Asianet Suvarna News Asianet Suvarna News

Hubballi: ಮಹದಾಯಿ ಬಗ್ಗೆ ಮಾತಾಡಲು ಕಾಂಗ್ರೆಸ್‌ನವರಿಗೆ ನೈತಿಕತೆಯಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಧಾರವಾಡದ ಯುವಜನ ಮಹೋತ್ಸವಕ್ಕೆ ಪ್ರಧಾನಿಗಳು ಬರುತ್ತಿದ್ದಾರೆ. ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಮಹದಾಯಿ ಬಗ್ಗೆ ಮಾತಾಡಲು ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

union minister pralhad joshi slams on congress at hubballi gvd
Author
First Published Dec 24, 2022, 1:31 PM IST

ಹುಬ್ಬಳ್ಳಿ (ಡಿ.24): ಧಾರವಾಡದ ಯುವಜನ ಮಹೋತ್ಸವಕ್ಕೆ ಪ್ರಧಾನಿಗಳು ಬರುತ್ತಿದ್ದಾರೆ. ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಮಹದಾಯಿ ಬಗ್ಗೆ ಮಾತಾಡಲು ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ಕುಡಿಯುವ ನೀರಿಗಾಗಿ ಮನಮೋಹನ್ ಸಿಂಗ್‌ಗೆ ಪರಿಪರಿಯಾಗಿ ಬೇಡಿಕೊಂಡೆವು. ಯೋಜನೆ ಜಾರಿಗೆ ಕೊನೆಯ ಹಂತದ ತೀರ್ಮಾನ ತೆಗೆದುಕೊಳ್ಳಲು ಸಜ್ಜಾಗಿದ್ದೇವೆ. ಒಗ್ಗರಣೆ ಹಾಕಿ ಅಡುಗೆ ಮಾಡುವವರು ನಾವೇ, ಕೊನೆಯಲ್ಲಿ ನಾವು ಮಾಡಿದ್ದು ಅನ್ನುವುದು ಕಾಂಗ್ರೆಸ್ ಅಭ್ಯಾಸ. 

ಕೋವಿಡ್ ಹೆಸರಲ್ಲಿ ಕಾಂಗ್ರೆಸ್ ಪಾದಯಾತ್ರೆ ತಡೆಯುತ್ತಿದ್ದಾರೆ ಅನ್ನೋ ಆರೋಪ ಹಿನ್ನೆಲೆ. ಯಾತ್ರೆ ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಯಾಕಂದರೆ ಪಾದಯಾತ್ರೆ ನಡೆದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತೆ. ಹೀಗಾಗಿ ಕೊವಿಡ್ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸುತ್ತಿದೆ ಎಂದು ವ್ಯಂಗ್ಯ. ಕಾಂಗ್ರೆಸ್ ನಾಯಕರು ಒಂದು ವಾರ ಹಾಲಿಡೆಗೆಂದು ವಿದೇಶಕ್ಕೆ ಯಾಕೆ ಹೋಗುತ್ತಿದ್ದಾರೆ ಹೇಳಲಿ. ಬೊಮ್ಮಾಯಿ ನೇತೃತ್ವದಲ್ಲಿ ಜನಪರ ಆಡಳಿತ ಕೊಡುತ್ತಿದ್ದೇವೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಥಂಪಿಂಗ್ ಮೇಜಾರಿಟಿಯಲ್ಲಿ ಮತ್ತೆ ಗೆಲ್ಲುತ್ತೇವೆ ಎಂದು ಜೋಶಿ ತಿಳಿಸಿದರು.

ಅಹಿಂದ ಎಂದವರು ಕುರಿಗಾಹಿಗಳಿಗೆ ಕುರಿ ಕೊಡಲಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಶಿಗ್ಗಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನ ಶಂಕು ಸ್ಥಾಪನೆ ನೆರವೇರಿಸಿದ ಸಿಎಂ: ಬೇರೆ ಬೇರೆ ಕಡೆ ಮನ ಕೆರಳಿಸುವ ಹೇಳಿಕೆಗಳು, ಮಹಾರಾಷ್ಟ್ರ ಮರಾಠಿ ಅಂತ ಹೇಳಿಕೆಗಳು, ಚರ್ಚೆ ನಡೆಯುವ ಸಂದರ್ಭದಲ್ಲಿ ಇಲ್ಲಿ ಇಂಥ ಕಾರ್ಯಕ್ರಮ ನಡೆಯುತ್ತಿದೆ ಎಂದು ಪ್ರಹ್ಲಾದ್‌ ಜೋಶಿ ಹೇಳಿದರು. ಮರಾಠಾ  ಕನ್ನಡ ಅಂತ ಪ್ರವೋಕೇಟ್ ಮಾಡುವ ವರ್ಗ ಒಂದು ಕಡೆ ಆದರೆ, ನಮ್ಮಲ್ಲಿ ಹರಿತಿರೋದು ಒಂದೇ ರಕ್ತ, ನಾವೆಲ್ಲಾ ಒಂದೇ ಎಂಬ ಭಾವ ಇಲ್ಲಿ ಸಿದ್ದಗೊಂಡಿದೆ. 

ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಜೀವನದಲ್ಲಿ ಚಾರಿತ್ರ್ಯ, ಚಾರಿತ್ರ್ಯದ ಮೂಲಕ ಆಡಳಿತ ಹಾಗೂ ಆಡಳಿತದ ಮೂಲಕ ಆರ್ಥಿಕ ನೀತಿ, ಶಿವಾಜಿಯವರ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಬಹಳ ದೊಡ್ಡ ಶಿಕ್ಷೆ ಇತ್ತು. ಅವರ ಹಿಂದೆ ಸ್ವರಾಜ್ಯ ಗ್ರಂಥ ಇಡೀ ದೇಶಕ್ಕೆ ಅನುಕರಣೀಯವಾದದ್ದು. ಗುಲಾಮಿ ಸಂಸ್ಕೃತಿ ಅತ್ಯಂತ ಕಟ್ಟುನಿಟ್ಟಾಗಿ ವಿರೋಧ ಮಾಡಿದವರು ಶಿವಾಜಿ ಮಹರಾಜರು, ನಮ್ಮ ನೌಕಾಪಡೆಯ ಹಡುಗಿನ ಮೇಲೆ ಸೇಂಟ್ ಚಾರ್ಜ್ ಗುರುತು ತೆಗೆದು ಶಿವಾಜಿ ಮಹಾರಾಜರ ಗುರುತು ಹಾಕಿದ್ದಾರೆ ಎಂದು ಜೋಶಿ ತಿಳಿಸಿದರು.

Follow Us:
Download App:
  • android
  • ios