ರಾಹುಲ್‌ಗೆ ತಿಳಿವಳಿಕೆ ಇಲ್ಲ, ನೀವು ಅವರಂತೆ ಆಡಬೇಡಿ: ಡಿಕೆಶಿ, ಸಿದ್ದುಗೆ ಜೋಶಿ ಸಲಹೆ
* ನೀವು ಪ್ರಬುದ್ಧರಾಗಿ ಮಾತನಾಡಿ: ಡಿಕೆಶಿ, ಸಿದ್ದರಾಮಯ್ಯಗೆ ಜೋಶಿ ಸಲಹೆ
* ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ
* ದೇಶದಲ್ಲಿ ಬಹಳ ಜನೋಪಯೋಗಿ ಕಾರ್ಯ ನಡೆಯಬೇಕು
ಧಾರವಾಡ(ನ.07): ರಾಹುಲ್ ಗಾಂಧಿಗೆ(Rahul Gandhi) ತಿಳಿವಳಿಕೆ ಇಲ್ಲ, ಮನೆಯಲ್ಲಿ ತಿಳಿವಳಿಕೆ ಇಲ್ಲದ ಈ ಹುಡುಗನಿಗೆ ವಿನಾಯಿತಿ ಕೊಡುತ್ತಾರೆ. ಹಾಗೆ ರಾಹುಲ್ ಗಾಂಧಿ ಬಿಟ್ಟು ನೀವು ಪ್ರಬುದ್ಧರಾಗಿ ಮಾತನಾಡಿ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಸಲಹೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗಳಲ್ಲಿ(Byelection) ಸೋತಿದ್ದಕ್ಕೆ ಬಿಜೆಪಿ(BJP) ಪೆಟ್ರೋಲ್(Petrol), ಡೀಸೆಲ್(Diesel) ಬೆಲೆ ಕಡಿಮೆ ಮಾಡಿದೆ ಎಂಬ ಡಿಕೆಶಿ(DK Shivakumar) ಹಾಗೂ ಸಿದ್ದರಾಮಯ್ಯ(Siddaramaiah) ಟೀಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಮೋದಿ ಪಕೋಡ ಕರಿಯಲು ಎಣ್ಣೆ ದರ ಕಡಿಮೆ ಆಗಬೇಕಿದೆ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್(Congress) ಪಕ್ಷಕ್ಕೆ ಜನ ಹಿತ ಏನು, ಜನ ಎಲ್ಲಿ ಹೋಗಿ ಓಟು ಹಾಕಿದರು ಅಂತ ಗೊತ್ತಿಲ್ಲ. ದೇಶದ 29 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಎನ್‌ಡಿಎ(NDA) ಮೈತ್ರಿಕೂಟ 12 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಹಿಮಾಚಲ ಪ್ರದೇಶ(Himachal Pradesh) ಹಾಗೂ ರಾಜಸ್ಥಾನ(Rajasthan) ಎರಡು ಕಡೆ ಗೆದ್ದಿದ್ದು ಬಿಟ್ಟರೆ ಬೇರೆ ಎಲ್ಲೂ ಗೆದ್ದಿಲ್ಲ. ನಾವು ತೆಲಂಗಾಣ(Telangana), ಕರ್ನಾಟಕ(Karnataka), ಉತ್ತರ ಈಶಾನ್ಯದಲ್ಲಿ ಗೆದ್ದಿದ್ದೇವೆ. ಮಧ್ಯಪ್ರದೇಶ ಹಾಗೂ ಹಿಂದಿನ ಚುನಾವಣೆಯಲ್ಲಿ(Election) ಯುಪಿಯಲ್ಲಿ ಕೂಡಾ ಗೆದ್ದಿದ್ದೇವೆ. ಆಗಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಇತ್ತು ಎಂದರು.
ಪೆಟ್ರೋಲ್ ಡೀಸೆಲ್ ಬೆಲೆ ಡಿ ಕಂಟ್ರೋಲ್ ಆಗಿರುವುದು ಕಾಂಗ್ರೆಸ್ ಸಮಯದಲ್ಲಿ. ಇವತ್ತಿನ ಅಂತಾರಾಷ್ಟ್ರೀಯ ಬೆಲೆ ಪ್ರಕಾರ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ತೆರಿಗೆ ಕಡಿಮೆ ಮಾಡಿದ್ದೇವೆ. ದೇಶದಲ್ಲಿ ಬಹಳ ಜನೋಪಯೋಗಿ ಕಾರ್ಯ ನಡೆಯಬೇಕು. ವ್ಯಾಕ್ಸಿನ್(Vaccine), ಉಚಿತ ಆಹಾರ ವಿತರಣೆ ಮತ್ತು ಅಭಿವೃದ್ಧಿ ನಡೆಯಬೇಕು. ಇದರ ನಡುವೆಯೇ ನಾವು ಪೆಟ್ರೋಲ್ 20 ಕಡಿಮೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಹಾನಗಲ್ ಸೋಲಿಂದ ಸಿಎಂ ವರ್ಚಸ್ಸಿಗೆ ಧಕ್ಕೆ..!
ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಬಹುಶಃ ಇಟಲಿಗೆ(Italy) ಹೋಗಿರಬೇಕು. ಅವರು ತಿಂಗಳುಗಟ್ಟಲೇ ಹೋಗುವವರು. ಡಿ.ಕೆ. ಶಿವಕುಮಾರ ಹಾಗೂ ರಾಹುಲ್ ಗಾಂಧಿ ಅವರನ್ನು ಕೇಳುತ್ತೇನೆ. ಕಾಂಗ್ರೆಸ್ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ(Karnataka) ಪೆಂಟ್ರೋಲ್, ಡೀಸೆಲ್ ಬೆಲೆಯಲ್ಲಿ ಒಂದು ಪೈಸೆಯನ್ನೂ ಕಡಿಮೆ ಮಾಡಿಲ್ಲವಲ್ಲಾ ಏಕೆ? ಚುನಾವಣೆ ಫಲಿತಾಂಶ(Result) ಅವರ ಪರ ಬಂದಿದೆ ಎಂದು ಕಡಿಮೆ ಮಾಡಲ್ವಾ? ಎಂದು ಪ್ರಶ್ನಿಸಿದರು.
ಡಿ.ಕೆ. ಶಿವಕುಮಾರ ಬಹಳ ಖಾತೆ ನಿರ್ವಹಣೆ ಮಾಡಿದವರು. ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ. ರಾಹುಲ್ ಗಾಂಧಿ ತರಹ ಏಕೆ ಆಡ್ತಾರೋ ಎಂದು ಪ್ರಶ್ನಿಸಿದ ಅವರು, ರಾಹುಲ್ ರೀತಿ ನೀವು ಅಲ್ಲ. ನೀವು ಸ್ವಲ್ಪ ಪ್ರಬುದ್ಧರಾಗಿ ಮಾತನಾಡಿ ಎಂದು ನುಡಿದ ಜೋಶಿ, ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ತೆರಿಗೆ ಕಡಿಮೆ ಮಾಡುತ್ತೀರಾ ಅಥವಾ ನಿಮ್ಮ ರಾಹುಲ್ ಗಾಂಧಿಗೆ ಕೇಳಿ ಹೇಳ್ತಿರಾ? ಎಂದು ಪ್ರಶ್ನಿಸಿದರು.
ನಾವು ಅಲ್ಪಸಂಖ್ಯಾತ(Minority)ಹಾಗೂ ಬಹುಸಂಖ್ಯಾತ ಪರ ಅಲ್ಲ. ನಾವು ತುಷ್ಟೀಕರಣ ರಾಜಕಾರಣ ಮಾಡಲ್ಲ. ಅವರು ತುಷ್ಟೀಕರಣ ರಾಜಕಾರಣ ಮಾಡುತ್ತಾರೆ. ಮುಸ್ಲಿಮರನ್ನು ವೋಟ್ ಬ್ಯಾಂಕ್(Vote Bank) ಮಾಡಿ ಅವರು ತುಷ್ಟೀಕರಣ ಮಾಡುತ್ತಿದ್ದಾರೆ. ನಾವು ಸರ್ವರಿಗೂ ಸಮಬಾಳ, ಸರ್ವರಿಗೂ ಸಮಪಾಲು ಎಂದು ನುಡಿಯುತ್ತೇವೆ. ಉಪಚುನಾವಣೆ ಸಮಯದಲ್ಲಿ ಸರ್ಕಾರ ಹಾಗೂ ಮಂತ್ರಿಗಳು ಅಭ್ಯರ್ಥಿಗಳ ಪರ ನಿಲ್ಲುವುದು ಸಹಜ. ಗುಂಡ್ಲುಪೇಟೆ ಚುನಾವಣೆ ವೇಳೆ ಸಿದ್ಧರಾಮಯ್ಯ ಅಲ್ಲೇ ಉಳಿದಿದ್ದರು. ಸಿಎಂ ಆದವರು ಉಪಚುನಾವಣೆ ಗೆಲ್ಲಿಸಲು ನಿಲ್ಲುವುದು ಸಹಜ. ಎರಡೂ ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದರೆ ಶೇ. 53ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಹಾನಗಲ್‌ನಲ್ಲಿ ಅವರಿಗೆ 4-5 ಸಾವಿರ ಹೆಚ್ಚು ಬಿದ್ದಿವೆ. ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ? 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಸಿದ್ದರಾಮಯ್ಯ ಅಲ್ಲೇ ಟೆಂಟ್ ಹೊಡೆದಿದ್ದರು. ಒಂದು ಗೆದ್ದ ನಂತರ ನಾವು ಬೀಗಬಾರದು ಸೋತ ನಂತರ ಧೃತಿಗೆಡಬಾರದು ಎಂದು ಹಾನಗಲ್(Hanagal) ಸೋಲನ್ನು ಸಮರ್ಥನೆ ಮಾಡಿಕೊಂಡರು.