ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಕಾಂಗ್ರೆಸ್‌, ರಾಜ್ಯಗಳನ್ನು ತನ್ನ ಸ್ವಂತ ಎಟಿಎಂ ಮಾಡಿಕೊಳ್ಳುತ್ತಿದೆ. ಸಾರ್ವಜನಿಕ ಹಣವನ್ನು ತಮ್ಮ ಜೀವನಶೈಲಿಗಾಗಿ ಲೂಟಿ ಮಾಡುತ್ತಿದೆ: ಕೇಂದ್ರ ಐಟಿ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌

ನವದೆಹಲಿ(ಡಿ.23): ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಐಷಾರಾಮಿ ವಿಮಾನಯಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಐಟಿ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌, ‘ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳನ್ನು ಸ್ವಂತ ಎಟಿಎಂ ಮಾಡು, ಜನರ ಹಣದಲ್ಲಿ ಮೋಜು ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತಾಗಿ ಟ್ವೀಟ್‌ ಮಾಡಿರುವ ಅವರು, ‘ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಕಾಂಗ್ರೆಸ್‌, ರಾಜ್ಯಗಳನ್ನು ತನ್ನ ಸ್ವಂತ ಎಟಿಎಂ ಮಾಡಿಕೊಳ್ಳುತ್ತಿದೆ. ಸಾರ್ವಜನಿಕ ಹಣವನ್ನು ತಮ್ಮ ಜೀವನಶೈಲಿಗಾಗಿ ಲೂಟಿ ಮಾಡುತ್ತಿದೆ. ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸಲು ಹಣವಿಲ್ಲದ ಸಮಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಯುಪಿಎ ಸರ್ಕಾರ ಇದ್ದಾಗ ವಿಐಪಿ ಹೆಲಿಕಾಪ್ಟರ್‌ಗಳಿಗೆ ಹಣ ಖರ್ಚು ಮಾಡಿದ್ದರು. ಸೋನಿಯಾ ಅವರೇ ಹೀಗೆ ಮಾಡಿರುವಾಗಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಲು ಸಿದ್ದರಾಮಯ್ಯ, ಕರ್ನಾಟಕ ಸರ್ಕಾರದ ಹಣ ಬಳಸದೇ ಇರುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.

ಮಸ್ಕ್,ಆಲ್ಟ್‌ಮ್ಯಾನ್ ಜೊತಗೆ ಸ್ಪರ್ಧೆಗಲ್ಲ, ದಿನನಿತ್ಯ ಜೀವನಕ್ಕೆ AI ಬಳಕೆ, ರಾಜೀವ್ ಚಂದ್ರಶೇಖರ್!

ಅಲ್ಲದೇ ರಾಹುಲ್‌ ಅವರ ಕಾಂಗ್ರೆಸ್‌ ಗ್ಯಾರಂಟಿ ಎಂದರೆ ಅದು ಲೂಟಿ ಮತ್ತು ಭ್ರಷ್ಟಾಚಾರ ಎಂದು ಆರೋಪಿಸಿದ್ದಾರೆ.