Election Result 2022: ಹೊಸ ಆಡಳಿತ ಪದ್ಧತಿಗೆ ಸಿಕ್ಕ ಜನಾದೇಶ: ರಾಜೀವ್‌ ಚಂದ್ರಶೇಖರ್‌

*   ಪಂಚರಾಜ್ಯ ಫಲಿತಾಂಶ ಮೋದಿ ನಾಯಕತ್ವಕ್ಕೆ ದೊರೆತ ಜನಮನ್ನಣೆ
*   ವಿಕಾಸ ಪರವಾದ ರಾಜಕೀಯಕ್ಕೆ ಅದ್ಭುತ ಜನಾದೇಶ ದೊರಕಿದೆ 
*   ಇದೊಂದು ಆಡಳಿತ ಪಕ್ಷದ ಪರವಾದ ಜನಾದೇಶ
 

Union Minister Rajeev Chandrasekhar React on Five States Election Results grg

ಬೆಂಗಳೂರು(ಮಾ.11):  ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳು(Election Result) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ನಾಯಕತ್ವ 2014ರಿಂದ ಆಡಳಿತದಲ್ಲಿ ಅಳವಡಿಸಿಕೊಂಡಿರುವ ಪಾರದರ್ಶಕತೆ, ಹೊಸ ಆಡಳಿತ ಪದ್ಧತಿ ಹಾಗೂ ಅಭಿವೃದ್ಧಿ ಕೇಂದ್ರಿತ ರಾಜಕಾರಣಕ್ಕೆ ಜನತೆ ನೀಡಿದ ಅನುಮೋದನೆ ಎಂದು ಕೇಂದ್ರ ಐಟಿ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ(Uttar Pradesh) ರಾಜ್ಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014, 2017 ಹಾಗೂ 2019ರಲ್ಲಿ ಅಭೂತಪೂರ್ವ ಜನಾದೇಶ ನೀಡಿದ್ದು, ಇದೀಗ 2022ರಲ್ಲಿ ಮತ್ತೊಮ್ಮೆ ಐತಿಹಾಸಿಕ ಜನಾದೇಶ ನೀಡಿದೆ. ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ರಾಜಕೀಯ(Politics), ಸಮೃದ್ಧಿ ರಾಜಕೀಯ ಹಾಗೂ ಆ ನೆಲ ಹಲವಾರು ದಶಕಗಳ ಕಾಲ ಕಾಣದಿದ್ದ ಹೊಸ ರೀತಿಯ ಜನಪರ, ವಿಕಾಸ ಪರವಾದ ರಾಜಕೀಯಕ್ಕೆ ಅದ್ಭುತ ಜನಾದೇಶ ದೊರಕಿದೆ ಎಂದು ಹೇಳಿದರು.

ಮಂಗಳೂರಿನ ಜೋಗಿ ಮಠಕ್ಕೆ ಪೀಠಾಧಿಪತಿ ನೇಮಕ ಮಾಡುವುದು Yogi Adityanath

ಇದೊಂದು ಆಡಳಿತ ಪಕ್ಷದ ಪರವಾದ ಜನಾದೇಶ. ಉತ್ತಮ ಆಡಳಿತದ ಪರವಾದ, ಭ್ರಷ್ಟಾಚಾರ(Corruption) ರಹಿತ ಸಾರ್ವಜನಿಕ ಯೋಜನೆಗಳನ್ನು ಕಾರ್ಯಗತಗೊಳಿಸಿದ, ಕಾನೂನು ಮತ್ತು ಸುವ್ಯವಸ್ಥೆಯ ಜತೆಗೆ ಉತ್ತರ ಪ್ರದೇಶದ ನಾಗರಿಕರಿಗೆ ಸುರಕ್ಷತೆ ಒದಗಿಸಿದ ಪಕ್ಷವನ್ನು ಸಮರ್ಥಿಸುವ ಜನಾದೇಶವಾಗಿದೆ. ಅಂತೆಯೇ ಆರು ದಶಕಗಳ ಕಾಲ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ಹೆಗ್ಗುರುತಾಗಿದ್ದ ವಂಶವಾದ, ಭ್ರಷ್ಟ, ಮಾಫಿಯಾ ಹಾಗೂ ಮಧ್ಯವರ್ತಿ ರಾಜಕಾರಣವನ್ನು ಸಂಪೂರ್ಣವಾಗಿ ಕಿತ್ತೊಗೆದ ಜನಾದೇಶವಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಒಂದು ಮಹತ್ವಪೂರ್ಣ ನಿರ್ಣಾಯಕ ಕ್ಷಣ ಎಂದು ಭಾವಿಸುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರದ ನೀತಿಯಿಂದ ಸ್ಟಾರ್ಟಪ್‌ ಹೆಚ್ಚಳ: ರಾಜೀವ್‌ ಚಂದ್ರಶೇಖರ್‌

ಬೆಂಗಳೂರು: ನವೋದ್ಯಮಗಳು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗದಂತೆ ಕೇಂದ್ರ ಸರ್ಕಾರ(Central Government) ನೋಡಿಕೊಳ್ಳುತ್ತಿದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಸ್ಟಾರ್ಟಪ್‌ಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಹೇಳಿದ್ದಾರೆ. 

ಮಾ.07 ರಂದು ನಗರದಲ್ಲಿ ಇಂಡಿಯಾ ಗ್ಲೋಬಲ್‌ ಫೋರಂ (IGF) ನಿಂದ ಏರ್ಪಡಿಸಿದ್ದ ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದು ನವೋದ್ಯಮಗಳು ಮಹಾನಗರಗಳಿಗೆ ಮಾತ್ರ ಸೀಮಿತವಾಗದೆ ರಾಜ್ಯಗಳ ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಸ್ಥಾಪನೆಯಾಗುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಇದರಿಂದಾಗಿ ಉದ್ಯಮಿಗಳು ಅದರಲ್ಲೂ ಯುವ ಜನರು ಸ್ಟಾರ್ಟಪ್‌ಗಳನ್ನು(Startup) ಸ್ಥಾಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ ಎಂದು ವಿವರಿಸಿದ್ದರು. 

ಕೋವಿಡ್‌(Covid19) ಬಳಿಕ ಕಳೆದ ಎರಡು ವರ್ಷದಲ್ಲಿ ಮಹಿಳೆಯರು(Women) ಕಾರ್ಯನಿರ್ವಹಿಸುವ ಕ್ಷೇತ್ರಗಳೂ ವಿಸ್ತಾರ ಹೊಂದಿವೆ. ಕೌಶಲ್ಯಯುತ ಕೆಲಸಗಳತ್ತ ಮಹಿಳೆಯರು ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಉತ್ತಮ ಅವಕಾಶಗಳೂ ಅವರನ್ನು ಅರಸಿಕೊಂಡು ಬರುತ್ತಿವೆ. ಕಳೆದ 5 ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿಯ ಚಿತ್ರಣವೇ ಬದಲಾಗಿದೆ ಎಂದು ತಿಳಿಸಿದ್ದರು. 

Election Result 2022 ಪ್ರಿಯಾಂಕಾಗೆ ಪ್ರಥಮ ಚುಂಬನಂ ದಂತ ಭಗ್ನಂ

ಭವಿಷ್ಯದ ದೃಷ್ಟಿಕೋನ: 

ದಶಕದ ಹಿಂದೆ ಭಾರತದಲ್ಲಿ(India) ಕಡಿಮೆ ಅವಕಾಶಗಳಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರವು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

30ಕ್ಕೂ ಅಧಿಕ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಿರ್ದೇಶಕರು, ಮುಖ್ಯಸ್ಥರು ಸಂವಾದದಲ್ಲಿ ಹಾಜರಿದ್ದರು. ಎಲೆಕ್ಟ್ರಿಕ್‌ ವಾಹನಗಳ ಬಳಕೆ ಪ್ರೋತ್ಸಾಹಿಸಬೇಕು. ಬೆಂಗಳೂರಿನ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂಬುದು ಸೇರಿದಂತೆ ಹಲವು ಸಲಹೆ ಸಂವಾದದಲ್ಲಿ ಕೇಳಿ ಬಂದಿದ್ದವು. 

Latest Videos
Follow Us:
Download App:
  • android
  • ios