪ್ರಹಾರ ನಡೆಸಿದರು.

ತಾಲೂಕಿನ ತಾಂಬಾ ಮಹಾಶಕ್ತಿ ಕೇಂದ್ರದ ತಡವಲಗಾ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ದುರಾಡಳಿತಕ್ಕೆ ಜನತೆ ಬೇಸತ್ತು, ಇಂದು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸ್ಥಾನವೂ ದೇಶದ ಜನರು ಕಾಂಗ್ರೆಸ್‌ಗೆ ನೀಡಿಲ್ಲ. ಇದನ್ನು ನೋಡಿ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ದೇಶದ ರಕ್ಷಣೆಗೆ ಮೋದಿ ಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಗಾಗಿ ಲಕ್ಷಾಂತರ ಕೋಟಿ ರುಪಾಯಿಗಳ ಹಣದ ಹೊಳೆ ಹರಿಯಿಸಿದ್ದರೂ ಒಂದು ಪೈಸೆಯೂ ಅದರಲ್ಲಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಂಡರು. ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿ ಮಾಡಲು ದೇಶದ ಜನರು ತಿರ್ಮಾನ ಮಾಡಿದ್ದಾರೆ. ಮೋದಿ ನಾಯಕತ್ವ ಸಾಮಾನ್ಯ ಜನರಲ್ಲಿ ವಿಶ್ವಾಸ ತುಂಬಿದೆ ಎಂದು ಹೇಳಿದರು.

ಉಕ್ರೇನ್ - ರಷ್ಯಾ ಯುದ್ಧ ನಡೆದಾಗ ಎರಡು ದೇಶಗಳ ನಾಯಕರಿಗೆ ಮಾತನಾಡಿ ಕದನ ವಿರಾಮ ನಿಲ್ಲಿಸಿ ನಮ್ಮ ದೇಶದ 20 ಸಾವಿರ ಮೆಡಿಕಲ್ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ತಂದು ಪ್ರಾಣ ರಕ್ಷಣೆ ಮಾಡಿದ ನಾಯಕ ಪ್ರಧಾನಿ ಮೋದಿಜಿ. ಅವರ ತಾಕತ್ತು ನೋಡಿ ವಿಶ್ವವೇ ಬೆರಗಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ತಾಂಬಾ ಮಹಾಶಕ್ತಿ ಕೇಂದ್ರದ ಪ್ರಮುಖ ಶೀಲವಂತ ಉಮರಾಣಿ, ಕಾಸುಗೌಡ ಬಿರಾದಾರ, ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ, ಶ್ರೀಶೈಲಗೌಡ ಪಾಟೀಲ ಮಾತನಾಡಿದರು.
ಮಾಜಿ ಶಾಸಕ ಎಸ್.ಕೆ ಬೆಳ್ಳುಬ್ಬಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಲ್ಲಿಕಾರ್ಜುನ ಕಿವಡೆ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ರವಿಕಾಂತ ಬಗಲಿ, ಹಣಮಂತರಾಯಗೌಡ ಪಾಟೀಲ, ರಾಜಕುಮಾರ ಸಗಾಯಿ, ಅಶೋಕ ಅಲ್ಲಾಪೂರ, ಭೀಮರಾಯಗೌಡ ಮದರಖಂಡಿ, ದೇವೆಂದ್ರ ಕುಂಬಾರ, ವಿಜು ಮಾನೆ, ಅನೀಲಗೌಡ ಬಿರಾದಾರ, ಪ್ರಶಾಂತ ಗವಳಿ, ರವಿ ವಗ್ಗೆ, ಸಂಜು ದಶವಂತ, ಮರೆಪ್ಪ ಗಿರಣಿವಡ್ಡರ್, ಮುತ್ತಪ್ಪ ಪೊತೆ, ಅಣ್ಣಾರಾಯ ಮೇತ್ರಿ, ಸುನಂದಾ ವಾಲೀಕಾರ, ಮಲ್ಲಮ್ಮ ಜೋಗುರ, ವಿಜಯಲಕ್ಷ್ಮೀ ರೂಗಿಮಠ, ಸುನಂದಾ ಗಿರಣಿವಡ್ಡರ, ಅನಸೂಯಾ ಮದರಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ದೇಶದ ಪ್ರಧಾನಿಗಳು ವಿದೇಶಗಳಿಗೆ ಹೋದರೆ ಹಾವಾಡಿಗರು ಹಾಗೂ ಬಡ ದೇಶ ಎಂದು ಹಿಂದೆ ಗೇಲಿ ಮಾಡುತ್ತಿದ್ದರು. ಕವಡೆ ಕಾಸಿನ ಗೌರವ ನೀಡುತ್ತಿರಲಿಲ್ಲ. ಇಂದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶಕ್ಕೆ ಹೋದರೆ ಇಡೀ ವಿಶ್ವವೇ ಎದ್ದು ನಿಂತು ಗೌರವಿಸುತ್ತಾರೆ. ಇದು ಇಡೀ ಪ್ರತಿಯೊಬ್ಬ ಭಾರತೀಯನಿಗೆ ಸಂದ ಗೌರವ.

ಬಿಜೆಪಿ ಕೋಟೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್‌ನ ರಾಜೀವ್‌ ಗೌಡ ಸವಾಲು!

ನನ್ನ ಆಸೆ ಈಡೇರಿಸಿ: ಜಿಗಜಿಣಗಿ

ಇದು ನನ್ನ ಕೊನೆಯ ಚುನಾವಣೆ. ಇದೊಂದು ಬಾರಿ ಮೋದಿ ಅವರು ಪ್ರಧಾನಿ ಆಗಲು ಲೋಕಸಭೆಯಲ್ಲಿ ಕೈ ಎತ್ತಬೇಕು ಎಂಬುದು ನನ್ನ ಆಸೆ. ಹೀಗಾಗಿ ಜಿಲ್ಲೆಯ ಜನರು ಮನೆಯ ಮಗನಂತೆ ಇಷ್ಟು ದಿನ ರಾಜಕಾರಣದಲ್ಲಿ ಬೆಳೆಸಿದ್ದೀರಿ, ಇದೊಂದು ಬಾರಿ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಮನವಿ ಮಾಡಿಕೊಂಡರು. ಇಷ್ಟು ದಿನ ನಾನು ಮಾಡಿದ ರಾಜಕಾರಣದಲ್ಲಿ ನಾನು ಯಾರ ಕಣ್ಣಲ್ಲಿಯೂ ಇರದೇ, ಅವರ ಹೃದಯಲ್ಲಿ ಇದ್ದೇನೆ. ನನ್ನ ಕೊನೆಯ ಚುನಾವಣೆಯಲ್ಲಿ ನನಗೆ ಮತ ನೀಡಿ ಆಶೀರ್ವದಿಸಿ, ಮೋದಿಜಿ ಅವರು ಪ್ರಧಾನಿ ಆಗಲು ನನಗೆ ಕೈಎತ್ತಲು ಅವಕಾಶ ಮಾಡಿಕೊಡಿ, ನನ್ನ ಆಸೆ ಈಡೇರಿಸುತ್ತಿರಿ ಎಂಬ ಭರವಸೆ ಇದೆ ಕೈ ಮುಗಿದರು.

ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರಿಗೆ ಹೆಚ್ಚಿನ ಮತಗಳನ್ನು ನೀಡಿ ಆಶೀರ್ವಾದ ಮಾಡಬೇಕು. ಜಿಗಜಿಣಗಿ ಅವರು ಸಜ್ಜನ ರಾಜಕಾರಣಿಯಾಗಿದ್ದು, ಜಾತಿ, ಮತ ಎನ್ನದೆ ಸಮಾನವಾಗಿ ಗೌರವಿಸುವ ನಾಯಕ. ದೇಶ ವಿಶ್ವ ಗುರುವಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ ಎಂದು  ಬಿಜೆಪಿ ಮುಖಂಡೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

Latest Videos
Follow Us:
Download App:
  • android
  • ios