ಸುಳ್ಳು ಸುದ್ದಿ ಹಂಚುವ ಕಾಂಗ್ರೆಸ್ ಮುಖಂಡರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಡಿಕೆಶಿ ಮತ್ತು ಇತರರ ಜಗಳವಿದೆ. ಸರ್ಕಾರ ಸರಿಯಾಗಿ ನಡೆಸಲು ಆಗುತ್ತಿಲ್ಲ. ಅನಗತ್ಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರೆಸುತ್ತಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

Union Minister Pralhad Joshi Slams Congress Leaders grg

ಧಾರವಾಡ(ಮಾ.28):  ಯುಪಿಎ ಸರ್ಕಾರಕ್ಕಿಂತ ಹೆಚ್ಚು ಅನುದಾನವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ. ಇಷ್ಟಾಗಿಯೂ ಕಾಂಗ್ರೆಸ್ ಮುಖಂಡರು ಸುಳ್ಳು ಸುದ್ದಿ ಜನರಿಗೆ ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕೋಲಾರದ ಐವರು ಕೈ ಶಾಸಕರ ರಾಜೀನಾಮೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಡಿಕೆಶಿ ಮತ್ತು ಇತರರ ಜಗಳವಿದೆ. ಸರ್ಕಾರ ಸರಿಯಾಗಿ ನಡೆಸಲು ಆಗುತ್ತಿಲ್ಲ. ಅನಗತ್ಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರೆಸುತ್ತಿದ್ದಾರೆ. ಶೇ. 75ರಷ್ಟು ಎನ್‌ಡಿಆರ್‌ಎಫ್ ಹಣ ಕೇಂದ್ರ ಸರ್ಕಾರ ಕೊಡುತ್ತದೆ. ಆ ಹಣ ಹಂಚಿ ಬಿಡುಗಡೆ ಮಾಡಿಲ್ಲ. ಅದು ಬಿಟ್ಟು ಕೋರ್ಟ್‌ಗೆ ಹೋಗಿದ್ದಾರೆ. ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಅನಿಸುತ್ತಿದೆ. ಇದು ಜನರಿಗೆ ಮಾತ್ರವಲ್ಲ ಪಕ್ಷದ ಶಾಸಕರಿಗೂ ಅನಿಸಿದೆ ಎಂದ ಅವರು, ಮುಖ್ಯಮಂತ್ರಿ ಒಬ್ಬ ಅಶಕ್ತ ಮುಖ್ಯಮಂತ್ರಿ ಎಂದು ಟೀಕಿಸಿದರು. 

ಲೋಕಸಭೆ ಚುನಾವಣೆ 2024: ಪ್ರಹ್ಲಾದ ಜೋಶಿ ಬದಲಾವಣೆಗೆ ಲಿಂಗಾಯತ ಮಠಾಧೀಶರ ಪಟ್ಟು

ಎಲೆಕ್ಟೋರಲ್ ಬಾಂಡ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಸರ್ಕಾರದಲ್ಲಿತ್ತು. ಆಗ ಎಲ್ಲ ಕ್ಯಾಶ್‌ನಲ್ಲಿಯೇ ನಡೆ ಯುತ್ತಿತ್ತು. ಆಗ ಪ್ರಾಮಾಣಿಕವಾಗಿ ಚುನಾವಣೆ ನಡೆಸುತ್ತಿದ್ದರಾ? ನಾವು ಕಪ್ಪು ಹಣವನ್ನಾದರೂ ಚುನಾವಣೆಯಿಂದ ದೂರ ಇಟ್ಟಿದ್ದೇವೆ. ಬಾಂಡ್ ಕೊಡಲು ಚೆಕ್ ಮೂಲಕ ಹಣ ಕೊಡಬೇಕಾಗುತ್ತದೆ. ಇದು ನಮ್ಮ ಮೊದಲ ಹೆಜ್ಜೆಯಾಗಿತ್ತು. ಈಗ ಸುಪ್ರೀಂಕೋರ್ಟ್ ಹೇಳಿದ್ದನ್ನು ಮಾನ್ಯ ಮಾಡುತ್ತೇವೆ. ಕಾಂಗ್ರೆಸ್‌ಗೆ ಸಹ ಈ 1600 ಕೋಟಿ ಬಾಂಡ್ ಮೂಲಕ ಬಂದಿದೆಯಲ್ಲ ಎಂದು ಸಮರ್ಥನೆ ಮಾಡಿಕೊಂಡರು. 

ನಾವು ಸುಧಾರಣೆ ಮಾದರಿಯಲ್ಲಿ ಮಾಡಿದ್ದೇವೆ. ಸುಪ್ರೀಂಕೋರ್ಟ್ ಹೇಳಿದ್ದನ್ನು ಪಾಲನೆ ಮಾಡಿ ಕೊಂಡು ಹೋಗುತ್ತೇವೆ. ಕಾಂಗ್ರೆಸ್ ಕಾಲದಲ್ಲಿ ಕ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿತ್ತು. ಆಗ ನೀವು ಎಷ್ಟು ತಗೊಂಡಿದ್ದೀರಿ ಎಂದು ಆರೋಪಿಸಿದ ಜೋಶಿ, ಯಂಗ್ ಇಂಡಿಯಾ ಪ್ರಕರಣದಲ್ಲಿ ರಾಹುಲ್, ಸೋನಿಯಾ ಗಾಂಧಿ ಬೇಲ್ ಮೇಲೆ ಇದಾರಲ್ಲ? ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಕೇಂದ್ರ ಸಚಿವ ಜೋಶಿ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios