ಗೂಳಿಹಟ್ಟಿ ಬಿಜೆಪಿ ಸದಸ್ಯರಾಗಿದ್ದರು, ಮಂತ್ರಿಯೂ ಆಗಿದ್ದರು. ಆದರೆ ಅವರು ಆರೆಸ್ಸೆಸ್‌ ಶಾಖೆಗೆ ಹೋಗಿಲ್ಲ. ಆರೆಸ್ಸೆಸ್‌ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 

ಉಡುಪಿ(ಡಿ.10):  ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಆರೆಸ್ಸೆಸ್‌ಗೆ ಬಂದದ್ದು ಯಾವಾಗ? ಅವರಿಗೆ ಆರೆಸ್ಸೆಸ್‌ ಬಗ್ಗೆ ತಪ್ಪು ಮಾಹಿತಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಆರೆಸ್ಸೆಸ್‌ನಲ್ಲಿ ದಲಿತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಎಂಬ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಹೇಳಿಕೆ ಕುರಿತು ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಗೂಳಿಹಟ್ಟಿ ಬಿಜೆಪಿ ಸದಸ್ಯರಾಗಿದ್ದರು, ಮಂತ್ರಿಯೂ ಆಗಿದ್ದರು. ಆದರೆ ಅವರು ಆರೆಸ್ಸೆಸ್‌ ಶಾಖೆಗೆ ಹೋಗಿಲ್ಲ. ಆರೆಸ್ಸೆಸ್‌ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ವರ್ಣಾಶ್ರಮ ಜಾರಿಗೊಳಿಸುವುದು ಬಿಜೆಪಿ, ಆರ್‌ಎಸ್ಎಸ್ ಉದ್ದೇಶ: ದಿನೇಶ್ ಅಮೀನ್ ಮಟ್ಟು

ಎಲ್ಲಾ ವರ್ಗದವರು ಒಟ್ಟಾಗಿ ಇರಬೇಕು, ಭಾರತದ ಅಭ್ಯುದಯಕ್ಕೆ ಇದುವೇ ಮಾರ್ಗ ಎಂಬುದು ಆರೆಸ್ಸೆಸ್‌ ಆಶಯ. ಗೂಳಿಹಟ್ಟಿ ಅವರಿಗೆ ತಪ್ಪು ಮಾಹಿತಿ ಇದೆ, ಅವರು ಆರೆಸ್ಸೆಸ್‌ಗೆ ಬರಲಿ, ಸರಿಯಾದ ಮಾಹಿತಿ ಪಡೆದುಕೊಳ್ಳಲಿ ಎಂದರು.